Sim Rules: ಸಿಮ್ ಕಾರ್ಡ್ ಖರೀದಿಸುವಾಗ ಈ ತಪ್ಪು ಮಾಡಿದರೆ 3 ವರ್ಷ ಜೈಲು ಮತ್ತು 2 ಕೋಟಿ ದಂಡ, ಕೇಂದ್ರದ ಆದೇಶ

ಮೊಬೈಲ್ ಸಿಮ್ ಕಾರ್ಡ್ ಖರೀದಿ ಮಾಡಲು ಈ ನಿಯಮ ಪಾಲಿಸಲೇಬೇಕು, ಇಲ್ಲವಾದಲ್ಲಿ ಜೈಲು ಶಿಕ್ಷೆ ಕಡ್ಡಾಯ

SIM Card Rules Updated 2024: ದೇಶದಲ್ಲಿ ಸಿಮ್ ಕಾರ್ಡ್ (SIM card) ಮಾರಾಟ ಮಾಡುವ ಕುರಿತು ಹಾಗು ಖರೀದಿ ಮಾಡುವ ಕುರಿತು ಕಟ್ಟುನಿಟ್ಟಿನ ಕ್ರಮವನ್ನು ಜಾರಿಗೆ ತರಲಾಗಿದೆ. ಈ ಹಿಂದೆ ಯಾವುದಾದರು ಒಂದು ಗುರುತಿನ ಚೀಟಿ ನೀಡಿ ಎಷ್ಟು ಬೇಕಾದರೂ ಸಿಮ್ ಕಾರ್ಡ್ ಖರೀದಿ ಮಾಡಬಹುದಾಗಿತ್ತು. ಆದರೆ ಇನ್ನುಮುಂದೆ ಹಾಗೆ ಮಾಡಲು ಸಾಧ್ಯವಿಲ್ಲ.

ಇನ್ನುಮುಂದೆ ಮೊಬೈಲ್ ಸಿಮ್ ಖರೀದಿ ಮಾಡೋದಕ್ಕೆ ಬಯೋಮೆಟ್ರಿಕ್ ಅನ್ನು ಕಡ್ಡಾಯಗೊಳಿಸುವಂತ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ. ಈ ನಿಯಮವನ್ನು ಪಾಲಿಸದೇ ಇದ್ದರೆ ದಂಡ ಹಾಗು ಶಿಕ್ಷೆಯನ್ನು ಸಹ ವಿಧಿಸಲಾಗುವುದು .

SIM Card Rules Change
Image Credit: Beebom

ಸಿಮ್ ಕಾರ್ಡ್ ಖರೀದಿಗೆ ಬಯೋ ಮೆಟ್ರಿಕ್ ಕಡ್ಡಾಯ

ದಿನದಿಂದ ದಿನಕ್ಕೆ ಸಿಮ್ ಕಾರ್ಡ್ ವಂಚನೆ, ಸ್ಕ್ಯಾಮೆರ್ಸ್ ಮೋಸದ ಜಾಲ ಇವುಗಳ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜನ ಸಾಮಾನ್ಯರು ವಂಚನೆಗೆ ಒಳಗಾಗಿ ತಮ್ಮ ಹಣಗಳನ್ನ್ನೆಲ್ಲ ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ ಇನ್ನುಮುಂದೆ ಇಂತಹ ಕಾನೂನು ಬಾಹಿರ ಅಪರಾಧಗಳನ್ನು ತಡೆಗಟ್ಟುವ ಉದ್ದೇಶವಾಗಿ ಮೊಬೈಲ್ ಸಿಮ್ ಕಾರ್ಡ್ ಖರೀದಿಸುವ ಗ್ರಾಹಕರಿಗೆ ಬಯೋ ಮೆಟ್ರಿಕ್ ಕಡ್ಡಾಯಗೊಳಿಸುವ ದೂರ ಸಂಪರ್ಕ ಮಸೂದೆ-2023 ಅನ್ನು ಸೋಮವಾರದಂದು ಲೋಕಸಭೆಯಲ್ಲಿ ಕೇಂದ್ರ ದೂರಸಂಪರ್ಕ ಸಚಿವೆ ಅಶ್ವಿನಿ ವೈಷ್ಣವ್ ಮಂಡಿಸಿದ್ದಾರೆ.

SIM Card Rules Updated 2024
Image Credit: Newsinfo

ನಿಯಮ ಉಲ್ಲಂಘನೆಗೆ ಶಿಕ್ಷೆ ಹಾಗು ದಂಡ ವಿಧಿಸಲಾಗುವುದು

Join Nadunudi News WhatsApp Group

ಮೊಬೈಲ್ ಸಿಮ್ ಕಾರ್ಡ್ ಖರೀದಿಸುವ ಗ್ರಾಹಕರಿಗೆ ಬಯೋ ಮೆಟ್ರಿಕ್ ಕಡ್ಡಾಯಗೊಳಿಸಿದ್ದು, ಟೆಲಿಪೋನ್ ಕದ್ದಾಲಿಕೆಗೆ 3 ವರ್ಷ ಜೈಲು ಹಾಗೂ 2 ಕೋಟಿ ರೂ ದಂಡ ವಿಧಿಸೋದು ಈ ಮಸೂದೆಯಲ್ಲಿ ಒಳಗೊಂಡಿದೆ. ಅಲ್ಲದೇ ತುರ್ತು ಸಂದರ್ಭದಲ್ಲಿ ಟೆಲಿಕಾಂ ಕಂಪನಿಯ ಮೊಬೈಲ್ ನೆಟ್ವರ್ಕ್ ಅನ್ನು ಜಪ್ತಿ ಮಾಡುವ ಅಧಿಕಾರವನ್ನು ಸರ್ಕಾರಕ್ಕೆ ನೀಡುವ ಅಂಶವೂ ಒಳಗೊಂಡಿದೆ. ಈ ಒಂದು ನಿಯಮದಿಂದ ಇನ್ನುಮುಂದೆ ವಂಚನೆಗಳು ಕಡಿಮೆ ಆಗಬಹುದು .

Join Nadunudi News WhatsApp Group