Nitin Gadkari: ಇನ್ಮುಂದೆ ದೇಶದಲ್ಲಿ ಇರಲ್ಲ ಪೆಟ್ರೋಲ್ ಮತ್ತು ಡೀಸೆಲ್ ಚಾಲಿತ ವಾಹನ, ನಿತಿನ್ ಗಡ್ಕರಿ ಅಧಿಕೃತ ಆದೇಶ.

ಎಥನಾಲ್ ಚಾಲಿತ ವಾಹನಗಳ ಬಗ್ಗೆ ಮಹತ್ವದ ಘೋಷಣೆ ಹೊರಡಿಸಿದ Nitin Gadkari

Nitin Gadkari Latest Update: ಕೇಂದ್ರ ಸರ್ಕಾರ ಮಾಲಿನ್ಯ ತಡೆಗಾಗಿ ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದೆ. ಭವಿಷ್ಯದಲ್ಲಿ ಸಂಪೂರ್ಣವಾಗಿ ಇಂಧನ ಚಾಲಿತ ವಾಹನಗಳ ಬಳಕೆಯನ್ನು ಕಡಿಮೆ ಮಾಡಲು ಸರ್ಕಾರ ಈಗಾಗಲೇ ಯೋಜನೆ ಹೂಡುತ್ತಿದೆ. ವಾಯುಮಾಲಿನ್ಯ ತಡೆಗಾಗಿ ಸರ್ಕಾರ ಈಗಾಗಲೇ ಪರ್ಯಾಯ ಮಾರ್ಗವನ್ನು ಕೂಡ ಕಂಡುಕೊಂಡಿದೆ.

ಇದಕ್ಕಾಗಿಯೇ ದೇಶದ್ಲಲಿ ಎಲೆಕ್ಟ್ರಿಕ್ ಚಾಲಿತ ವಾಹನಗಳು, ಹಾಗೆಯೆ ಎಥನಾಲ್ ಚಾಲಿತ ವಾಹನಗಳನ್ನು ಪರಿಚಯಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ದೇಶದ ಜನಪ್ರಿಯ ಕಾರ್ ತಯಾರಕ ಕಂಪನಿಯಾದ Toyota ಈಗಾಗಲೇ ಎಥನಾಲ್ ಚಾಲಿತ ವಾಹನಗಳನ್ನು ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ. ಸದ್ಯ ಕೇಂದ್ರ ರಸ್ತೆ ಸಾರಿಗೆ ಸಚಿವರಾದ Nitin Gadkari ಅವರು ಎಥನಾಲ್ ಚಾಲಿತ ವಾಹನಗಳ ಬಗ್ಗೆ ಮಹತ್ವದ ಘೋಷಣೆ ಹೊರಡಿಸಿದ್ದಾರೆ.

Nitin Gadkari Latest Update
Image Credit: Business-Standard

ಇನ್ಮುಂದೆ ದೇಶದಲ್ಲಿ ಇರಲ್ಲ ಪೆಟ್ರೋಲ್ ಮತ್ತು ಡೀಸೆಲ್ ಚಾಲಿತ ವಾಹನ
ಪೆಟ್ರೋಲ್ ಮತ್ತು ಡೀಸೆಲ್ ಚಾಲಿತ ವಾಹನಗಳನ್ನು ದೇಶದ್ಲಲಿ ಸಂಪೂರ್ಣವಾಗಿ ತೆಗೆದು ಹಾಕಲು ಕೇಂದ್ರ ರಸ್ತೆ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರು ನಿರ್ಧಾರ ಕೈಗೊಂಡಿದ್ದಾರೆ. ಇನ್ನು ಭಾರತವನ್ನು ಹಸಿರು ಆರ್ಥಿಕತೆಯನ್ನಾಗಿ ಮಾಡುವ ಮಹತ್ವಾಕಾಂಕ್ಷೆಯ ಭಾಗವಾಗಿ, ಕೇಂದ್ರ ಸಚಿವ ನಿತಿನ್ ಗಡ್ಕರಿ ಹೈಬ್ರಿಡ್ ವಾಹನಗಳ ಮೇಲಿನ ಜಿಎಸ್‌ಟಿಯನ್ನು ಕಡಿತಗೊಳಿಸಲು ಮುಂದಾಗಿದ್ದಾರೆ.

ಇದರ ಜೊತೆಗೆ 36 ಕೋಟಿಗೂ ಹೆಚ್ಚು ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಂದ ದೇಶವನ್ನು ಸಂಪೂರ್ಣವಾಗಿ ತೊಡೆದುಹಾಕಲು ಪ್ರತಿಜ್ಞೆ ಮಾಡಿದ್ದಾರೆ. ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ವಾಹನವನ್ನು ಸಂಪೂರ್ಣವಾಗಿ ತೆಗೆದು ಹಾಕಲು ಸಾಧ್ಯವೇ ಎನ್ನುವ ಪ್ರಶ್ನೆಗೆ ನಿತಿನ್ ಗಡ್ಕರಿ ಅವರು ನೂರು ಪ್ರತಿಶತ ಸದ್ಯ ಎನ್ನುವ ಉತ್ತರವನ್ನು ನೀಡಿದ್ದಾರೆ.

Nitin Gadkari New Order
Image Credit: NDTV

ನಿತಿನ್ ಗಡ್ಕರಿ ಅಧಿಕೃತ ಆದೇಶ
ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ವಾಹನವನ್ನು ಸಂಪೂರ್ಣವಾಗಿ ತೆಗೆದುಹಾಕುವುದು ಕಷ್ಟ ಆದರೆ ಅಸಾಧ್ಯವಲ್ಲ. ಇದು ನನ್ನ ದೃಷ್ಟಿಕೋನ ಎಂದು ಗಡ್ಕರಿ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಇಂಧನ ಆಮದು ಮಾಡಿಕೊಳ್ಳಲು ಭಾರತ 16 ಲಕ್ಷ ಕೋಟಿ ರೂ ಖರ್ಚು ಮಾಡುತ್ತಿದೆ.

Join Nadunudi News WhatsApp Group

ಈ ಹಣವನ್ನು ರೈತರ ಬದುಕು ಹಸನಾಗಿಸಲು, ಗ್ರಾಮಗಳನ್ನು ಸಮೃದ್ಧಗೊಳಿಸಲು ಮತ್ತು ಯುವಕರಿಗೆ ಉದ್ಯೋಗ ನೀಡಲು ಬಳಸಲಾಗುವುದು ಎಂದು ಸಚಿವರು ಹೇಳಿದರು. ಹೈಬ್ರಿಡ್ ವಾಹನಗಳ ಮೇಲಿನ ಜಿಎಸ್‌ಟಿಯನ್ನು ಶೇಕಡಾ 5 ಕ್ಕೆ ಮತ್ತು ಫ್ಲೆಕ್ಸ್ ಎಂಜಿನ್‌ ಗಳ ಮೇಲಿನ ಜಿಎಸ್‌ಟಿಯನ್ನು ಶೇಕಡಾ 12 ಕ್ಕೆ ಇಳಿಸುವ ಪ್ರಸ್ತಾವನೆಯನ್ನು ಹಣಕಾಸು ಸಚಿವಾಲಯಕ್ಕೆ ಕಳುಹಿಸಲಾಗಿದ್ದು, ಇದು ಬೇಡಿಕೆಯನ್ನು ಪರಿಗಣಿಸುತ್ತಿದೆ ಎಂದು ಗಡ್ಕರಿ ಹೇಳಿದರು.

Nitin Gadkari Latest News
Image Credit: Livemint

Join Nadunudi News WhatsApp Group