PhonePe Loan: ಫೋನ್ ಬಳಸುವವರಿಗೆ ಭರ್ಜರಿ ಆಫರ್, 5 ನಿಮಿಷದಲ್ಲಿ ಸಿಗಲಿದೆ 1 ಲಕ್ಷ ರೂ ಸಾಲ.

ಫೋನ್ ಪೇ ಬಳಸುವವರಿಗೆ ಭರ್ಜರಿ ಆಫರ್

PhonePe Loan Update: ಇದೀಗ ಫೋನ್ ಪೇ, ಗೂಗಲ್ ಪೇ, ಪೆಟಿಎಂ ಸೇರಿದಂತೆ ಅನೇಕ ಯುಪಿಐ ವಹಿವಾಟುಗಳು ಚಾಲ್ತಿಯಲ್ಲಿವೆ. ಯುಪಿಐ ವಹಿವಾಟುಗಳಲ್ಲಿ ಇತ್ತೀಚಿಗೆ ಸಾಕಷ್ಟು ಸೌಲಭ್ಯಗಳನ್ನು ಕೂಡ ಪರಿಚಯಿಸಲಾಗಿದೆ.

ಯುಪಿಐ ವಹಿವಾಟುಗಳಲ್ಲಿ ವಿಸ್ತರಣೆ ಮಾಡಲಾಗುತ್ತದೆ. ಗ್ರಾಹಕರಿಗಾಗಿ ಹೊಸ ಹೊಸ ಸೇವೆಗಳ ಸೌಲಭ್ಯವನ್ನು ಯುಪಿಐ ವಹಿವಾಟುಗಳು (UPI Payment) ನೀಡುತ್ತಿವೆ. ಇದೀಗ ಯುಪಿಐ ವಹಿವಾಟುಗಳಲ್ಲಿ ಒಂದಾದ ಫೋನ್ ಪೇ ತನ್ನ ಬಳಕೆದಾರರಿಗೆ ಸಿಹಿ ಸುದ್ದಿ ನೀಡಿದೆ. ಫೋನ್ ಪೇ (PhonePe) ಹೊಸ ಸೌಲಭ್ಯದ ಕುರಿತು ಮಾಹಿತಿ ತಿಳಿಯೋಣ. 

PhonePe Loan Update
Image Credit: Moneycontrol

ಫೋನ್ ಪೇ ಬಳಸುವವರಿಗೆ ಭರ್ಜರಿ ಆಫರ್
ಸದ್ಯ ಫೋನ್ ಪೇ ಅನ್ನು ಕೇವಲ ಪೇಮೆಂಟ್ ಗೆ ಮಾತ್ರವಲ್ಲ ಸಾಲಕ್ಕೂ ಬಳಸಬಹುದಾಗಿದೆ. ಹೌದು, ಫೋನ್ ಪೇ ತನ್ನ ಬಳಕೆದಾರರಿಗೆ ಬಹಳ ಸುಲಭವಾಗಿ ವಯಕ್ತಿಕ  ಸಾಲ ಸೌಲಭ್ಯವನ್ನು ನೀಡುತ್ತಿದೆ. Axis ಬ್ಯಾಂಕ್, HDFC ಬ್ಯಾಂಕ್ ಹಾಗು ಇತರ ಬ್ಯಾಂಕ್ ಗಳ ನಡುವೆ ಫೋನ್ ಪೇ ಮಧ್ಯವರ್ತಿ ಆಗಿ ಕಾರ್ಯ ನಿರ್ವಹಿಸುತ್ತದೆ. ನೀವು ಫೋನ್ ಪೇಮೂಲಕ 1,00,000 ಗಳ ವರೆಗೂ ಸಾಲ ಪಡೆಯಬಹುದು. ಯಾವುದೇ ಅಡಮಾನ ದಾಖಲೆ ಇಲ್ಲದೇ ಈ ಸಾಲವನ್ನು ನೀವು ಬಹಳ ಸುಲಭವಾಗಿ ಪಡೆಯಬಹುದಾಗಿದೆ.

5 ನಿಮಿಷದಲ್ಲಿ ಸಿಗಲಿದೆ 1 ಲಕ್ಷ ರೂ. ಸಾಲ
ಫೋನ್ ಪೇ ವೈಯಕ್ತಿಕ ಸಾಲ ಪಡೆಯಲು ನೀವು ಫೋನ್ ಪೇ ಬಳಕೆದಾರರಾಗಿರಬೇಕು ಹಾಗು ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮ ಆಗಿರುವುದು ಕಡ್ಡಾಯ ಆಗಿದೆ. ಫೋನ್ ಪೇ ಮೂಲಕ ಲೋನ್ ಪಡೆಯುವ ಲಭ್ಯತೆ ಮತ್ತು ನಿಯಮಗಳು ನಿಮ್ಮ ಹತ್ತಿರದ ಸಾಲ ಪಾಲುದಾರ ಮತ್ತು ನಿಮ್ಮ ಅಪ್ಲಿಕೇಶನ್‌ ನ ಸ್ಥಿತಿಯನ್ನು ಅವಲಂಬಿಸಿರಬಹುದು.

ಫೋನ್ ಪೇ ಮೂಲಕ ವೈಯಕ್ತಿಕ ಸಾಲವನ್ನು ಪಡೆಯಲು, ನೀವು ಫೋನ್ ಪೇಅಪ್ಲಿಕೇಶನ್‌ ನಲ್ಲಿ ಲಭ್ಯವಿರುವ ಕ್ರೆಡಿಟ್ ಅಥವಾ ಸಾಲ ವಿಭಾಗಕ್ಕೆ ಹೋಗಬೇಕು. ಅಲ್ಲಿ ನೀವು ಅಗತ್ಯ ಮಾಹಿತಿಯನ್ನು ಒದಗಿಸಬೇಕಾಗುತ್ತದೆ ಮತ್ತು ಸಾಲವನ್ನು ಪಡೆಯಲು ನಿಮ್ಮ ಸೂಕ್ತತೆಯನ್ನು ಪರಿಶೀಲಿಸಲಾಗುತ್ತದೆ. ನೀವು ಫೋನ್ ಪೇ ನ ಮೂಲಕ ಕೇವಲ 5 ನಿಮಿಷದಲ್ಲಿ 1 ಲಕ್ಷದವರೆಗೆ ಸಾಲವನ್ನು ಪಡೆಯಬಹುದು.

Join Nadunudi News WhatsApp Group

PhonePe Loan Latest News
Image Credit: Indiatv

Join Nadunudi News WhatsApp Group