New Traffic Rule: ಬೈಕ್ ಕಾರ್ ಇದ್ದವರಿಗೆ ಟ್ರಾಫಿಕ್ ಪೊಲೀಸರಿಂದ ಹೊಸ ರೂಲ್ಸ್, ಇನ್ಮುಂದೆ Online ನಲ್ಲಿ ದಂಡ

ಸಂಚಾರ ನಿಯಮ ಉಲ್ಲಂಘನೆಗಾಗಿ ಆನ್‌ಲೈನ್‌ನಲ್ಲಿ ದಂಡ ಪಾವತಿ ವ್ಯವಸ್ಥೆ

Online Fine System: ದೇಶದಲ್ಲಿ ಇತ್ತೀಚೆಗಂತೂ Traffic ಸಮಸ್ಯೆ ಹೆಚ್ಚುತ್ತಲೇ ಇದೆ. ಇನ್ನು ರಸ್ತೆ ಸಂಚಾರ ನಿಯಮವನ್ನು (Traffic Rule) ಉಲ್ಲಂಘಿಸಿದರೆ ಹೆಚ್ಚಿನ ದಂಡವನ್ನು ಪಾವತಿಸಬೇಕಾಗುತ್ತದೆ ಎನ್ನುವುದು ಎಲ್ಲರಿಗು ತಿಳಿದಿರುವ ವಿಚಾರ. ರಸ್ತೆಗಳಲ್ಲಿ ವಾಹನ ಚಲಾಯಿಸುವ ಸಮಯದಲ್ಲಿ ವಾಹನ ಸವಾರರು ಹೆಚ್ಚಿನ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. 

ದೇಶದಲ್ಲಿ ಹೊಸ ಹೊಸ ಸಂಚಾರಿ ನಿಯಮಗಳು ಜಾರಿಗೆ ಬರುತ್ತಿದ್ದು ವಾಹನ ಸವಾರರು ಪ್ರತಿನಿತ್ಯ ಸಾಕಷ್ಟು ದಂಡ ಕಟ್ಟುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಸದ್ಯ ದೇಶದಲ್ಲಿ ಇನ್ನೊಂದು ಟ್ರಾಫಿಕ್ ರೂಲ್ಸ್ ಜಾರಿಗೆ ಬಂದಿದೆ. ವಾಹನ ಸವಾರರು ದಂಡ ಪಾವತಿಸಲು ಪೊಲೀಸರು ಹೊಸ ವ್ಯವಸ್ಥೆಯನ್ನು ಕಂಡು ಹಿಡಿದಿದ್ದಾರೆ.

Online Fine System
Image Credit: Livemint

ಸಂಚಾರ ನಿಯಮ ಉಲ್ಲಂಘನೆಗಾಗಿ ಆನ್‌ಲೈನ್‌ನಲ್ಲಿ ದಂಡ ಪಾವತಿ ವ್ಯವಸ್ಥೆ
ಸಂಚಾರ ನಿಯಮ ಉಲ್ಲಂಘನೆಯಾದರೆ ದಂಡದ ಜೊತೆ ಜೈಲು ಶಿಕ್ಷೆಯನ್ನು ಕೂಡ ಅನುಭವಿಸಬೇಕಾಗುತ್ತದೆ. ಈಗಾಗಲೇ ಸಂಚಾರ ನಿಯಮದಲ್ಲಿ ವಿವಿಧ ನಿಯಮಗಳನ್ನು ಅಳವಡಿಸಲಾಗಿದೆ. ದೊಡ್ಡ ದೊಡ್ಡ ಸಿಟಿಗಳಿಗೆ ಸೀಮಿತವಾಗಿದ್ದ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಇದೀಗ ರಾಜ್ಯದೆಲ್ಲೆಡೆ ವಿಸ್ತರಿಸಲು ಸಂಚಾರ ಇಲಾಖೆ ಮುಂದಾಗಿದೆ.

ಇದರಿಂದ ಯಾವ ವಾಹನ ಸವಾರರು ನಿಯಮ ಉಲ್ಲಂಘನೆ ಮಾಡಿದ್ರು ಸುಲಭವಾಗಿ ಕಂಡುಹಿಡಿಯಬಹುದಾಗಿದೆ. ದಂಡ ಪಾವತಿಯಿಂದ ನಿಯಮ ಉಲ್ಲಂಘನೆ ಮಾಡಿದವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನಬಹುದು. ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಸಂಚಾರ ನಿಯಮ ಉಲ್ಲಂಘನೆಗಾಗಿ ಆನ್‌ಲೈನ್‌ನಲ್ಲಿ ದಂಡ ಪಾವತಿಯನ್ನು ವಿಸ್ತರಿಸಿದ್ದಾರೆ.

Traffic Fine Online
Image Credit: Indiatimes

ದಂಡ ಪಾವತಿಸಲು ಪೊಲೀಸರಿಂದ ಹೊಸ ವೆಬ್ ಸೈಟ್ ಆರಂಭ
ಆನ್‌ ಲೈನ್ ದಂಡ ಪಾವತಿಗಾಗಿ ರಾಜ್ಯ ಪೊಲೀಸ್ ಇಲಾಖೆಯು payfine.mchallan.com7271 ವೆಬ್‌ ಸೈಟ್ ಅನ್ನು ಅಭಿವೃದ್ಧಿಪಡಿಸಿದೆ. ಸಂಚಾರಿ ನಿಯಮ ಉಲ್ಲಂಘಿಸಿದ ವಾಹನ ಸವಾರರು ಪೊಲೀಸ್ ಠಾಣೆಗೆ ಬಂದು ದಂಡ ಪಾವತಿಸಲು ಆಗುವ ತೊಂದರೆ ತಪ್ಪಿಸಲು ವೆಬ್ ಸೈಟ್ ಆರಂಭಿಸಲಾಗಿದ್ದು, ವಾಹನ ಸವಾರರು ಆನ್ ಲೈನ್ ಮೂಲಕ ಹಣ ಪಾವತಿಸಬಹುದಾಗಿದೆ.

Join Nadunudi News WhatsApp Group

ಇನ್ನುಮುಂದೆ ಯಾವುದೇ ವಾಹನ ಸವಾರರು ಸಂಚಾರ ನಿಯಮವನ್ನು ಉಲ್ಲಂಘಿಸುವಂತಿಲ್ಲ. ಯಾವುದೇ ವಾಹನ ಸವಾರರು ಇನ್ನುಮುಂದೆ ಸಂಚಾರ ನಿಯಮವನ್ನು ಉಲ್ಲಘಿಸಿ ತಪ್ಪಿಸಿಕೊಳ್ಳವು ಸಾಧ್ಯವಿಲ್ಲ. ಆನ್‌ ಲೈನ್ ದಂಡ ಪಾವತಿ ಜಾರಿ ಮಾಡುವ ಬಗ್ಗೆ ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಅಧಿಕೃತ ಘೋಷಣೆ ಹೊರಡಿಸಿದ್ದಾರೆ.

Traffic Fine Latest Update
Image Credit: gqindia

Join Nadunudi News WhatsApp Group