Traffic Rule: ಟ್ರಾಫಿಕ್ ನಿಯಮ ಪಾಲಿಸದ ಪೊಲೀಸರಿಗೆ ಹೊಸ ನಿಯಮ, ಕಟ್ಟಬೇಕು ದುಪ್ಪಟ್ಟು ದಂಡ.

ಸಂಚಾರಿ ನಿಯಮವನ್ನ ಪಾಲಿಸದ ಪೊಲೀಸರಿಗಾಗಿ ಹೊಸ ನಿಯಮವನ್ನ ಜಾರಿಗೆ ತರಲಾಗಿದೆ.

Traffic Rule For Police: ವಾಹನ ಸವಾರರ ಸುರಕ್ಷತೆಗಾಗಿ ಸಂಚಾರ ನಿಯಮದಲ್ಲಿ (Traffic Rule) ಸಾಕಷ್ಟು ಬದಲಾವಣೆಲು ಆಗಿವೆ. 2023 -24 ಸಾಲಿನ ಹಣಕಾಸು ವರ್ಷ ಆರಂಭದ ಹಿನ್ನಲೆಯಲ್ಲಿ ಸಾಕಷ್ಟು ನಿಯಮಗಳಲ್ಲಿ ಬದಲಾವಣೆ ಆಗಿದೆ.

ಇದೀಗ ಸಂಚಾರ ನಿಯಮದಲ್ಲಿ ಕೂಡ ಸಾಕಷ್ಟು ಬದಲಾವಣೆಗಳು ಆಗಿವೆ. ಇನ್ನು ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ ಪೊಲೀಸರಿಗೂ ಕೂಡ ಹೆಚ್ಚಿನ ದಂಡ ಪಾವತಿಸುವಂತೆ ರಾಜಸ್ಥಾನ ಸಾರ್ಕಾರ (Rajasthan Government) ಹೊಸ ನಿಯಮವನ್ನು ಜಾರಿಗೆ ತರಲಿದೆ.

A new rule has been implemented for the police who do not obey the traffic rules.
Image Credit: dnaindia

ರಾಜಸ್ಥಾನದಲ್ಲಿ ಸಂಚಾರ ನಿಯಮದಲ್ಲಿ ಬದಲಾವಣೆ
ವಾಹನ ಸವಾರರಿಗಾಗಿ ಸಾಕಷ್ಟು ಸಂಚಾರ ನಿಯಮಗಳು ಚಾಲ್ತಿಯಲ್ಲಿವೆ. ದ್ವಿಚಕ್ರ ವಾಹನದಲ್ಲಿ ಚಲಿಸುವಾಗ ಹೆಲ್ಮೆಟ್ ಧರಿಸುವುದು, ಕಾರುಗಳಲ್ಲಿ ಚಲಿಸುವಾಗ ಸೀಟ್ ಬೆಲ್ಟ್ ಗಳನ್ನೂ ಧರಿಸುವುದು, ವಾಹನವನ್ನು ಚಲಾಯಿಸುವಾಗ ವೇಗದ ಮಿತಿಯನ್ನು ಮೀರದಿರುವುದು ಹೀಗೆ ಇನ್ನಿತರ ನಿಯಮಗಳನ್ನು ವಾಹನ ಸವಾರರು ಪಾಲಿಸಬೇಕಾಗುತ್ತದೆ.

ಸಂಚಾರ ನಿಯಮಗಳನ್ನು ಪಾಲಿಸದಿದ್ದರೆ ಸವಾರರು ದಂಡ ಕಟ್ಟುವ ಪರಿಸ್ಥಿತಿ ಎದುರಾಗುತ್ತಾದೆ. ಇದೀಗ ಪೊಲೀಸರು ಕೂಡ ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ ಪೊಲೀಸರಿಗೆ ಎರಡು ಪಟ್ಟು ದಂಡವನ್ನು ವಿಧಿಸಲಾಗುತ್ತದೆ.

The Rajasthan government has said that if the police, like the common people, do not follow the traffic rules, they should pay a fine
Image Credit: businessleague

ಸಂಚಾರ ನಿಯಮ ಉಲ್ಲಾಘನೆ ಮಾಡಿದರೆ ಪೊಲೀಸರಿಗೆ ಎರಡು ಪಟ್ಟು ದಂಡ
ಪೊಲೀಸರು ವಾಹನ ಚಲಾಯಿಸುವಾಗ ಸಂಚಾರ ನಿಯಮಗಳನ್ನು ಪಾಲಿಸಲೇಬೇಕು. ಸಾಂಚಾರ ನಿಯಮ ಉಲ್ಲಂಘನೆ ಮಾಡಿದರೆ ಮೋಟಾರು ವಾಹನ ಕಾಯ್ದೆಯ ಪ್ರಕಾರ, ಪೊಲೀಸರಿಗೆ ಎರಡು ಪಟ್ಟು ದಂಡ ಮತ್ತು ಪೋಲೀಸರ ವಿರುದ್ಧ ಇಲಾಖಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳು ಸೂಚನೆ ಹೊರಡಿಸಿದ್ದಾರೆ.

Join Nadunudi News WhatsApp Group

ಇನ್ನು ಕರ್ನಾಟಕದಲ್ಲಿಯೂ ಕೂಡ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದೆ. ಮುಂದಿನ ದಿನಗಳಲ್ಲಿ ರಾಜಸ್ಥಾನದಲ್ಲಿ ಆದ ಸಂಚಾರ ನಿಯಮಗಳ ಬದಲಾವಣೆ ಕರ್ನಾಟಕದಲ್ಲಿಯೂ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕರ್ನಾಟಕದಲ್ಲಿ ಹೊಸ ಸಂಚಾರ ನಿಯಮ ಯಾವಾಗ ಜಾರಿಗೆ ಬರುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

Join Nadunudi News WhatsApp Group