New Traffic Rules: ರಾಜ್ಯದಲ್ಲಿ ಜಾರಿಗೆ ಬಂತು ಹೊಸ ಟ್ರಾಫಿಕ್ ರೂಲ್ಸ್, ಈ ತಪ್ಪುಗಳಿಗೆ ದಂಡದ ಜೊತೆಗೆ ವಾಹನ ಸೀಜ್

ರಾಜ್ಯದಲ್ಲಿ ಜಾರಿಗೆ ಬಂತು ಹೊಸ ಟ್ರಾಫಿಕ್ ರೂಲ್ಸ್, ದಂಡದ ಜೊತೆಗೆ ವಾಹನ ಸೀಜ್ ಆಗುತ್ತದೆ ಎಚ್ಚರ

New Traffic Rules In Karnataka 2023: ಸರ್ಕಾರ ಜನರ ಪ್ರಾಣ ರಕ್ಷಣೆಗಾಗಿ ಕಟ್ಟುನಿಟ್ಟಾದ ಟ್ರಾಫಿಕ್ ರೂಲ್ಸ್ ಅನ್ನು ಜಾರಿಗೆ ತಂದಿದೆ. ದಿನದಿಂದ ದಿನಕ್ಕೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ನಿಯಮಗಳು ಜನರ ಸುರಕ್ಷತೆಗಾಗಿ ಅನ್ನುವುದನ್ನು ಜನ ಅರಿತುಕೊಳ್ಳದೇ ಪದೇ ಪದೇ ಟ್ರಾಫಿಕ್ ನಿಯಮವನ್ನು ಉಲ್ಲಂಘಿಸಿ ಅವರ ಜೀವದ ಜೊತೆಗೆ ಇನ್ನಿತರ ಜೀವಕ್ಕೂ ಕುತ್ತನ್ನು ಉಂಟು ಮಾಡುತ್ತಿದ್ದಾರೆ.

ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಪೊಲೀಸ್ ಇಲಾಖೆ ಸಂಚಾರ ನಿಯಮಗಳ ಪಾಲನೆಗೆ ಇನ್ನೂ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಲು ಮುಂದಾಗಿದೆ. ಹೀಗಾಗಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನ ಎರಡು ವಿಧವಾಗಿ ವರ್ಗೀಕರಿಸಿ ಸುತ್ತೋಲೆ ಹೊರಡಿಸಿ ಆದೇಶ ಹೊರಡಿಸಿದೆ. ಸಂಚಾರ ಮತ್ತು ರಸ್ತೆ ಸುರಕ್ಷತೆ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಈ ಆದೇಶ ಹೊರಡಿಸಿದ್ದಾರೆ.

New Traffic Rules Update
Image Credit: Deccanherald

ವರ್ಗ-1 ರ ಉಲ್ಲಂಘನೆ ಪ್ರಕರಣಗಳ ಮಾಹಿತಿ ಹೀಗಿದೆ

ವರ್ಗ-1 ರ ಉಲ್ಲಂಘನೆ ಪ್ರಕರಣ ಮದ್ಯಪಾನ ಮಾಡಿ ಚಾಲನೆ ಮಾಡುವುದು, ಅತೀ ವೇಗ ಚಾಲನೆ ಮಾಡುವುದು , ವಾಹನ ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಕೆ ಮಾಡುವುದು, ಜಂಪಿಂಗ್ ಟ್ರಾಫಿಕ್ ಸಿಗ್ನಲ್, ಫ್ರೀ ವೀಲ್ಹಿಂಗ್ ಮಾಡುವುದು, ರೇಸಿಂಗ್ ಮತ್ತು ವೇಗದ ಪ್ರಯೋಗ ಮಾಡುವುದು, ಶಿಸ್ತು ಪಥ ಚಾಲನೆ ಮಾಡದೇ ಇರುವುದು, ಜಿಗ್‌ ಜಾಗ್ (ಅಡ್ಡಾದಿಡ್ಡಿ) ವಾಹನ ಚಾಲನೆ, ಹೆದ್ದಾರಿಗಳಲ್ಲಿ ಅಡ್ಡಾದಿಡ್ಡಿ ಮತ್ತು ಅಪಾಯಕಾರಿ ರೀತಿಯಲ್ಲಿ ವಾಹನಗಳನ್ನು ನಿಲ್ಲಿಸುವುದು.

ಬಿಎಂಟಿಸಿ ನಿಲ್ದಾಣದಲ್ಲಿ ಇತರೆ ವಾಹನಗಳ ನಿಲುಗಡೆ ಮಾಡುವುದು, ಶಿರಸ್ತ್ರಾಣ (ಹೆಲ್ಮೆಟ್) ಧರಿಸದೆ ದ್ವಿಚಕ್ರ ವಾಹನ ಚಾಲನೆ, ಸುರಕ್ಷತೆಯ ಸೀಟ್ ಬೆಲ್ಟ್ ಧರಿಸದಿರುವುದು, ಎಡಭಾಗದಿಂದ ಓವರ್ ಟೇಕ್ ಮಾಡುವುದು, ಪ್ರಯಾಣಿಕರನ್ನು ಅಪಾಯಕರ ರೀತಿಯಲ್ಲಿ ಕರೆದೊಯ್ಯುವುದು, ವಾಹನಗಳ ಮೇಲ್ಬಾವಣಿ (Roof top) ನಲ್ಲಿ ಪ್ರಯಾಣಿಕರನ್ನು ಕರೆದೊಯ್ಯುವುದು.

