Traffic Rule: ಜೂನ್ 1 ರಿಂದ ಹೊಸ ಸಂಚಾರಿ ನಿಯಮ, ಇನ್ಮುಂದೆ ಬೀಳಲಿದೆ ದುಪ್ಪಟ್ಟು ದಂಡ.

ಜೂನ್ 1 ರಿಂದ ಹೊಸ ಸಂಚಾರಿ ನಿಯಮ

New Traffic Rule From June 1st: ಸದ್ಯ ಇನ್ನೇನು ಕೆಲವೇ ದಿನಗಳಲ್ಲಿ ಮೇ ತಿಂಗಳು ಮುಗಿದು ಜೂನ್ ತಿಂಗಳು ಆರಂಭವಾಗಲಿದೆ. ಈ ಜೂನ್ ತಿಂಗಳ ಆರಂಭದಲ್ಲಿ ಹೊಸ ಹೊಸ ನಿಯಮಗಳು ಜಾರಿಗೆ ಬರುತ್ತದೆ. ಅದೇ ರೀತಿ ಜೂನ್ ನಲ್ಲಿ ಹೊಸ ಸಂಚಾರಿ ನಿಯಮಗಳು ಕೂಡ ಜಾರಿಗೆ ಬರಲಿದೆ. ಜೂನ್ ನಲ್ಲಿ ಬದಲಾಗಲಿರುವ ಹೊಸ ಸಂಚಾರಿ ನಿಯಮಗಳು ನಿಮ್ಮ ಜೇಬಿಗೆ ಕತ್ತರಿ ಹಾಕಬಹುದು.

ಕಾರಣ ಸಂಚಾರ ನಿಯಮ ಉಲ್ಲಂಘನೆಗೆ ಸರ್ಕಾರ ಬಾರಿ ದಂಡವನ್ನು ವಿಧಿಸಲು ನಿರ್ಧರಿಸಿದೆ. ನಿಮ್ಮ ಬಳಿ ವಾಹನ ಇದ್ದರೆ ಈ ಹೊಸ ಸಂಚಾರ ನಿಯಮವನ್ನು ತಿಳಿದುಕೊಳ್ಳದೆ ನೀವು ರಸ್ತೆಗಿಳಿಯ ಬೇಡಿ. ಈ ಹೊಸ ಸಂಚಾರ ನಿಯಮಗಳು ನಿಮ್ಮಿಂದ ಬಾರಿ ದಂಡವನ್ನು ವಸೂಲಿ ಮಾಡಬಹುದು.

New Traffic Rule From June 1st
Image Credit: idreampost

ಜೂನ್ 1 ರಿಂದ ಹೊಸ ಸಂಚಾರಿ ನಿಯಮ, ಇನ್ಮುಂದೆ ಬೀಳಲಿದೆ ದುಪ್ಪಟ್ಟು ದಂಡ
•ಇನ್ನುಮುಂದೆ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಸರ್ಕಾರಿ ಪ್ರಾದೇಶಿಕ ಸಾರಿಗೆ ಕಚೇರಿಗೆ (RTO) ಹೋಗಿ ಪರೀಕ್ಷೆಗೆ ಹಾಜರಾಗುವ ಅಗತ್ಯವಿಲ್ಲ. ಬದಲಾಗಿ ಖಾಸಗಿ ಸಂಸ್ಥೆಗಳಿಗೆ ಚಾಲನಾ ಪರೀಕ್ಷೆ ನಡೆಸಿ ಪ್ರಮಾಣಪತ್ರ ನೀಡಲು ಅಧಿಕಾರ ನೀಡಲಾಗಿದೆ. ಈ ಹೊಸ ನಿಯಮ ಜೂನ್ 1 ರಿಂದ ಜಾರಿಗೆ ಬರಲಿದೆ. ಜೂನ್ 1 ರಿಂದ ಹೊಸ ನಿಯಮದ ಪ್ರಕಾರ ವಾಹನ ಸವಾರರು DL ಅನ್ನು ಪಡೆದುಕೊಳ್ಳಬಹುದು.

