New Traffic Rule: ಈ ಸಂಚಾರಿ ನಿಯಮ ತಿಳಿಯದೆ ಮನೆಯಿಂದ ಹೊರಗೆ ವಾಹನ ತಂದರೆ 2000 ರೂ ದಂಡ, ಹೊಸ ನಿಯಮ.

ಈ ಸಂಚಾರಿ ನಿಯಮವನ್ನ ಪಾಲನೆ ಮಾಡದಿದ್ದರೆ ಕಟ್ಟಬೇಕು 2000 ರೂ ದಂಡ

New Traffic Rule: ರಸ್ತೆಗಳಲ್ಲಿ ಸಂಚರಿಸುವ ವಾಹನ ಸವಾರರ ಸುರಕ್ಷತೆಗಾಗಿ ಸಾಕಷ್ಟು ನಿಯಮಗಳನ್ನು ಜಾರಿಗೊಳಿಸಲಾಗುತ್ತದೆ. ವಾಹನ ಸವಾರರು ಪ್ರತಿ ನಿಯಮವನ್ನು ಪಾಲಿಸುವುದು ಅಗತ್ಯವಾಗಿದೆ. ಇನ್ನು ನಿಯಮ ಉಲ್ಲಂಘನೆಗೆ ಸಾರಿಗೆ ಇಲಾಖೆ ಬಾರಿ ದಂಡವನ್ನು ಕೂಡ ವಿಧಿಸುತ್ತದೆ. ಇನ್ನು ಅಪಘಾತದ ಸಮಯದಲ್ಲಿ ದ್ವಿಚಕ್ರ ವಾಹನಗಳಿಗೆ ತೊಂದರೆ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಹೀಗಾಗಿ ಸಾರಿಗೆ ಇಲಾಖೆಯು ದ್ವಿಚಕ್ರ ವಾಹನ ಸವಾರರಿಗೆ Helmet ಧರಿಸುವುದನ್ನು ಕಡ್ಡಾಯಗೊಳಿಸಿದೆ. ಸದ್ಯ ದ್ವಿಚಕ್ರ ವಾಹನ ಸವಾರರಿಗೆ ಹೊಸ ಸಂಚಾರ ನಿಯಮ ಜಾರಿಗೆ ತರಲಾಗಿದ್ದು, ಸವಾರರು Helmet ಧರಿಸಲು ವಿಫಲವಾದರೆ ದಂಡ ವಿಧಿಸಲಾಗುತ್ತದೆ. ಆದರೆ ಸವಾರ Helmet ಧರಿಸಿದ್ದರೂ ಸಹ ಕೆಲವೊಮ್ಮೆ ದಂಡ ನೀಡಬೇಕಾದ ಸಂದರ್ಭ ಬಂದೊದಗಬಹುದು.

New Traffic Rules and Fines in India
Image Credit: Insurancedekho

ಸಂಚಾರಿ ನಿಯಮ ತಿಳಿಯದೆ ಮನೆಯಿಂದ ಹೊರಗೆ ವಾಹನ ತಂದರೆ 2000 ರೂ ದಂಡ
ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಅದನ್ನು ನಿಯಂತ್ರಿಸಲು ಹೊಸ ಸಂಚಾರ ನಿಯಮಗಳನ್ನು ಅಳವಡಿಸಲಾಗುತ್ತಿದೆ. ನೀವು ಬೈಕ್ ನಲ್ಲಿ ಹೊರಗೆ ಹೋಗುತ್ತಿದ್ದರೆ ಈ ನಿಯಮದ ಬಗ್ಗೆ ತಿಳಿದುಕೊಳ್ಳಿ. ಈ ನಿಯಮವನ್ನು ಪಾಲಿಸದಿದ್ದರೆ ನೀವು 2,000 ಸಾವಿರ ರೂ. ದಂಡ ಕಟ್ಟಬೇಕಾಗುತ್ತದೆ. ಹೆಲ್ಮೆಟ್ ಅನ್ನು ತಲೆಗೆ ಮಾತ್ರ ಧರಿಸಿದ್ದರು ಸರಿಯಾಗಿ ಲಾಕ್ ಮಾಡದಿದ್ದಲ್ಲಿ ಸೆಕ್ಷನ್ 194 DMVA ಪ್ರಕಾರ 1000 ರೂ. ದಂಡವನ್ನು ಪಾವತಿಸಬೇಕಾಗುತ್ತದೆ.

BIS ನೋಂದಾಯಿತ ಹೆಲ್ಮೆಟ್ ಕಡ್ಡಾಯವಾಗಿದೆ. ಇಲ್ಲದಿದ್ದಲ್ಲಿ ಕಾನೂನು ಕ್ರಮ ಜಾರಿಗೊಳಿಸಲಾಗುವುದು ಹಾಗೂ 1,000 ರೂಪಾಯಿ ದಂಡ ತೆರಬೇಕಾಗುತ್ತದೆ. ಒಟ್ಟು ದಂಡ 2,000 ಸಾವಿರ ಆಗಬಹುದು ಎಂದು ಹೇಳಲಾಗಿದೆ. ನೀವು ದ್ವಿಚಕ್ರ ವಾಹನದಲ್ಲಿ ಹೋಗುವ ಮುನ್ನ ಮೊದಲು ಹೆಲ್ಮೆಟ್ ಧರಿಸುವುದನ್ನು ಮರೆಯಬೇಡಿ ಹಾಗೆಯೆ ಧರಿಸಿದ ಹೆಲ್ಮೆಟ್ ಸರಿಯಾಗಿದೆಯೇ…? ಎನ್ನುವುದನ್ನು ಪರಿಶೀಲಿಸಿಕೊಳ್ಳಿ. ನಿಯಮ ಉಲ್ಲಂಘನೆ ಮಾಡಿದರೆ ನಿಮ್ಮ ಜೇಬಿಗೆ ಕತ್ತರಿ ಬೀಳುವುದಂತೂ ನಿಜ.

Traffic Rules Update
Image Credit: The Hans India

ಆನ್‌ ಲೈನ್‌ ನಲ್ಲಿ ಈ ರೀತಿಯಾಗಿ ಚಲನ್ ವೀಕ್ಷಿಸಬಹುದು
•ಮೊದಲಿಗೆ https://echallan.parivahan.gov.in/ ಗೆ ಹೋಗಿ.

Join Nadunudi News WhatsApp Group

•’ಚೆಕ್ ಆನ್‌ ಲೈನ್ ಸೇವೆ’ ಆಯ್ಕೆಗೆ ಹೋಗಿ.

•ನೀಡಿರುವ ಚೆಕ್ ಚಲನ್ ಸ್ಥಿತಿಯ ಮೇಲೆ ಕ್ಲಿಕ್ ಮಾಡಿ.

•ವಿನಂತಿಸಿದ ವಾಹನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಭರ್ತಿ ಮಾಡಿ.

•ಕ್ಯಾಪ್ಚಾವನ್ನು ಭರ್ತಿ ಮಾಡಿ ಮತ್ತು ವಿವರಗಳನ್ನು ಪಡೆಯಿರಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

New Traffic Rule
Image Credit: Frontierindia

Join Nadunudi News WhatsApp Group