GST New Rule: ಇಂದಿನಿಂದ ಜಾರಿಗೆ ಬರಲಿದೆ ಹೊಸ GST ನಿಯಮ, ವ್ಯವಹಾರ ಮಾಡುವವರ ಗಮನಕ್ಕೆ.

ಪ್ರತಿ ತಿಂಗಳು GST ಪಾವತಿ ಮಾಡುವ ಹೊಸ ನಿಯಮವನ್ನ ಜಾರಿಗೆ ತರಲಾಗಿದೆ.

GST New Rule Emplement: ಇತ್ತೀಚಿಗೆ ತೆರೆಗೆ ಸಂಬಂಧಿತ ಸಾಕಷ್ಟು ಅಪ್ಡೇಟ್ ಗಳು ಹೊರಬೀಳುತ್ತಿವೆ. ಏಪ್ರಿಲ್ 1 ರಿಂದ ಹೊಸ ಹಣಕಾಸು ವರ್ಷ (New Financial Year) ಆರಂಭಗೊಂಡಿದೆ. ಈ ಹಿನ್ನಲೆಯಲ್ಲಿ ಸಾಕಷ್ಟು ನಿಯಮಗಳು ಬದಲಾಗಿವೆ. ಈ ಬಾರಿಯ ಹಣಕಾಸು ವರ್ಷವೂ ಬಾರಿ ಹಣದುಬ್ಬರದ ಪರಿಸ್ಥಿಯನ್ನು ನೀಡಿದೆ. ಇನ್ನು ಹಣಕಾಸು ವರ್ಷದ ಆರಂಭದ ಕಾರಣ ಹಣಕಾಸು ವ್ಯವಹಾರಗಳು ಸಾಕಷ್ಟು ಬದಲಾಗಿವೆ.

ಇನ್ನು ಮೇ 1 ರಿಂದ ಕೂಡ ಅನೇಕ ನಿಯಮಗಳು ಬದಲಾಗಲಿವೆ. ಜಿಎಸ್ ಟಿ (GST) ನೆಟ್ವರ್ಕ್ ವಹಿವಾಟುಗಳಿಗೆ ಸಂಬಂಧಿಸಿದಂತೆ ಸಾಕಷ್ಟು ನಿಯಮಗಳಲ್ಲಿ ಬದಲಾವಣೆ ಆಗಿದೆ. ಪ್ರತಿ ತಿಂಗಳು GST ಪಾವತಿ ಮಾಡುವ ಜನರಿಗೆ ಹೊಸ ನಿಯಮವನ್ನ ಜಾರಿಗೆ ತರಲಾಗಿದ್ದು GST ಪಾವತಿ ಮಾಡುವ ಜನರು ಈ ಹೊಸ ನಿಯಮ ತಿಳಿದುಕೊಳ್ಳುವುದು ಅತ್ಯವಶ್ಯಕವಾಗಿದೆ. 

GST New Rule Emplement
Image Source: ETV Bharath

GTS ಯಲ್ಲಿ ಮೇ 1 ರಿಂದ ಹೊಸ ನಿಯಮ
ಮೇ 1 ರಿಂದ ಜಿಎಸ್ ಟಿ ಕಟ್ಟುವಲ್ಲಿ ಬದಲಾವಣೆ ಆಗಲಿದೆ. GSTIN ಪ್ರಕಾರ, ಯಾವುದೇ ವಹಿವಾಟಿನ ರಸೀದಿಯನ್ನು ಇನ್ ವಾಯ್ಸ್ ನೋಂದಣಿ ಪೋರ್ಟಲ್ ನಲ್ಲಿ (IRP) ಏಳು ದಿನಗಳೊಳಗೆ ಅಪ್ಲೋಡ್ ಮಾಡುವುದು ಅವಶ್ಯಕವಾಗಿದೆ. ಜಿಎಸ್ ಟಿ ಅನುಸರಣೆಯ ಸಕಾಲಿಕ ಅನುಸರಣೆಗಾಗಿ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ. ಮೇ 1 ರಿಂದ ಈ ನಿಯಮಗಳು ಜಾರಿಗೊಳ್ಳಲಿದೆ.

