2000rs Note: 2000 ನೋಟುಗಳು ATM ನಲ್ಲಿ ಏಕೆ ಸಿಗುತ್ತಿಲ್ಲ, ಸ್ಪಷ್ಟನೆ ನೀಡಿದ ನಿರ್ಮಲ ಸೀತಾರಾಮನ್.

2000 ರೂಪಾಯಿ ನೋಟುಗಳನ್ನ ಯಾಕೆ ಏಟಿಎಂ ಗಳಲ್ಲಿ ತುಂಬಲಾಗುತ್ತಿಲ್ಲ ಅನ್ನುವುದರ ಬಗ್ಗೆ ಸ್ಪಷ್ಟನೆ ನೀಡಿದ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್

2000 Note Latest News: 2016 ರಲ್ಲಿ ಕೆಲವು ನೋಟ್ ಗಳು ಬ್ಯಾನ್ ಆದ ಬಳಿಕ ಹೊಸ ಹೊಸ ನೋಟ್ ಗಳು ಚಲಾವಣೆಗೆ ಬಂದಿದ್ದವು. ಇನ್ನು ನೋಟ್ ಬ್ಯಾನ್ ಗು ಮುನ್ನ 2000 ನೋಟ್ ಗಳ ಚಲಾವಣೆ ಇರಲಿಲ್ಲ. ಹಳೆಯ 500 ಮತ್ತು 1000 ನೋಟುಗಳು ಅಮಾನ್ಯವಾದ ಬಳಿಕ ಹೊಸ 2000 ನೋಟುಗಳು ಚಾಲ್ತಿಯಲ್ಲಿದ್ದವು. ಇದೀಗ 2000 ನೋಟ್ ಬ್ಯಾನ್ ಆಗುವ ಭೀತಿ ಎಲ್ಲರಲ್ಲೂ ಮೂಡುತ್ತಿದೆ.

2000 Note Latest News
Image Source: India Today

ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್
ಇತ್ತೀಚಿನ ದಿನಗಳಲ್ಲಿ ನೋಟ್ ಬ್ಯಾನ್ ಕುರಿತಾದ ಸಾಕಷ್ಟು ಮಾಹಿತಿಗಳು ವೈರಲ್ ಆಗುತ್ತಿದೆ. ನೋಟ್ ಬ್ಯಾನ್ ಆದ ಪ್ರಾರಂಭದಿಂದ ಇಲ್ಲಿಯವರೆಗೆ ನೋಟ್ ಬ್ಯಾನ್ ಸಂಬಂಧಿತ ಸಾಕಷ್ಟು ನಕಲಿ ಸುದ್ದಿಗಳು ವೈರಲ್ ಆಗಿದ್ದವು. ಎಟಿಎಂ ಗಳಲ್ಲಿ ಇತ್ತೀಚಿಗೆ 2000 ನೋಟುಗಳು ಸಿಗದಿರುವುದು ಕೂಡ ಇದಕ್ಕೆ ಕಾರಣವಾಗಿದೆ.

ಇದೀಗ 2000 ರೂ. ನೋಟ್ ಬ್ಯಾನ್ ಆಗುವ ಬಗ್ಗೆ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ (Nirmala Sitharaman) ಸ್ಪಷ್ಟನೆ ನೀಡಿದ್ದಾರೆ.

2000 Note Latest News
Image Soource: News18

ಬ್ಯಾನ್ ಆಗುವ ಭೀತಿಯಲ್ಲಿ 2000 ನೋಟು
ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚಿನ ದಿನಗಳಲ್ಲಿ ನೋಟ್ ಬ್ಯಾನ್ ಆಗುವ ಸಾಧ್ಯತೆಯ ಬಗ್ಗೆ ಹೊಸ ಹೊಸ ಸುದ್ದಿಗಳು ವೈರಲ್ ಆಗುತ್ತಿದೆ. ಈ ಹಿಂದೆ 2000 ಸಾವಿರ ನೋಟ್ ಬ್ಯಾನ್ ಆಗಲಿದೆ ಎನ್ನುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುದ್ದಿಗಳು ವೈರಲ್ ಆಗಿದ್ದವು.

ರೂ. 2000 ಮುಖಬೆಲೆಯ ನೋಟ್ ಗಳನ್ನೂ ಹೆಚ್ಚಾಗಿ ಯಾರು ಬಳಸಬೇಡಿ ಎನ್ನುವ ಸುದ್ದಿ ವೈರಲ್ ಆಗಿತ್ತು. ಇನ್ನು ATM ಮೆಷಿನ್ ಗಳಲ್ಲಿ 2000 ರೂ. ನೋಟ್ ಗಳು ಇನ್ನು ಮುಂದೆ ಸಿಗುವುದಿಲ್ಲ ಎನ್ನುವ ಮಾಹಿತಿ ಕೂಡ ತಿಳಿದು ಬಂದಿತ್ತು. ಇದೀಗ ಈ ಎಲ್ಲ ವೈರಲ್ ಸುದ್ದಿಗಳ ಬಗ್ಗೆ ನಿರ್ಮಲ ಸೀತಾರಾಮನ್   ಸ್ಪಷ್ಟನೆ ನೀಡಿದ್ದಾರೆ.

Join Nadunudi News WhatsApp Group

2000 Note Latest News
Imagge Source: Business Today

2000 ನೋಟುಗಳು ATM ನಲ್ಲಿ ಏಕೆ ಸಿಗುತ್ತಿಲ್ಲ
ATM ಮೆಷಿನ್ ಗಳಲ್ಲಿ 2000 ರೂ. ನೋಟುಗಳನ್ನು ತುಂಬಲು ಅಥವಾ ತುಂಬದಿರಲು ಬ್ಯಾಂಕ್ ಗಳಿಗೆ ಯಾವುದೇ ಸೂಚನೆಗಳನ್ನು ನೀಡಲಾಗಿಲ್ಲ. ಬ್ಯಾಂಕ್ ನವರು ನಗದು ವಿತರಣಾ ಯಂತ್ರಗಳನ್ನು ಲೋಡ್ ಮಾಡಲು ತಮ್ಮದೇ ಆದ ಆಯ್ಕೆ ಮಾಡುತ್ತಾರೆ ಎಂದು ಸಂಸತ್ತಿಗೆ ತಿಳಿಸಲಾಗಿದೆ.

ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಲೋಕಸಭೆಯಲ್ಲಿ ಈ ಬಗ್ಗೆ ಉತ್ತರ ನೀಡಿದ್ದಾರೆ. “2000 ರೂ. ನೋಟುಗಳನ್ನು ತುಂಬದಂತೆ ಬ್ಯಾಂಕ್ ಗಳಿಗೆ ಯಾವುದೇ ಸೂಚನೆ ನೀಡಿಲ್ಲ. ಹಿಂದಿನ ಬಳಕೆ, ಗ್ರಾಹಕರ ಅಗತ್ಯತೆ ಇತ್ಯಾದಿಗಳ ಆಧಾರದ ಮೇಲೆ ಬ್ಯಾಂಕ್ ಗಳು ATM ಗಳಿಗೆ ಮೊತ್ತ ಮತ್ತು ಮುಖಬೆಲೆಯ ಅಗತ್ಯತ್ಯೆಯ ತಮ್ಮದೇ ಆದ ಮೌಲ್ಯಮಾಪನವನ್ನು ಮಾಡುತ್ತವೆ” ಎಂದು ತಿಳಿಸಿದ್ದಾರೆ.

2000 Note Latest News
Image Source: The News Minute

Join Nadunudi News WhatsApp Group