New Rules: ಸೆಪ್ಟೆಂಬರ್ 1 ರಿಂದ ಬದಲಾಗಲಿದೆ ಈ ಎಲ್ಲಾ ನಿಯಮಗಳು, ಕೈ ಖಾಲಿಯುಗುವುದು ಖಂಡಿತ.

ಸೆಪ್ಟೆಂಬರ್ ಒಂದರಿಂದ ಜಾರಿಗೆ ಬರಲಿದೆ ಈ ಎಲ್ಲ ನಿಯಮಗಳು.

New Rules From September 1st: ಸರ್ಕಾರ ಪ್ರತಿ ತಿಂಗಳ ಆರಂಭದಲ್ಲಿ ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಿರುತ್ತದೆ. ಇದೀಗ ನಾವು ಆಗಸ್ಟ್ ತಿಂಗಳ ಕೊನೆಯಲ್ಲಿದ್ದೇವೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಇದೀಗ ಮುಂದಿನ ತಿಂಗಳು ಯಾವೆಲ್ಲ ನಿಯಮಗಳು ಬದಲಾಗಲಿವೆ ಎಂದು ಮಾಹಿತಿ ತಿಳಿಯೋಣ.

LPG Gas Cylinder Price updates
Image Credit: Thequint

ಸೆಪ್ಟೆಂಬರ್ 1 ರಿಂದ ಬದಲಾಗುವ ನಿಯಮಗಳು
LPG ಗ್ಯಾಸ್ ಸಿಲಿಂಡರ್ ಬೆಲೆ
ಪ್ರತಿ ತಿಂಗಳ ಮೊದಲ ದಿನದಂದು ತೈಲ ಕಂಪನಿ LPG ಗ್ಯಾಸ್ ಸಿಲಿಂಡರ್ ಬೆಲೆ ಯನ್ನು ನಿಗದಿ ಮಾಡುತ್ತದೆ. ಈಗಾಗಲೇ ಗ್ಯಾಸ್ ಬೆಲೆ ಗಗನಕ್ಕೆ ಏರಿದ್ದು, ಗ್ರಾಹಕರಿಗೆ ಸಿಲಿಂಡರ್ ಖರೀದಿ ಮಾಡುವುದು ಕಷ್ಟಕರವಾಗಿದೆ. ಇದೀಗ ನಾವು ಮುಂದಿನ ತಿಂಗಳು LPG ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಾಗುತ್ತದೆಯೇ ಅಥವಾ ಕಡಿಮೆಯಾಗುತ್ತದೆಯೇ ಎಂಬುದನ್ನು ಕಾದುನೋಡಬೇಕು.

Only one month left to exchange or deposit Rs 2000 notes.
Image Credit: NDTV

2000 ನೋಟುಗಳ ವಿನಿಮಯ
RBI 2023 ಮೇ 19 ರಂದು 2000 ನೋಟುಗಳನ್ನು ಹಿಂಪಡೆಯುದಾಗಿ ಘೋಷಣೆ ಹೊರಡಿಸಿತ್ತು ಅದಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 30 ರವರೆಗೆ ನೋಟುಗಳನ್ನು ಬ್ಯಾಂಕ್ ಗಳಲ್ಲಿ ಠೇವಣಿ ಅಥವಾ ವಿನಿಮಯ ಮಾಡಿಕೊಳ್ಳಬಹುದು ಎಂದು RBI ಮಾಹಿತಿ ನೀಡಿತ್ತು. ಇದೀಗ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ವಿನಿಮಯ ಅಥವಾ ಠೇವಣಿ ಮಾಡಲು ಕೇವಲ ಒಂದು ತಿಂಗಳು ಬಾಕಿ ಇದೆ.

