GST Update: ತೆರಿಗೆ ನಿಯಮದಲ್ಲಿ ಐತಿಹಾಸಿಕ ಬದಲಾವಣೆ, ಇಂತವರು ಕಡ್ಡಾಯವಾಗಿ 28% ಟ್ಯಾಕ್ಸ್ ಕಟ್ಟಬೇಕು.

ಪ್ರತಿ ತಿಂಗಳು GST ಪಾವತಿ ಮಾಡುವ ಜನರಿಗೆ ಹೊಸ ನಿಯಮ.

New Tax Rule For Tax Payers: ಇನ್ನು 2023 April 1 ರಿಂದ ತೆರೆಗೆ ಸಂಬಂಧಿತ ಸಾಕಷ್ಟು ಅಪ್ಡೇಟ್ ಗಳು ಹೊರಬೀಳುತ್ತಿವೆ. ಹಾಗೆಯೆ Goods And Service Tax (GST) ನೆಟ್ವರ್ಕ್ ವಹಿವಾಟುಗಳಿಗೆ ಸಂಬಂಧಿಸಿದಂತೆ ಸಾಕಷ್ಟು ನಿಯಮಗಳಲ್ಲಿ ಬದಲಾವಣೆ ಆಗಿದೆ. ಪ್ರತಿ ತಿಂಗಳು GST ಪಾವತಿ ಮಾಡುವ ಜನರಿಗೆ ಹೊಸ ನಿಯಮವನ್ನ ಜಾರಿಗೆ ತರಲಾಗಿದ್ದು GST ಪಾವತಿ ಮಾಡುವ ಜನರು ಈ ಹೊಸ ನಿಯಮ ತಿಳಿದುಕೊಳ್ಳುವುದು ಅತ್ಯವಶ್ಯಕವಾಗಿದೆ. 

ಸದ್ಯ GST ಪಾವತಿಯಲ್ಲಿ ಬಹುದೊಡ್ಡ ನವೀಕರಣವನ್ನು ತರಲಾಗಿದೆ. ಆನ್‌ಲೈನ್ ಗೇಮಿಂಗ್, ಕ್ಯಾಸಿನೊ ಮತ್ತು ಕುದುರೆ ರೇಸಿಂಗ್ ಕುರಿತು ಸರ್ಕಾರ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದೆ. ಇದೀಗ GST ನಿಯಮದಲ್ಲಿ ಅದ ಬದಲಾವಣೆಯ ಬಗ್ಗೆ ಮಾಹಿತಿ ತಿಳಿಯೋಣ.

New Tax Rule For Tax Payers
Image Credit: Cnbctv18

ತೆರಿಗೆ ನಿಯಮದಲ್ಲಿ ಐತಿಹಾಸಿಕ ಬದಲಾವಣೆ
ಇ-ಗೇಮಿಂಗ್, ಕ್ಯಾಸಿನೊ ಮತ್ತು ಕುದುರೆ ಸವಾರಿಗಾಗಿ GST ಕಾನೂನಿನ ತಿದ್ದುಪಡಿ ನಿಬಂಧನೆಗಳ ಅನುಷ್ಠಾನಕ್ಕಾಗಿ ಹಣಕಾಸು ಸಚಿವಾಲಯವು ಅಕ್ಟೋಬರ್ 1 ರಂದು ದಿನಾಂಕವನ್ನು ಸೂಚಿಸಿದೆ. ಕೇಂದ್ರ GST ಕಾಯಿದೆಯಲ್ಲಿನ ತಿದ್ದುಪಡಿಗಳ ಪ್ರಕಾರ, ಇ-ಗೇಮಿಂಗ್, ಕ್ಯಾಸಿನೊ ಮತ್ತು ಕುದುರೆ ಸವಾರಿಗಳನ್ನು ಲಾಟರಿ, ಬೆಟ್ಟಿಂಗ್ ಮತ್ತು ಜೂಜಾಟದಂತಹ ಕ್ರಿಯಾತ್ಮಕ ಕ್ಲೈಮ್‌ ಗಳು ಎಂದು ಪರಿಗಣಿಸಲಾಗುತ್ತದೆ. ಹಾಗೆಯೆ ಇತಹವುಗಳಿಗೆ 28 % GST ವಿಧಿಸಲಾಗುತ್ತದೆ.

October 1 ರಿಂದ ಹೊಸ ನಿಯಮ ಜಾರಿ
ಇನ್ನು ದೇಶದಲ್ಲಿ October 1 ರಿಂದ ಹೊಸ ನಿಯಮ ಜಾರಿಗೆ ಬರಲಿದೆ. ಇನ್ನು ಅನೇಕ ರಾಜ್ಯಗಳು ತಮ್ಮ ರಾಜ್ಯ GST ಕಾನೂನುಗಳಿಗೆ ಇನ್ನೂ ತಿದ್ದುಪಡಿಗಳನ್ನು ಅಂಗೀಕರಿಸದ ಕಾರಣ, ಕೇಂದ್ರ ಸರ್ಕಾರದ ಈ ಅಧಿಸೂಚನೆಯು CGST ಮತ್ತು IGST ಕಾನೂನುಗಳಲ್ಲಿ ಗೊಂದಲವನ್ನು ಸೃಷ್ಟಿಸುತ್ತದೆ ಎಂದು ಇ-ಗೇಮಿಂಗ್ ಕಂಪನಿಗಳು ಹೇಳಿವೆ.

GST new rule
Image Credit: Viralbake

ಇಂತವರು ಕಡ್ಡಾಯವಾಗಿ 28% ಟ್ಯಾಕ್ಸ್ ಕಟ್ಟಬೇಕು
Integrated Goods And Service Tax ಕಾಯ್ದೆಯ ತಿದ್ದುಪಡಿಯು ಆಫ್‌ ಶೋರ್ ಆನ್‌ ಲೈನ್ ಗೇಮಿಂಗ್ ಪ್ಲಾಟ್‌ ಫಾರ್ಮ್‌ಗಳು ಭಾರತದಲ್ಲಿ ನೋಂದಾಯಿಸಲು ಮತ್ತು ದೇಶೀಯ ಕಾನೂನಿನ ಪ್ರಕಾರ 28 ಪ್ರತಿಶತ ತೆರಿಗೆಯನ್ನು ಪಾವತಿಸಲು ಕಡ್ಡಾಯಗೊಳಿಸಿದೆ. ಆನ್‌ ಲೈನ್ ಗೇಮಿಂಗ್, ಕ್ಯಾಸಿನೋಗಳು ಮತ್ತು ಕುದುರೆ ರೇಸಿಂಗ್‌ ಗಳನ್ನು ತೆರಿಗೆ ವಿಧಿಸಬಹುದಾದ ಕ್ಲೈಮ್‌ಗಳಾಗಿ ಸೇರಿಸಲಾಗಿದೆ ಮತ್ತೂ ಇಂತವುಗಳಿಗೆ ಶೇ. 28 ರಷ್ಟು ಟ್ಯಾಕ್ಸ್ ವಿಧಿಸಲಾಗಿದೆ. ಇಂದಿನಿಂದಲೇ ಈ ಹೊಸ GST ನಿಯಮ ಜಾರಿಯಾಗಲಿದೆ.

Join Nadunudi News WhatsApp Group

Join Nadunudi News WhatsApp Group