•ಖಾಸಗಿ ಚಾಲನಾ ತರಬೇತಿ ಕೇಂದ್ರಗಳಿಗೆ ಸರ್ಕಾರ ಹೊಸ ನಿಯಮಗಳನ್ನು ತಂದಿದೆ. ಇದರ ಪ್ರಕಾರ ಖಾಸಗಿ ಚಾಲನಾ ತರಬೇತಿ ಕೇಂದ್ರ ನಡೆಸಲು ಕನಿಷ್ಠ 1 ಎಕರೆ ಜಮೀನು ಇರಬೇಕು. 4 ಚಕ್ರದ ಮೋಟಾರು ವಾಹನಗಳಿಗೆ ಚಾಲನಾ ಕೇಂದ್ರದಲ್ಲಿ ಹೆಚ್ಚುವರಿ 2 ಎಕರೆ ಜಮೀನು ಬೇಕಾಗುತ್ತದೆ.

•ಖಾಸಗಿ ಚಾಲನಾ ತರಬೇತಿ ಕೇಂದ್ರವು ಸಾಕಷ್ಟು ಪರೀಕ್ಷಾ ಸೌಲಭ್ಯಗಳನ್ನು ಹೊಂದಿರಬೇಕು. ತರಬೇತುದಾರರು ಕನಿಷ್ಠ ಪ್ರೌಢಶಾಲಾ ಶಿಕ್ಷಣವನ್ನು ಹೊಂದಿರಬೇಕು. ಇದಲ್ಲದೆ ಅವರು ಕನಿಷ್ಠ 5 ವರ್ಷಗಳ ಚಾಲನಾ ಅನುಭವವನ್ನು ಹೊಂದಿರಬೇಕು.

Join Nadunudi News WhatsApp Group

Traffic Rules Updates
Image Credit: Digit

•ಬಯೋಮೆಟ್ರಿಕ್ಸ್‌ ನ ಮೂಲಭೂತ ಅಂಶಗಳನ್ನು ತರಬೇತುದಾರರು ತಿಳಿದಿರಬೇಕು. ಲಘು ವಾಹನ ತರಬೇತಿಯನ್ನು 4 ವಾರಗಳಲ್ಲಿ ಅಂದರೆ ಕನಿಷ್ಠ 29 ಗಂಟೆಗಳಲ್ಲಿ ಪೂರ್ಣಗೊಳಿಸಬೇಕು. ತರಬೇತಿಯನ್ನು ಕನಿಷ್ಠ ಥಿಯರಿ ಮತ್ತು ಪ್ರಾಯೋಗಿಕ ಎರಡು ವಿಭಾಗಗಳಾಗಿ ವಿಂಗಡಿಸಬೇಕು.

•ಸಂಚಾರ ನಿಯಮ ಉಲ್ಲಂಘನೆಯ ದಂಡದಲ್ಲೂ ನಿಯಮ ಬದಲಾಗಿದೆ. ಅತಿವೇಗದ ಚಾಲನೆಗೆ 1,000 ರೂ. ನಿಂದ 2,000 ರೂ.ವರೆಗೆ ದಂಡ, ಅಪ್ರಾಪ್ತರು ವಾಹನ ಚಲಾಯಿಸಿದರೆ 25,000 ರೂ.ಗಳ ದಂಡ ಹಾಗೂ ನೋಂದಣಿ ರದ್ದತಿಯ ನಿಯಮ ಜಾರಿಗೊಳಿಸಲಾಗಿದೆ.

•ಚಾಲಕ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, ಅವರಿಗೆ ರೂ. 25,000 ದಂಡ ವಿಧಿಸಲಾಗುವುದು.

•ಹೆಲ್ಮೆಟ್ ಅಥವಾ ಸೀಟ್ ಬೆಲ್ಟ್ ಇಲ್ಲದೆ ವಾಹನ ಚಲಾಯಿಸಿದರೆ ರೂ. 100 ದಂಡ ವಿಧಿಸಲಾಗುತ್ತದೆ.

•ಅಪ್ರಾಪ್ತ ವಯಸ್ಕರಿಗೆ 25 ವರ್ಷ ವಯಸ್ಸಿನವರೆಗೆ ಚಾಲನಾ ಪರವಾನಗಿಯನ್ನು ಪಡೆಯುವುದನ್ನು ನಿಷೇಧಿಸಲಾಗಿದೆ.

New Traffic Rules
Image Credit: Siasat

Join Nadunudi News WhatsApp Group