Nirmala Sitharaman: ಬ್ಯಾನ್ ಆಗುತ್ತಾ 2000 ರೂ. ನೋಟುಗಳು, ವೈರಲ್ ಸುದ್ದಿಯ ಬಗ್ಗೆ ಸ್ಪಷ್ಟನೆ ನೀಡಿದ ನಿರ್ಮಲಾ ಸೀತಾರಾಮನ್.

Nirmala Sitharaman explained why 2000 rupee note is not being filled in ATM

Nirmala Sitharaman About 2000 Note Ban: ಇತ್ತೀಚಿನ ದಿನಗಳಲ್ಲಿ ನೋಟ್ ಬ್ಯಾನ್ ಕುರಿತಾದ ಸಾಕಷ್ಟು ಮಾಹಿತಿಗಳು ವೈರಲ್ ಆಗುತ್ತಿದೆ. ನೋಟ್ ಬ್ಯಾನ್ ಆದ ಪ್ರಾರಂಭದಿಂದ ಇಲ್ಲಿಯವರೆಗೆ ನೋಟ್ ಬ್ಯಾನ್ ಸಂಬಂಧಿತ ಸಾಕಷ್ಟು ನಕಲಿ ಸುದ್ದಿಗಳು ವೈರಲ್ ಆಗಿದ್ದವು. ಇದೀಗ 2000 ಸಾವಿರ ರೂ. ನೋಟ್ ಬ್ಯಾನ್ ಆಗುವ ಬಗ್ಗೆ ನಿರ್ಮಲ ಸೀತಾರಾಮನ್ (Nirmala Sitaramnan) ಸ್ಪಷ್ಟನೆ ನೀಡಿದ್ದಾರೆ.

Nirmala Sitharaman clarified about the news that 2000 rupee notes will be banned
Image Cindiatodayredit:

ಬ್ಯಾನ್ ಆಗಲಿದೆಯೇ 2000 ರೂ. ನೋಟ್
ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚಿನ ದಿನಗಳಲ್ಲಿ ನೋಟ್ ಬ್ಯಾನ್ ಆಗುವ ಸಾಧ್ಯತೆಯ ಬಗ್ಗೆ ಹೊಸ ಹೊಸ ಸುದ್ದಿಗಳು ವೈರಲ್ ಆಗುತ್ತಿದೆ. ಈ ಹಿಂದೆ 2000 ಸಾವಿರ ನೋಟ್ ಬ್ಯಾನ್ ಆಗಲಿದೆ ಎನ್ನುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುದ್ದಿಗಳು ವೈರಲ್ ಆಗಿದ್ದವು.

ರೂ. 2000 ಮುಖಬೆಲೆಯ ನೋಟ್ ಗಳನ್ನೂ ಹೆಚ್ಚಾಗಿ ಯಾರು ಬಳಸಬೇಡಿ ಎನ್ನುವ ಸುದ್ದಿ ವೈರಲ್ ಆಗಿತ್ತು. ಇನ್ನು ATM ಮೆಷಿನ್ ಗಳಲ್ಲಿ 2000 ರೂ. ನೋಟ್ ಗಳು ಇನ್ನು ಮುಂದೆ ಸಿಗುವುದಿಲ್ಲ ಎನ್ನುವ ಮಾಹಿತಿ ಕೂಡ ತಿಳಿದು ಬಂದಿತ್ತು. ಇದೀಗ ಈ ಎಲ್ಲ ವೈರಲ್ ಸುದ್ದಿಗಳ ಬಗ್ಗೆ ನಿರ್ಮಲ ಸೀತಾರಾಮನ್ (Nirmala Sithraman) ಸ್ಪಷ್ಟನೆ ನೀಡಿದ್ದಾರೆ.

The news that 2000 notes will be banned is false and there is no clarification about it. Nirmala Sitharaman said that no one should spread this news.
Image Credit: economictimes.indiatimes

2000 ರೂ. ನೋಟ್ ಬ್ಯಾನ್ ಬಗ್ಗೆ ಸ್ಪಷ್ಟನೆ ನೀಡಿದ ನಿರ್ಮಲ ಸೀತಾರಾಮನ್
ATM ಮೆಷಿನ್ ಗಳಲ್ಲಿ 2000 ರೂ. ನೋಟುಗಳನ್ನು ತುಂಬಲು ಅಥವಾ ತುಂಬದಿರಲು ಬ್ಯಾಂಕ್ ಗಳಿಗೆ ಯಾವುದೇ ಸೂಚನೆಗಳನ್ನು ನೀಡಲಾಗಿಲ್ಲ. ಬ್ಯಾಂಕ್ ನವರು ನಗದು ವಿತರಣಾ ಯಂತ್ರಗಳನ್ನು ಲೋಡ್ ಮಾಡಲು ತಮ್ಮದೇ ಆದ ಆಯ್ಕೆ ಮಾಡುತ್ತಾರೆ ಎಂದು ಸಂಸತ್ತಿಗೆ ತಿಳಿಸಲಾಗಿದೆ.

Nirmala Sitharaman clarified why 2000 rupees notes are not being filled in ATMs.
Image Credit: rediff

ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಲೋಕಸಭೆಯಲ್ಲಿ ಈ ಬಗ್ಗೆ ಉತ್ತರ ನೀಡಿದ್ದಾರೆ. “2000 ರೂ. ನೋಟುಗಳನ್ನು ತುಂಬದಂತೆ ಬ್ಯಾಂಕ್ ಗಳಿಗೆ ಯಾವುದೇ ಸೂಚನೆ ನೀಡಿಲ್ಲ. ಹಿಂದಿನ ಬಳಕೆ, ಗ್ರಾಹಕರ ಅಗತ್ಯತೆ ಇತ್ಯಾದಿಗಳ ಆಧಾರದ ಮೇಲೆ ಬ್ಯಾಂಕ್ ಗಳು ATM ಗಳಿಗೆ ಮೊತ್ತ ಮತ್ತು ಮುಖಬೆಲೆಯ ಅಗತ್ಯತ್ಯೆಯ ತಮ್ಮದೇ ಆದ ಮೌಲ್ಯಮಾಪನವನ್ನು ಮಾಡುತ್ತವೆ ಎಂದು ತಿಳಿಸಿದ್ದಾರೆ.

Join Nadunudi News WhatsApp Group

Join Nadunudi News WhatsApp Group