Aadhar card free update last date
Image Credit: Navi

ಉಚಿತ ಆಧಾರ್ ನವೀಕರಣಕ್ಕೆ ಅವಕಾಶ
ಮಾರ್ಚ್ 15 ರಿಂದ ಜೂನ್ 14 ರ ವರೆಗೆ ಇದ್ದ ಉಚಿತ ಆಧಾರ್ ನವೀಕರಣದ ದಿನಾಂಕವನ್ನು ಸೆಪ್ಟೆಂಬರ್ 14 ಕ್ಕೆ ಮುಂದೂಡಲಾಗಿತ್ತು. ಇದೀಗ ಉಚಿತ ಆಧಾರ್ ನವೀಕರಣದ ಗಡುವು ಇನ್ನೇನು ಕೆಲವೇ ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ.

September 15 is the last date for payment of second advance tax.
Image Credit: News18

ಆದಾಯ ತೆರಿಗೆ ಪಾವತಿ
ಆದಾಯ ಹೆಚ್ಚಿಗೆ ಪಾವತಿ ಮಾಡುವವರು ಈಗಾಗಲೇ ಆದಾಯ ತೆರಿಗೆ ಪಾವತಿಸಿರುತ್ತಾರೆ. ಎರಡನೇ ಮುಂಗಡ ತೆರಿಗೆ ಪಾವತಿಸಲು ಸೆಪ್ಟೆಂಬರ್ 15 ಕೊನೆಯ ದಿನಾಂಕ ಆಗಿದೆ.

Join Nadunudi News WhatsApp Group

IDBI Amrit Mahotsav FD Scheme
Image Credit: Rightsofemployees

ಐಡಿಬಿಐ ಅಮೃತ್ ಮಹೋತ್ಸವ ಎಫ್ ಡಿ ಯೋಜನೆ
IDBI ಬ್ಯಾಂಕ್ ಹಿರಿಯ ನಾಗರೀಕರಿಗಾಗಿ ವಿಶೇಷ ಸ್ಥಿರ ಠೇವಣಿ ಯೋಜನೆ ಅಡಿಯಲ್ಲಿ ಎರಡು ವರ್ಷದ ಅವಧಿಗೆ 7.10 ರಿಂದ 7.65 ರವರೆಗೆ ಬಡ್ಡಿದರ ನೀಡುತ್ತಿದೆ, ವಿಶೇಷ ಸ್ಥಿರ ಠೇವಣಿ ಯೋಜನೆಯನ್ನು ಅಮೃತ ಮಹೋತ್ಸವಕ್ಕೆ ಸೇರುವ ಗಡುವನ್ನು ವಿಸ್ತರಿಸಿದೆ. ಈ ಯೋಜನೆಯಡಿ ಸಾಮಾನ್ಯ ವ್ಯಕ್ತಿಗಳಿಗೆ ಹೋಲಿಸಿದರೆ ಹಿರಿಯ ನಾಗರಿಕರು ಹೆಚ್ಚಿನ ಬಡ್ಡಿಯನ್ನು ಪಡೆಯಬಹುದು.

SBI WeCare Fixed Deposit Scheme
Image Credit: Moneycontrol

SBI ವೀಕೇರ್ ಪಿಕ್ಸೆಟ್ ಡೆಪಾಸಿಟ್ ಸ್ಕೀಮ್
ಇತ್ತೀಚಿಗೆ ಎಸ್ ಬಿಐ ಹಿರಿಯ ನಾಗರಿಕರಿಗೆ ಎಸ್ ಬಿಐ ವೀಕೇರ್ ಪಿಕ್ಸೆಟ್ ಡೆಪಾಸಿಟ್ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಲ್ಲಿ 5 ವರ್ಷಗಳು ಮತ್ತು ಅದಕ್ಕಿಂತ ಹೆಚ್ಚಿನ ಅವಧಿಯ FD ಅಲ್ಲಿ 50 ಬಿಪಿಎಸ್ ಹೆಚ್ಚುವರಿ ಪ್ರೀಮಿಯಂ ಅನ್ನು ಪಾವತಿಸಲಾಗುತ್ತದೆ. ಎಸ್ ಬಿಐ ಇದರ ಗಡುವನ್ನು ಸೆಪ್ಟೆಂಬರ್ 30 ರ ವರೆಗೆ ವಿಸ್ತರಿಸಿದೆ.

Join Nadunudi News WhatsApp Group