Television Network: ಮನೆಯಲ್ಲಿ TV ಬಳಸುವ ಎಲ್ಲರಿಗೂ ಹೊಸ ನಿಯಮ, ಟೆಲಿವಿಷನ್ ನೆಟ್ವರ್ಕ್ ನಲ್ಲಿ ದೊಡ್ಡ ಬದಲಾವಣೆ.

ಟಿವಿ ನೆಟ್ವರ್ಕ್ ಮೇಲೆ ಹೊಸ ನಿಯಮವನ್ನ ಜಾರಿಗೆ ತರಲಾಗಿದೆ.

Television Network New Update: ಪ್ರಸ್ತುತ Electronic ವಸ್ತುಗಳ ಬಳಕೆ ಹೆಚ್ಚುತ್ತಲೇ ಇದೆ. ಪ್ರತಿ ಮನೆಯಲ್ಲಿ ಯಾವುದಾದರು Electronic ವಸ್ತುಗಳು ಇದ್ದೆ ಇರುತ್ತದೆ. ಅದರಲ್ಲೂ Smartphone, Laptop, TV ಸೇರಿದಂತೆ ಇನ್ನಿತರ ಇಲೆಕ್ಟ್ರಾನಿಕ್ ವಸ್ತುಗಳ ಬಳಕೆ ಇರುವುದು ಸಹಜ. ಇನ್ನು ಮನೆ ಎಂದ ಮೇಲೆ ಒಂದು TV ಇರಬೇಕು. ಟೈಮ್ ಪಾಶ್ ಮಾಡಲು ಹೆಚ್ಚಿನ ಜನರು TV ನೋಡಲು ಇಷ್ಟಪಡುತ್ತಾರೆ.

ಮೊಬೈಲ್ ನೋಡಿ ನೋಡಿ ಬೋರ್ ಆದಾಗ, ಮೊಬೈಲ್ ನೆಟ್ ಪ್ಯಾಕ್ ಖಾಲಿ ಆದಾಗ ಟಿವಿ ನೋಡುವುದು ಅಭ್ಯಾಸವಾಗಿರುತ್ತದೆ. ಸದ್ಯ ಮನೆಯಲ್ಲಿ TV ಬಳಸುವವರಿಗೆ ಹೊಸ ನಿಯಮವೊಂದು ಪರಿಚಯಿಸಲಾಗಿದೆ. ಸದ್ಯ ಟೆಲಿವಿಷನ್ ನೆಟ್ವರ್ಕ್ ನಲ್ಲಿ ದೊಡ್ಡ ಬದಲಾವಣೆ ತರಲಾಗಿದೆ. ನಿಮ್ಮ ಮನೆಯಲ್ಲಿ TV ಇದ್ದರೆ ಈ ಮಾಹಿತಿ ನಿಮಗೆ ಉಪಯುಕ್ತವಾಗಲಿದೆ.

 

ಮನೆಯಲ್ಲಿ TV ಬಳಸುವ ಎಲ್ಲರಿಗೂ ಹೊಸ ನಿಯಮ
ಮಾಹಿತಿ ಪ್ರಸಾರ ಸಚಿವಾಲಯವು (MIB) ಕೇಬಲ್ ಟೆಲಿವಿಷನ್ ನೆಟ್‌ ವರ್ಕ್‌ ಗಳ ಕಾಯಿದೆ 1994 ಗೆ ಒಂದು ಪ್ರಮುಖ ತಿದ್ದುಪಡಿಯನ್ನು ಮಾಡಿದೆ. ಈ ನಿಟ್ಟಿನಲ್ಲಿ ಅಧಿಸೂಚನೆಯನ್ನು ಹೊರಡಿಸಲಾಗಿದೆ, ಅದರ ಪ್ರಕಾರ ಮಲ್ಟಿ ಸಿಸ್ಟಮ್ ಆಪರೇಟರ್‌ ಗಳಿಗೆ (MSOs) ನೋಂದಣಿ 10 ವರ್ಷಗಳ ಅವಧಿಗೆ ಪ್ರಾರಂಭವಾಗುತ್ತದೆ. ಬ್ರಾಡ್‌ ಬ್ಯಾಂಡ್ ಕಂಪನಿಗಳು ಸಹ ಈ ನೋಂದಣಿಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ.

Image Credit: Original Source

ಟೆಲಿವಿಷನ್ ನೆಟ್ವರ್ಕ್ ನಲ್ಲಿ ದೊಡ್ಡ ಬದಲಾವಣೆ
ಇನ್ನು MSO ಗಳು ಟಿವಿ ಕೇಬಲ್ ವ್ಯವಸ್ಥೆಯನ್ನು ನಿರ್ವಹಿಸುವ ಕಂಪನಿಗಳಾಗಿವೆ. ದೇಶದಲ್ಲಿ ಸುಮಾರು 115 MSO ಆಪರೇಟರ್‌ಗಳು ಇದ್ದಾರೆ. ಹೊಸ ತಿದ್ದುಪಡಿಯು ಬ್ರಾಡ್‌ ಬ್ಯಾಂಡ್ ಸೇವಾ ಪೂರೈಕೆದಾರರೊಂದಿಗೆ ಕೇಬಲ್ ಆಪರೇಟರ್‌ ಗಳು ಮೂಲಸೌಕರ್ಯಗಳನ್ನು ಹಂಚಿಕೊಳ್ಳುವ ನಿಬಂಧನೆಯನ್ನು ಹೊಂದಿದೆ.

Join Nadunudi News WhatsApp Group

ಅಂದರೆ ಈಗ ಬ್ರಾಡ್‌ ಬ್ಯಾಂಡ್ ಸೇವೆಗಳನ್ನು ಒದಗಿಸುವ ಕಂಪನಿಗಳು ಕೇಬಲ್ ಟಿವಿ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗುತ್ತದೆ. ಈಗ ಬ್ರಾಡ್‌ ಬ್ಯಾಂಡ್ ಮತ್ತು ಕೇಬಲ್ ಆಪರೇಟರ್ ಕಂಪನಿಗಳು ಒಟ್ಟಾಗಿ ಕೆಲಸ ಮಾಡಲಿವೆ.ಇದರ ಮೂಲಕ MSO ನ ನೋಂದಣಿಯು 10 ವರ್ಷಗಳ ಅವಧಿಗೆ ಇರುತ್ತದೆ. ನಿಯಮಗಳ ಪ್ರಕಾರ ನೋಂದಣಿ ನವೀಕರಣಕ್ಕೆ 1 ಲಕ್ಷ ರೂ.ಗಳ ಸಂಸ್ಕರಣಾ ಶುಲ್ಕವನ್ನು ಇರಿಸಲಾಗಿದೆ.

Join Nadunudi News WhatsApp Group