PM Kisan: ಕಿಸಾನ್ 16 ನೇ ಕಂತಿನ ಹಣ ಇನ್ನೂ ಖಾತೆಗೆ ಬಂದಿಲ್ವಾ…? ಹಾಗಾದರೆ ತಕ್ಷಣ ಈ ಕೆಲಸ ಮಾಡಿ

PM Kisan ಯೋಜನೆಯ ಹಣ ಜಮಾ ಆಗಿಲ್ಲವೆಂದರೆ ಈ ಸಮಸ್ಯೆಗಳನ್ನು ಇಂದೇ ಪರಿಹರಿಸಿಕೊಳ್ಳಿ.

PM Kisan 16th Installment Money Not Credit: ದೇಶದಲ್ಲಿ ಫೆಬ್ರವರಿ 2019 ರಂದು PM Kisan ಯೋಜನೆ ಜಾರಿಯಾಗಿದೆ. Pradhan Mantri Kisan Samman Nidhi ಯೋಜನೆಯ ಬಗ್ಗೆ ಈಗಾಗಲೇ ಎಲ್ಲರಿಗು ಮಾಹಿತಿ ತಿಳಿದಿರಬಹುದು. ಈ ಯೋಜನೆಯಡಿ ಮೋದಿ ಸರ್ಕಾರ ರೈತರಿಗಾಗಿ 6 ಸಾವಿರ ಉಚಿತವಾಗಿ ಹಣ ನೀಡುತ್ತದೆ.

ನಾಲ್ಕು ತಿಂಗಳಿಗೊಮ್ಮೆ ವರ್ಷಕ್ಕೆ ಮೂರು ಬಾರಿ 2 ಸಾವಿರ ರೂಪಾಯಿಯಂತೆ 6 ಸಾವಿರ ರೂ. ರೈತರ ಖಾತೆಗೆ ಸರ್ಕಾರ ಜಮಾ ಮಾಡುತ್ತಿದೆ. ಸದ್ಯ PM Kisan ಯೋಜನೆಯ 16 ಕಂತಿನ ಹಣ ಜಮಾ ಆಗುವ ಬಗ್ಗೆ ಬಿಗ್ ಅಪ್ಡೇಟ್ ಲಭಿಸಿದೆ.

PM Kisan 16th Installment
Image Credit: Marathigold

PM KIsan ಯೋಜನೆಯ 16 ನೇ ಕಂತಿನ ಹಣ ಜಮಾ
PM Kisan ಯೋಜನೆಯಡಿ ರೈತರ ಖಾತೆಗೆ ಈಗಾಗಲೇ 15 ಕಂತುಗಳ ಹಣ ಜಮಾ ಆಗಿದೆ. ಇನ್ನು ನವೆಂಬರ್ ನಲ್ಲಿ 15 ನೇ ಕಂತಿನ ಹಣ ಜಮಾ ಆಗಿದ್ದು, ಇದೀಗ 16 ಕಂತಿನ ಹಣ ಜಮಾ ಆಗುವ ಬಗ್ಗೆ ಸರ್ಕಾರ ಘೋಷಣೆ ಹೊರಡಿಸಿದೆ. ಲೋಕ ಸಭಾ ಚುನಾವಣೆಗೂ ಮುನ್ನವೇ ಯೋಜನೆಯ ಫಲಾನುಭವಿಗಳಿಗೆ ಹಣ ಜಮಾ ಮಾಡಲು ಸರ್ಕಾರ ಮುಂದಾಗಿದೆ. ಫೆಬ್ರವರಿ 29 ರಂದು Kisan ಫಲಾನುಭವಿಗಳಿಗೆ ಬಹುತೇಕ ಹಣ ಜಮಾ ಆಗಿದೆ. ಇನ್ನೆರಡು ದಿನಗಳಲ್ಲಿ ದೇಶದ ಎಲ್ಲ ಅರ್ಹ ಫಲಾನುಭವಿಗಳಿಗೆ ಹಣ ಜಮಾ ಆಗಲಿದೆ. ಆದಾಗ್ಯೂ, ನಿಮಗೆ ಹಣ ಜಮಾ ಆಗಿಲ್ಲವೆಂದಾದರೆ ಈ ಸಮಸ್ಯೆಗಳನ್ನು ಇಂದೇ ಪರಿಹರಿಸಿಕೊಳ್ಳಿ.

16 ನೇ ಕಂತಿನ ಹಣ ಜಮಾ ಆಗಿಲ್ಲವಾದರೆ ಇಂದೇ ಈ ಕೆಲಸ ಪೂರ್ಣಗೊಳಿಸಿಕೊಳ್ಳಿ
•ರೈತರು ಇ -ಕೆವೈಸಿ ಹಾಗೂ ಭೂ ದಾಖಲೆಗಳನ್ನು ನವೀಕರಣ ಮಾಡುವುದು ಕಡ್ಡಾಯವಾಗಿದೆ. ಭೂ ದಾಖಲೆ ನವೀಕರಣ ಆಗದ ಕಾರಣ ಸಾಕಷ್ಟು ರೈತರ ಖಾತೆಗೆ ಹಣ ಜಮಾ ಆಗುತ್ತಿಲ್ಲ.

•ಇನ್ನು ನೀವು ಯೋಜನೆಯ ಅರ್ಜಿ ಸಲ್ಲಿಕೆಯಲ್ಲಿ ನೀಡಿದ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗದೆ ಇರುವುದು ಕೂಡ ಸಮಸ್ಯೆಯಾಗುತ್ತದೆ.

Join Nadunudi News WhatsApp Group

•ಹಾಗೆಯೆ ಆಧಾರ್ ಕಾರ್ಡ್ ಅನ್ನು National Payment Corporation of India ಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ. NPCI ನಿಂದ ಅನುಮೋದನೆ ಪಡೆಯುವ ವರೆಗೆ Kisan ಯೋಜನೆಯ ಹಣ ಜಮಾ ಆಗಲು ಸಾಧ್ಯವಿಲ್ಲ.

PM KIsan E-KYC Mandatory
Image Credit: Nvshq

PM Kisan ಯೋಜನೆಯ ಸ್ಟೇಟಸ್ ಚೆಕ್ ಮಾಡಿಕೊಳ್ಳುವ ವಿಧಾನ
•PM-Kisan pmkisan.gov.in ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿನೀಡಿ ನಿಮ್ಮ ಅರ್ಹತೆಯನ್ನು ಪರಿಶೀಲಿಸಿಕೊಳ್ಳಬಹುದು.

•ಮುಖಪುಟದಲ್ಲಿ ‘Farmer’s Corner’ ಆಯ್ಕೆಮಾಡಿ.

•ಇದರ ನಂತರ ‘Beneficiary Status’ ಮೇಲೆ ಕ್ಲಿಕ್ ಮಾಡಿ

•ಇದರ ನಂತರ ನೀವು ಡ್ರಾಪ್- ಡೌನ್ ಮೆನುವಿನಿಂದ ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ಬ್ಲಾಕ್ ಅಥವಾ ಗ್ರಾಮವನ್ನು ಆಯ್ಕೆ ಮಾಡಬಹುದು.

•ಇದರ ನಂತರ ಸ್ಟೇಟಸ್ ತಿಳಿಯಲು ‘Get Report’ ಮೇಲೆ ಕ್ಲಿಕ್ ಮಾಡಿ ಸುಲಭವಾಗಿ PM Kisan ಯೋಜನೆಯ ಸ್ಟೇಟಸ್ ಪರಿಶೀಲಿಸಿಕೊಳ್ಳಬಹುದು.

Join Nadunudi News WhatsApp Group