Join Nadunudi News WhatsApp Group

ಪ್ರಯಾಣಿಕರನ್ನು ಗೂಡ್ಸ್ ವಾಹನಗಳಲ್ಲಿ ಕರೆದೊಯ್ಯುವುದು, ಮಿತಿಗಿಂತ ಹೆಚ್ಚಿನ ಶಾಲಾ ಮಕ್ಕಳನ್ನು ಆಟೋ ರಿಕ್ಷಾದಲ್ಲಿ ಕರೆದೊಯ್ಯುವುದು, ಸಾರಿಗೆ ವಾಹನಗಳಲ್ಲಿ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ಯುವುದು, ಟ್ರಿಪಲ್ ರೈಡಿಂಗ್, ಪಾದಚಾರಿ ಮಾರ್ಗದಲ್ಲಿ ವಾಹನ ನಿಲುಗಡೆ ಮಾಡುವುದು, ಪ್ರವೇಶ ನಿಷಿದ್ಧ ಇವೆಲ್ಲಾ ಪ್ರಕರಣಗಳು ವರ್ಗ-1 ರ ಉಲ್ಲಂಘನೆ ಆಗಿರುತ್ತದೆ.

New Traffic Rules In Karnataka 2023
Image Credit: Acko

ವರ್ಗ-2ರ ಉಲ್ಲಂಘನೆ ಪ್ರಕರಣಗಳ ಮಾಹಿತಿ ಹೀಗಿದೆ

ವರ್ಗ-2ರ ಉಲ್ಲಂಘನೆ ಪ್ರಕರಣ ಹೈಬೀಮ್ ಲೈಟ್‌ ಗಳನ್ನು ವಾಹನಗಳಲ್ಲಿ ಬಳಸುವುದು, ತೀಕ್ಷ್ಣ ಬೀರುವ ಹೆಡ್‌ಲೈಟ್‌ಗಳನ್ನು ಬಳಸುವುದು, ವಾಹನ ಚಾಲನೆ ಮಾಡುವಾಗ ಕರ್ಕಶ ಹಾರ್ನ್ ಬಳಕೆ, ನಿಷಿದ್ಧ ಪ್ರದೇಶಗಳಲ್ಲಿ ಹಾರ್ನ್ ಬಳಸುವುದು, ದೋಷಪೂರಿತ ಸೈಲನ್ಸರ್ ಬಳಸುವುದು, ವಾಹನಗಳಲ್ಲಿ ಉದ್ದವಾದ ವಸ್ತುಗಳನ್ನು ಒಯ್ಯುವುದು, ಪಾದಚಾರಿ ಮಾರ್ಗದಲ್ಲಿ ವಾಹನ ಚಾಲನೆ ಮಾಡುವುದು, ರಹದಾರಿ ಇಲ್ಲದೇ ವಾಹನ ಚಾಲನೆ ಮಾಡುವುದು,

ಆಟೋರಿಕ್ಷಾ ಚಾಲಕರು ನಿಗಧಿಪಡಿಸಿದ ಬಾಡಿಗೆ ದರಕ್ಕಿಂತ ಹೆಚ್ಚಿನ ದರವನ್ನು ಒತ್ತಾಯಿಸುವುದು, ಆಟೋರಿಕ್ಷಾ ಚಾಲಕರು ಬಾಡಿಗೆಗೆ ಕರೆದೊಯ್ಯಲು ನಿರಾಕರಿಸುವುದು, ಡಿಸ್‌ಪ್ಲೇ ಕಾರ್ಡ್ ಇಲ್ಲದೇ ವಾಹನ ಚಲಾಯಿಸುವುದು, ವಾಹನಗಳ ಗ್ಲಾಸ್‌ಗಳಿಗೆ ಬ್ಲಾಕ್ ಫಿಲ್ಮ್ ಬಳಕೆ ಮಾಡುವುದು, ಡಿಫೆಕ್ಟಿವ್ ರಿಜಿಸ್ಟರ್ ಪ್ಲೇಟ್, ವಾಹನ ಚಾಲಕರು ಸಮವಸ್ತ್ರ ಧರಿಸದಿರುವುದು, ಇನ್ಸೂರೆನ್ಸ್ ಪ್ರಮಾಣ ಪತ್ರವನ್ನು ಹೊಂದದಿರುವುದು.

ಪರ್ಮಿಟ್ ಉಲ್ಲಂಘಿಸುವುದು, ಭಾರಿ ವಾಹನಗಳ ಪ್ರವೇಶವನ್ನು ಉಲ್ಲಂಘಿಸುವುದು, ಅಗತ್ಯ ದಾಖಲೆಗಳನ್ನು ಹಾಜರುಪಡಿಸದಿರುವುದು ಇವೆಲ್ಲಾ ಪ್ರಕರಣಗಳು ವರ್ಗ-2 ರ ಉಲ್ಲಂಘನೆ ಆಗಿರುತ್ತದೆ. ಇನ್ನು ವರ್ಗ 1 ಮತ್ತು 2 ರ ಉಲ್ಲಂಘನೆ ಮಾಡಿದರೆ ಕಾನೂನು ಪ್ರಕಾರ ಶಿಕ್ಷೆ ಜೊತೆಗೆ ನಿಮ್ಮ ವಾಹನ ಸೀಜ್ ಮಾಡಲಾಗುತ್ತದೆ.

Join Nadunudi News WhatsApp Group