Petrol And Diesel GST: ಪೆಟ್ರೋಲ್ ಮತ್ತು ಡೀಸೆಲ್ GST ವ್ಯಾಪ್ತಿಗೆ ಬರುತ್ತಾ…? ಸ್ಫಷ್ಟನೇ ನೀಡಿದ ನಿರ್ಮಲ ಸೀತಾರಾಮನ್.

ಪೆಟ್ರೋಲ್ ಮತ್ತು ಡೀಸೆಲ್ GST ವ್ಯಾಪ್ತಿಗೆ ಬರುತ್ತಾ...?

Nirmala Sitaraman About Petrol And Diesel GST: ಇಂದು ಜಿಎಸ್‌ಟಿ ಕೌನ್ಸಿಲ್ ಸಭೆ ನಡೆದಿದ್ದು, ಈ ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಧಾರಗಳ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 7ನೇ ಬಾರಿಗೆ ಬಜೆಟ್ ಮಂಡಿಸುವ ಮೂಲಕ ದಾಖಲೆ ನಿರ್ಮಿಸಲಿದ್ದಾರೆ.

ಜುಲೈ ದ್ವಿತೀಯಾರ್ಧದಲ್ಲಿ ಸಂಸತ್ತಿನಲ್ಲಿ 2024-25ರ ಪೂರ್ಣ ಬಜೆಟ್ ಮಂಡನೆಯಾಗುವ ನಿರೀಕ್ಷೆಯಿದೆ. ಸಂಸತ್ತಿನ ಎರಡು ಸದನಗಳು ಜುಲೈ ಮೂರನೇ ವಾರದಲ್ಲಿ ಕೇಂದ್ರ ಬಜೆಟ್ ಮಂಡಿಸಲು ಮತ್ತೊಮ್ಮೆ ಸಭೆ ಸೇರುವ ನಿರೀಕ್ಷೆಯಿದೆ. ಸದ್ಯ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳವಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ GST ವ್ಯಾಪ್ತಿಗೆ ಬರುತ್ತಾ…? ಎನ್ನುವ ಬಗ್ಗೆ ನಿರ್ಮಲ ಸೀತಾರಾಮನ್ ಸ್ಪಷ್ಟನೆ ನೀಡಿದ್ದಾರೆ.

Nirmala Sitharaman About Petrol And Diesel GST
Image Credit: Hindustantimes

ಪೆಟ್ರೋಲ್ ಮತ್ತು ಡೀಸೆಲ್ GST ವ್ಯಾಪ್ತಿಗೆ ಬರುತ್ತಾ…?
ಕರ್ನಾಟಕದಲ್ಲಿ ಈಗಾಗಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಾಗಿದೆ. ಈ ಬಾರಿ ಪೆಟ್ರೋಲ್, ಡೀಸೆಲ್ ಕೂಡ ಜಿಎಸ್‌ಟಿ ವ್ಯಾಪ್ತಿಗೆ ಬರಲಿದೆಯೇ…? ಎನ್ನುವುದ ಎಲ್ಲರ ಪ್ರಶ್ನೆಯಾಗಿದೆ. ಸದ್ಯ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಗೆ ತರಲು ಬಯಸಿದೆ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಆದರೆ, ಇದನ್ನು ರಾಜ್ಯಗಳು ನಿರ್ಧರಿಸಬೇಕು. ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಇನ್ನೂ ತೆರಿಗೆ ವಿಧಿಸಿಲ್ಲ. ಬದಲಾಗಿ, ನೈಸರ್ಗಿಕ ಅನಿಲ, ಎಟಿಎಫ್ ಜೊತೆಗೆ, ಈ ಇಂಧನಗಳು ವ್ಯಾಟ್, ಕೇಂದ್ರ ಅಬಕಾರಿ ಸುಂಕ ಮತ್ತು ಕೇಂದ್ರ ಮಾರಾಟ ತೆರಿಗೆಗೆ ಒಳಪಟ್ಟಿರುತ್ತವೆ.

ಸ್ಫಷ್ಟನೇ ನೀಡಿದ ನಿರ್ಮಲ ಸೀತಾರಾಮನ್
ಸಭೆಯಲ್ಲಿ ಪೆಟ್ರೋಲ್, ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವ ಬಗ್ಗೆ ನಾವು ಚರ್ಚಿಸಿಲ್ಲ. ಆದರೆ, ಜಿಎಸ್‌ಟಿ ಜಾರಿಯಾದಾಗಲೂ ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬಗ್ಗೆ ಮಾತನಾಡಿದ್ದು ನನಗೆ ನೆನಪಿದೆ. ರಾಜ್ಯಗಳು ಒಪ್ಪಿದ ನಂತರ, ಅವರು ಕೌನ್ಸಿಲ್ನಲ್ಲಿ ತೆರಿಗೆ ದರವನ್ನು ನಿರ್ಧರಿಸಬೇಕು. ನಿರ್ಧಾರ ತೆಗೆದುಕೊಂಡ ನಂತರ ಅದನ್ನು ಕಾರ್ಯಗತಗೊಳಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಸಭೆಯ ನಂತರದ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

Join Nadunudi News WhatsApp Group

ಕೇಂದ್ರ ಸರ್ಕಾರದ ಉದ್ದೇಶ ಸ್ಪಷ್ಟವಾಗಿದೆ, ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‌ಟಿಗೆ ಸೇರಿಸಬೇಕೆಂದು ನಾವು ಬಯಸುತ್ತೇವೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಜಿಎಸ್‌ಟಿ ಅಡಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ಗೆ ಇನ್ನೂ ತೆರಿಗೆ ವಿಧಿಸಲಾಗಿಲ್ಲ. ಬದಲಾಗಿ ನೈಸರ್ಗಿಕ ಅನಿಲ ಮತ್ತು ಎಟಿಎಫ್ ಜೊತೆಗೆ ಈ ಇಂಧನಗಳು ವ್ಯಾಟ್, ಕೇಂದ್ರೀಯ ಅಬಕಾರಿ ಸುಂಕ ಮತ್ತು ಕೇಂದ್ರ ಮಾರಾಟ ತೆರಿಗೆಗೆ ಒಳಪಟ್ಟಿರುತ್ತವೆ. ರಾಜ್ಯದಿಂದ ರಾಜ್ಯಕ್ಕೆ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಬದಲಾಗುತ್ತದೆ ಎಂದರು.

Petrol And Diesel GST
Image Credit: Timesnownews

Join Nadunudi News WhatsApp Group