Kisan Update: ರೈತರಿಗೆ ಕೇಂದ್ರದಿಂದ ಬಿಗ್ ಅಪ್ಡೇಟ್, ಕಿಸಾನ್ 16 ಕಂತಿನ ಹಣ ಈ ದಿನದಂದು ಖಾತೆಗೆ ಜಮಾ.

ಈ ದಿನದಂದು ಖಾತೆಗೆ ಜಮಾ ಆಗಲಿದೆ ಕಿಸಾನ್ 16 ನೇ ಕಂತಿನ ಹಣ

PM Kisan 16th Installment Update: ಸದ್ಯ Central Govt ದೇಶದ ರೈತರಿಗೆ ಆರ್ಥಿಕವಾಗಿ ಬೆಂಬಲವನ್ನು ನೀಡಲು PM Kisan ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯಡಿ ಕೋಟ್ಯಂತರ ರೈತರು ಹಣವನ್ನು ಪಡೆಯುತ್ತಿದ್ದು, ತಮ್ಮ ಕೃಷಿಗೆ ಬಳಸಿಕೊಳ್ಳುತ್ತಿದ್ದಾರೆ.

ವರ್ಷದಲ್ಲಿ ಮೂರು ಬಾರಿ PM Kisan ಕಂತುಗಳ ಹಣ ನಾಲ್ಕು ತಿಂಗಳಿಗೊಮ್ಮೆ ಅರ್ಹ ರೈತರ ಖಾತೆಗೆ ಜಮಾ ಆಗುತ್ತದೆ. ಈಗಾಗಲೇ ರೈತರು ಈ ಯೋಜನೆಯಡಿ 15 ಕಂತುಗಳ ಹಣವನ್ನು ಪಡೆದುಕೊಂಡಿದ್ದಾರೆ. ಸದ್ಯ ರೈತರು 16 ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ. ಇದೀಗ 16 ನೇ ಕಂತಿನ ಹಣಕ್ಕಾಗಿ ಖಾತೆ ಚೆಕ್ ಮಾಡಿಕೊಳ್ಳುತ್ತಿರುವ ರೈತರಿಗೆ ಗುಡ್ ನ್ಯೂಸ್ ಹೊರಬಿದ್ದಿದೆ.

PM Kisan 16th Installment Update
Image Credit: Dhruvvaninews

ಕಿಸಾನ್ 16 ಕಂತಿನ ಹಣ ಈ ದಿನದಂದು ಖಾತೆಗೆ ಜಮಾ
ಸದ್ಯ ಕಿಸಾನ್ ಯೋಜನೆಯ 16 ನೇ ಕಂತಿನ ಹಣ ಬಿಡುಗಡೆ ಸರ್ಕಾರ ದಿನಾಂಕವನ್ನು ನಿಗದಿಪಡಿಸಿದೆ. ಫೆ. ತಿಂಗಳ ಅಂತ್ಯದ ವೇಳೆಗೆ ಅಥವಾ ಮಾರ್ಚ್ ನ ಆರಂಭದಲ್ಲಿ ಕಿಸಾನ್ ಫಲಾನುಭವಿಗಳ ಖಾತೆಗೆ 16 ನೇ ಕಂತಿನ 2000 ರೂ ಹಣ ಜಮಾ ಆಗಲಿದೆ. ಶೀಘ್ರದಲ್ಲೇ ಅರ್ಹ ರೈತರು 16 ನೇ ಕಂತಿನ ಹಣದ ಲಾಭವನ್ನು ಪಡೆಯಬಹುದು. ಇನ್ನು ಕಿಸಾನ್ ಫಲಾನುಭವಿಗಳು ಈ ಕಂತಿನ ಹಣವನ್ನು ಪಡೆಯಲು ಸರ್ಕಾರದ ನಿಯಮಾನುಸಾರ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸಿಕೊಳ್ಳಬೇಕಿದೆ.

ಈ ಕೆಲಸ ಪೂರ್ಣಗೊಂಡಿದ್ದರೆ ಮಾತ್ರ ಖಾತೆಗೆ ಜಮಾ ಆಗಲಿದೆ 16 ನೇ ಕಂತಿನ ಹಣ
PM ಕಿಸಾನ್ ಫಲಾನುಭವಿಗಳ 16 ನೇ ಕಂತಿನ ಹಣವನ್ನು ತಮ ಖಾತೆಗೆ ಜಮಾ ಮಾಡಿಕೊಳಬೇಕಿದ್ದರೆ ಕೆಲವು ಮುಖ್ಯ ಕೆಲಸಗಳನ್ನು ಪೂರ್ಣಗೊಳಿಸಿಕೊಳ್ಳುವುದು ಅಗತ್ಯವಾಗಿದೆ. ರೈತರು ಮುಖ್ಯವಾಗಿ KYC ಮಾಡಿಸಿಕೊಳ್ಳಬೇಕಿದೆ. e-KYC ಜೊತೆಗೆ ಭೂ ದಾಖಲೆಗಳನ್ನು ನವೀಕರಣ ಮಾಡುವುದು ಕಡ್ಡಾಯವಾಗಿದೆ.

PM Kisan 16th Installment
Image Credit: Marathigold

ನೀವು ಅರ್ಜಿ ನಮೂನೆಯಲ್ಲಿ Bank ವಿವರವನ್ನು ತಪ್ಪಾಗಿ ನೀಡಿದರೆ ನಿಮ್ಮ ಖಾತೆಗೆ 16 ನೇ ಕಂತಿನ ಹಣ ಜಮಾ ಆಗುವುದಿಲ್ಲ. ಹಾಗಾಗಿ ನೀವು ನೀಡುವ Bank Details ಸರಿಯಾಗಿದೆಯೇ..? ಎನ್ನುವುದನ್ನು ಒಮ್ಮೆ ಪರಿಶೀಲಿಸಿಕೊಳ್ಳಿ. ಇನ್ನು Aadhaar Card ಅನ್ನು NPCI ಲಿಂಕ್ ಮಾಡುವುದು ಕಡ್ಡಾಯವಾಗಿದೆ. NPCI ನಿಂದ ಅನುಮೋದನೆ ಪಡೆಯುವವರೆಗೆ ಕಿಸಾನ್ ಯೋಜನೆಯ ಹಣ ಜಮಾ ಆಗಲು ಸಾಧ್ಯವಿಲ್ಲ ಎನ್ನುವುದು ನಿಮಗೆ ನೆನಪಿರಲಿ.

Join Nadunudi News WhatsApp Group

Join Nadunudi News WhatsApp Group