Tax System: ಪ್ರತಿ ವರ್ಷ 7.5 ಲಕ್ಷ ವ್ಯವಹಾರ ಅಥವಾ ಚೆಕ್ ನೀಡಿದರೆ ಎಷ್ಟು ತೆರಿಗೆ ಕಟ್ಟಬೇಕು…? ಇಲ್ಲಿದೆ ಡೀಟೇಲ್ಸ್.

ಪ್ರತಿ ವರ್ಷ 7.5 ಲಕ್ಷಕ್ಕಿಂತ ಹೆಚ್ಚು ವ್ಯವಹಾರ ಮಾಡಿದರೆ ಎಷ್ಟು ತೆರಿಗೆ ಕಟ್ಟಬೇಕಾಗುತ್ತದೆ...? ಇಲ್ಲಿದೆ ಡೀಟೇಲ್ಸ್

New Tax System: ಆದಾಯ ಇಲಾಖೆಯು ITR ಸಲ್ಲಿಕೆಗೆ ಎರಡು ಆಯ್ಕೆಗಳನ್ನು ನೀಡುತ್ತದೆ. ಹೊಸ ಆದಾಯ ತೆರಿಗೆ ಪದ್ಧತಿ ಹಾಗೂ ಹಳೆಯ ಆದಾಯ ತೆರಿಗೆ ಪದ್ದತಿಯ ಎರಡು ಆಯ್ಕೆಗಳಲ್ಲಿ ತೆರಿಗೆ ಪಾವತಿದಾರರು ತಮ್ಮ ಇಚ್ಛೆಗೆ ಅನುಗುಣವಾದ ಆಯ್ಕೆಯನ್ನು ಮಾಡಿಕೊಂಡು ITR ಅನ್ನ ಸಲ್ಲಿಸಬಹುದು.

ನೀವು ಹಳೆಯ ತೆರಿಗೆ ಪದ್ದತಿಯ ಆಯ್ಕೆಯಲ್ಲಿ ITR ಸಲ್ಲಿಕೆಗೆ ಮುಂದಾದರೆ ಕೆಲವು ಹೂಡಿಕೆಯ ದಾಖಲೆಗಳನ್ನು ನೀಡುವ ಮೂಲಕ ತೆರಿಗೆ ವಿನಾಯಿತಿಯನ್ನು ಪಡೆಯಬಹುದು. ಹೊಸ ತೆರಿಗೆ ಪದ್ದತಿಯಲ್ಲಿ ತೆರಿಗೆ ಕಡಿತದ ಲಾಭ ಲಭ್ಯವಾಗುವುದಿಲ್ಲ ಎನ್ನುವುದು ನಿಮಗೆ ತಿಳಿದಿರಲಿ.

New Tax System
Image Credit: Informal News

ಪ್ರತಿ ವರ್ಷ 7.5 ಲಕ್ಷಕ್ಕಿಂತ ಹೆಚ್ಚು ವ್ಯವಹಾರ ಮಾಡಿದರೆ ಎಷ್ಟು ತೆರಿಗೆ ಕಟ್ಟಬೇಕು…?
2023 ರ ಬಜೆಟ್ ಸಮಯದಲ್ಲಿ, ಕೇಂದ್ರ ಸರ್ಕಾರವು ಹೊಸ ತೆರಿಗೆ ಪದ್ಧತಿಯಲ್ಲಿ ಪ್ರಮುಖ ಬದಲಾವಣೆಯನ್ನು ಮಾಡಿದೆ ಮತ್ತು 7 ಲಕ್ಷದವರೆಗಿನ ಮೊತ್ತವನ್ನು ತೆರಿಗೆ ಮುಕ್ತಗೊಳಿಸುವುದಾಗಿ ಘೋಷಿಸಿತು. ಹಳೆಯ ಮತ್ತು ಹೊಸ ಆದಾಯ ತೆರಿಗೆ ವ್ಯವಸ್ಥೆಗಳಲ್ಲಿ ರೂ. 50 ಸಾವಿರದ ಸ್ಟ್ಯಾಂಡರ್ಡ್ ಡಿಡಕ್ಷನ್ ಪ್ರಯೋಜನವೂ ಲಭ್ಯವಿದೆ.

ಈ ತೆರಿಗೆ ನಿಯಮದ ಪ್ರಕಾರ, ಹೊಸ ತೆರಿಗೆ ಸ್ಲ್ಯಾಬ್‌ ನಲ್ಲಿ 7.50 ಲಕ್ಷ ರೂ.ವರೆಗಿನ ಆದಾಯದ ಮೇಲೆ ಯಾವುದೇ ತೆರಿಗೆ ಇಲ್ಲ. ಆದರೆ ವಾರ್ಷಿಕ ಆದಾಯವು ಒಂದು ರೂಪಾಯಿಯಿಂದ 7.5 ಲಕ್ಷಕ್ಕಿಂತ ಹೆಚ್ಚಿದ್ದರೆ ಹೊಸ ದರಗಳ ಪ್ರಕಾರ ಆದಾಯ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

Income Tax Latest Updates
Image Credit: Godigit

ಹೊಸ ತೆರಿಗೆ ಪದ್ಧತಿಯ ಪ್ರಕಾರ ಎಷ್ಟು ತೆರಿಗೆ ಪಾವತಿಸಬೇಕಾಗುತ್ತದೆ…?
ಹೊಸ ತೆರಿಗೆ ಪದ್ಧತಿಯ ಪ್ರಕಾರ, ವಾರ್ಷಿಕ ಆದಾಯ 0 ರಿಂದ 3 ಲಕ್ಷದವರೆಗೆ ಶೇಕಡಾ 0 ರಷ್ಟು ಆದಾಯ ತೆರಿಗೆ, 3 ರಿಂದ 6 ಲಕ್ಷ ರೂಪಾಯಿಗಳ ಆದಾಯದ ಮೇಲೆ ಶೇಕಡಾ 5 ರಷ್ಟು, 6 ರಿಂದ 9 ಲಕ್ಷ ರೂಪಾಯಿಗಳ ಆದಾಯದ ಮೇಲೆ ಶೇಕಡಾ 10 ರಷ್ಟು, 10 ರಿಂದ 12 ಲಕ್ಷ ಆದಾಯದ ಮೇಲೆ ಶೇಕಡಾ 15 ರಷ್ಟು ಆದಾಯ ತೆರಿಗೆ, 15 ಲಕ್ಷಕ್ಕಿಂತ ಕಡಿಮೆ ಆದಾಯದ ಮೇಲೆ ಶೇಕಡಾ 20 ಮತ್ತು 15 ಲಕ್ಷಕ್ಕಿಂತ ಹೆಚ್ಚಿನ ಆದಾಯದ ಮೇಲೆ ಶೇಕಡಾ 30 ರ ದರದಲ್ಲಿ 12 5 ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

Join Nadunudi News WhatsApp Group

Join Nadunudi News WhatsApp Group