PM Kisan Money: ಈ ದಿನ ಕಿಸಾನ್ 17 ನೇ ಕಂತಿನ ಹಣ ನಿಮ್ಮ ಖಾತೆಗೆ, ಕೇಂದ್ರದ ಅಧಿಕೃತ ಆದೇಶ.

ಈ ದಿನ ಕಿಸಾನ್ 17 ನೇ ಕಂತಿನ ಹಣ ನಿಮ್ಮ ಖಾತೆಗೆ ಜಮಾ

PM Kisan 17th Installment Amount Release Date: ಕೇಂದ್ರದ ಮೋದಿ ಸರ್ಕಾರ ದೇಶದ ರೈತರಿಗಾಗಿ PM Kisan ಯೋಜನೆಯನ್ನು ಪರಿಚಯಿಸಿರುವ ಬಗ್ಗೆ ಎಲ್ಲರಿಗು ತಿಳಿದೇ ಇದೆ. ದೇಶದ ಕೋಟ್ಯಾಂತರ ರೈತರು PM Kisan ಯೋಜನೆಯಡಿ ಹಣವನ್ನು ಪಡೆಯುತ್ತಿದ್ದಾರೆ. ಮೋದಿ ಸರ್ಕಾರ ಈವರೆಗೆ 16 ಕಂತುಗಳ ಹಣವನ್ನು ರೈತರ ಖಾತೆಗೆ ಜಮಾ ಮಾಡಿದೆ. ರೈತರು ಈ ಹಣವನ್ನು ತಮ್ಮ ಕೃಷಿಗಾಗಿ ಬಳಸಿಕೊಂಡಿದ್ದಾರೆ.

ಸದ್ಯ ಸರ್ಕಾರ 17 ನೇ ಕಂತಿನ ಹಣವನ್ನು ಬಿಡುಗಡೆ ಮಾಡಬೇಕಿದೆ. ಕಿಸಾನ್ ಫಲಾನುಭವಿಗಳು 17 ನೇ ಕಂತಿನ ಬರುವಿಕೆಗಾಗಿ ಕಾಯುತ್ತಿದ್ದಾರೆ. ಲೋಕಸಭಾ ಚುನಾವಣೆಯ ಬಳಿಕ 17 ನೇ ಕಂತಿನ ಹಣ ಬಿಡುಗಡೆ ಆಗುತ್ತದೆ ಎಂದು ರೈತರು ಕಾಯುತ್ತಿದ್ದರು. ಸದ್ಯ ಲೋಕಸಭಾ ಚುನಾವಣೆ ಮುಗಿದಿದ್ದು, ಇದೀಗ ದೇಶದ ಎಲ್ಲಾ ರೈತರಿಗೆ ಮೋದಿ ಸಿಹಿ ಸುದ್ದಿ ನೀಡಿದ್ದಾರೆ.

PM Kisan 17th Installment
Image Credit: Schemehub

ಕಿಸಾನ್ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರದ ಅಧಿಕೃತ ಆದೇಶ
ಲೋಕಸಭಾ ಚುನಾವಣೆಯಲ್ಲಿ BJP ಸರ್ಕಾರ NDA ಸಹಭಾಗಿತ್ವದೊಂದಿಗೆ ಸರ್ಕಾರ ರಚಿಸಿದೆ. ಜೂನ್ 9 ರಂದು ಸತತ ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಮೋದಿ ಪ್ರಮಾಣವಚನ ಸ್ವೀಕರಿಸಿ ಮೂರನೇ ಬಾರಿಗೆ ಪ್ರಧಾನಿ ಸ್ಥಾನವನ್ನು ಪಡೆದ ಬೆನ್ನಲ್ಲೇ ದೇಶದ ರೈತರಿಗೆ ಸಿಹಿ ಸುದ್ದಿ ನೀಡಿದ್ದಾರೆ.