GST New Rule Emplement
Image Soource: Times Of India

ಇಂದಿನಿಂದ ಜಾರಿಗೆ ಬರಲಿದೆ ಹೊಸ GST ನಿಯಮ
*ಜಿಎಸ್ ಟಿ ನೆಟ್ ವರ್ಕ್ ಒಟ್ಟು ವಾರ್ಷಿಕ ವಹಿವಾಟು 100 ಕೋಟಿ ರೂ. ಗಿಂತ ಹೆಚ್ಚು ಅಥವಾ ಸಮಾನವಾಗಿರುವ ತೆರಿಗೆದಾರರಿಗೆ ಇ- ಇನ್ವಾಯ್ಸ್ ಐಆರ್ ಪಿ ಪೋರ್ಟಲ್ ನಲ್ಲಿ ಹಳೆಯ ಇನ್ ವಾಯ್ಸ್ ಗಳನ್ನೂ ವರದಿ ಮಾಡಲು ಸಮಯ ಮಿತಿಯನ್ನು ವಿಧಿಸಲು ಸರ್ಕಾರ ನಿರ್ಧರಿಸಿದೆ.
*ಈ ಬದಲಾವಣೆ ಇನ್ ವಾಯ್ಸ್ ಗೆ ಅನ್ವಯಿಸುತ್ತದೆ ಮತ್ತು ಡೆಬಿಟ್ ಮತ್ತು ಕ್ರೆಡಿಟ್ ಟಿಪ್ಪಣಿಗಳನ್ನು ವರದಿ ಮಾಡಲು ಯಾವುದೇ ಸಮಯದ ನಿರ್ಬಂಧ ಇರುವುದಿಲ್ಲ.

*ಇನ್ ವಾಯ್ಸ್ ನೋಂದಣಿ ಪೋರ್ಟಲ್ ನಲ್ಲಿ ನಿರ್ಮಿಸಲಾದ ಮೌಲ್ಯಿಕರಣ ವ್ಯವಸ್ಥೆಯು 7 ದಿನದ ವಿಂಡೋದ ನಂತರ ಇನ್ ವಾಯ್ಸ್ ಅನ್ನು ವರದಿ ಮಾಡುವುದನ್ನು ಬಳಕೆದಾರರಿಗೆ ಅನುಮತಿಸುವುದಿಲ್ಲ.

Join Nadunudi News WhatsApp Group

*ತೆರಿಗೆದಾರರು ಹೊಸ ನಿಯಮದ ಮಿತಿಯಿಂದ ಒದಗಿಸಲಾದ 7 ದಿನಗಳ ವಿಂಡೋದೊಳಗೆ ಇನ್ ವಾಯ್ಸ್ ಅನ್ನು ವರದಿ ಮಾಡುವುದನ್ನು ಖಚಿತಪಡಿಸಿಕೊಳ್ಳುವುದು ಅಗತ್ಯ ಎಂದು GSTIN ಮಾಹಿತಿ ನೀಡಿದೆ.
*ಹೊಸ ನಿಯಮದ ಪ್ರಕಾರ, IRP ನಲ್ಲಿ ಇನ್ ವಾಯ್ಸ್ ಗಳನ್ನೂ ಅಪ್ಲೋಡ್ ಮಾಡದಿದ್ದಲ್ಲಿ ವ್ಯವಹಾರಗಳು ಇನ್ ಪುಟ್ ತೆರಿಗೆ ಕ್ರೆಡಿಟ್ ಅನ್ನು ಪಡೆಯಲು ಸಾಧ್ಯವಿಲ್ಲ.

GST New Rule Emplement
Image Source: News18

Join Nadunudi News WhatsApp Group