ಇನ್ನು 17 ನೇ ಕಂತಿನ ಕಿಸಾನ್ ಹಣಕ್ಕಾಗಿ ಕಾಯುತ್ತಿದ್ದವರಿಗೆ ಮೋದಿ ಸರ್ಕಾರ ಮುಂದಿನ ಕಂತಿನ ಹಣವನ್ನು ಬಿಡುಗಡೆ ಎಂದಿದೆ. ಜೂನ್ 11 ರಂದು ನರೇಂದ್ರ ಮೋದಿ ಅವರು PM Kisan ಯೋಜನೆಯ 17 ನೇ ಕಂತಿನ ಹಣದ ಬಿಡುಗಡೆಗೆ ಸಹಿ ಮಾಡಿದ್ದಾರೆ. ಪ್ರಧಾನಮಂತ್ರಿ ಕಿಸಾನ್ ನಿಧಿಯ 17ನೇ ಕಂತಿನ ಬಿಡುಗಡೆಗೆ ಅಧಿಕಾರ ನೀಡುವ ಮೊದಲ ಕಡತಕ್ಕೆ ಪ್ರಧಾನಿ ನರೇಂದ್ರ ಮೋದಿ ಸಹಿ ಹಾಕಿದ್ದಾರೆ. ಇದರಿಂದ 9.3 ಕೋಟಿ ರೈತರಿಗೆ ಅನುಕೂಲವಾಗಲಿದೆ.

PM Kisan 17 th Installment Date
Image Credit: Jjmup

ಈ ದಿನ ಕಿಸಾನ್ 17 ನೇ ಕಂತಿನ ಹಣ ನಿಮ್ಮ ಖಾತೆಗೆ
ಪ್ರಧಾನ ಮಂತ್ರಿ ಕಿಸಾನ್ ನಿಧಿಯ 17ನೇ ಕಂತಿಗಾಗಿ ಸುಮಾರು 20,000 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಲಾಗಿದೆ. ಕಿಸಾನ್ ಫಲಾನುಭವಿಗಳು 17 ನೇ ಕಂತಿನ 2000 ಹಣವನ್ನು ಪಡೆಯಬಹುದು. ಜೂನ್- ಜುಲೈ ನಲ್ಲಿ 17 ನೇ ಕಂತಿನ ಹಣ ರೈತರ ಖಾತೆಗೆ ಜಮಾ ಆಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಇದೀಗ ಜೂನ್ ನಲ್ಲಿ ಕಿಸಾನ್ 17 ನೇ ಕಂತಿನ ಹಣ ಬಿಡುಗಡೆಯಾಗಿದೆ.

Join Nadunudi News WhatsApp Group

ಜೂನ್ 18 ರಂದು ಪ್ರಧಾನಿ ಮೋದಿ ಅವರು ತಮ್ಮ ಸಂಸದೀಯ ಕ್ಷೇತ್ರ ವಾರಣಾಸಿಯಿಂದ ದೇಶದ 9.3 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ತಲಾ 2,000 ರೂ. ಜಮಾ ಮಾಡಲಿದ್ದಾರೆ. ಈ ಅವಧಿಯಲ್ಲಿ ರೈತರ ಖಾತೆಗಳಿಗೆ ಸುಮಾರು 20 ಸಾವಿರ ಕೋಟಿ ರೂ. ಹಣ ಬಿಡುಗಡೆಯಾಗಿದೆ. ಜೂನ್ 18 ರಂದು ಕಿಸಾನ್ ಫಲಾನುಭವಿಗಳು ತಮ್ಮ ಖಾತೆಗೆ 17 ನೇ ಕಂತಿನ ಹಣ ಬಂದಿದೆಯಾ ಎಂದು ಚೆಕ್ ಮಾಡಿಕೊಳ್ಳಬಹುದು.

PM Kisan 17th Installment Amount Release Date
Image Credit: gnttv

Join Nadunudi News WhatsApp Group