PM Kisan: ಕಿಸಾನ್ 15 ನೇ ಕಂತಿನ ಹಣ ಇನ್ನೂ ಜಮಾ ಆಗಿಲ್ವ…? ಕಿಸಾನ್ ಹಣ ಬೇಕು ಅಂದರೆ ತಕ್ಷಣ ಈ ಕೆಲಸ ಮುಗಿಸಿಕೊಳ್ಳಿ

PM ಕಿಸಾನ್ ಯೋಜನೆಯ ಹಣ ನಿಮ್ಮ ಖಾತೆಗೆ ಜಮಾ ಆಗಿಲ್ಲವಾ...? ರೈತರೇ ನಿಮ್ಮ ಖಾತೆಗೆ ಹಣ ಜಮಾ ಆಗದೆ ಇರಲು ಇದೆ ಕಾರಣ.

PM Kisan New Update: ಕೇಂದ್ರ ಸರಕಾರ ರೈತರಿಗಾಗಿ PM Kisan ಯೋಜನೆಯನ್ನು ಪರಿಚಯಿಸಿದ್ದು, ಈ ಯೋಜನೆಯಡಿ ಆರ್ಥಿಕ ಆರ್ಥಿಕ ನೇರವಾಗಿ ವಾರ್ಷಿಕವಾಗಿ 6000 ರೂ ಹಣವನ್ನು ನೀಡುತ್ತಿದೆ. ದೇಶದ ಅರ್ಹ ರೈತರು ನಾಲ್ಕು ತಿಂಗಳಿಗೊಮ್ಮೆ ಕಿಸಾನ್ ಯೋಜನೆಯಡಿ 2000 ರೂ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ. ಈಗಾಗಲೇ ಈ ಯೋಜನೆಯಡಿ 15 ಕಂತುಗಳ ಹಣ ರೈತರ ಖಾತೆಗೆ ತಲುಪಿದೆ.

PM Kisan New Update
Image Credit: Samacharjagat

PM ಕಿಸಾನ್ ಯೋಜನೆಯ ಹಣ ನಿಮ್ಮ ಖಾತೆಗೆ ಜಮಾ ಆಗಿಲ್ಲವಾ…?
ಫೆಬ್ರವರಿ ಮಾರ್ಚ್ ನಲ್ಲಿ ಹದಿನಾರನೇ ಕಂತಿನ ಹಣ ಕೂಡ ಅರ್ಹರ ಖಾತೆಗೆ ಜಮಾ ಆಗಲಿದೆ. ಆದರೆ ಸರ್ಕಾರ ಹಣವನ್ನು ಬಿಡುಗಡೆ ಮಾಡಿದರು ಕೂಡ ಕೆಲ ಅರ್ಹ ರೈತರ ಖಾತೆಗೆ ಯೋಜನೆಗೆ ಹಣ ಜಮಾ ಆಗಿಲ್ಲ. ಈ ಬಗ್ಗೆ ರೈತರಿಗೆ ಇದೀಗ ಆತಂಕ ಆರಂಭವಾಗಿದೆ. ಇದಕ್ಕೆ ಕಾರಣ ಏನಿರಬಹುದು ಎಂದು ರೈತರು ಯೋಚಿಸುತ್ತಿದ್ದಾರೆ. ಇದೀಗ ನಾವು ಕಿಸಾನ್ ಯೋಜನೆಯ ಹಣ ಜಮಾ ಆಗದೆ ಇದ್ದರೆ ಏನು ಮಾಡಬೇಕು ಅನ್ನುವುದರ ಬಗ್ಗೆ ನಾವು ಈಗ ತಿಳಿಯೋಣ.

ಕಿಸಾನ್ ಹಣ ಜಮಾ ಆಗದ ರೈತರಾಯಿಗಾಗಿ ಸರ್ಕಾರದ ಮಹತ್ವದ ನಿರ್ಧಾರ
ಕಿಸಾನ್ ಯೋಜನೆಯಲ್ಲಿ ಹೆಸರು ನೋಂದಾಯಿಸಿದ್ದರೂ ಖಾತೆಗೆ ಹಣ ಜಮಾ ಆಗಿಲ್ಲ ಎಂದು ಹಲವು ರೈತರು ದೂರುತ್ತಿದ್ದಾರೆ. ಈ ಹಿನ್ನಲೆಯಲ್ಲಿ ರೈತರ ಈ ಸಮಸ್ಯೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಸರ್ಕಾರ ಆಂದೋಲನ ಆರಂಭಿಸಿದೆ.

ಕೃಷಿ ಸಚಿವಾಲಯವು ಹತ್ತು ದಿನಗಳ ಕಾಲ ಈ ಅಭಿಯಾನವನ್ನು ಕೈಗೊಂಡಿದೆ. ದೇಶಾದ್ಯಂತ ವಿವಿಧ ರಾಜ್ಯ ಸರ್ಕಾರಗಳು ಮತ್ತು ಜಿಲ್ಲಾಡಳಿತಗಳು ಈ ಕಾರ್ಯಕ್ಕೆ ಸಹಕಾರ ನೀಡಲಿದ್ದು, ನಾಲ್ಕು ಲಕ್ಷ ಸಿಎಸ್‌ಸಿ ಕೇಂದ್ರಗಳ ಮೂಲಕ ಅರ್ಹ ರೈತರಿಗೆ ಹಣ ಜಮಾ ಆಗದೆ ಇರಲು ಕಾರಣವನ್ನು ಕಂಡುಹಿಡಿದು ಅರ್ಹ ರೈತರಿಗೆ ಪರಿಹಾರವನ್ನು ನೀಡಲು ಅಭಿಯಾನವನ್ನು ಆರಂಭಿಸಲಾಗಿದೆ.

PM KIsan E-KYC Mandatory
Image Credit: Nvshq

ರೈತರೇ ನಿಮ್ಮ ಖಾತೆಗೆ ಹಣ ಜಮಾ ಆಗದೆ ಇರಲು ಇದೆ ಕಾರಣ
•ರೈತರು ಇ -ಕೆವೈಸಿ ಹಾಗೂ ಭೂ ದಾಖಲೆಗಳನ್ನು ನವೀಕರಣ ಮಾಡುವುದು ಕಡ್ಡಾಯವಾಗಿದೆ. ಭೂ ದಾಖಲೆ ನವೀಕರಣ ಆಗದ ಕಾರಣ ಸಾಕಷ್ಟು ರೈತರ ಖಾತೆಗೆ ಹಣ ಜಮಾ ಆಗುತ್ತಿಲ್ಲ.

Join Nadunudi News WhatsApp Group

•ಇನ್ನು ನೀವು ಯೋಜನೆಯ ಅರ್ಜಿ ಸಲ್ಲಿಕೆಯಲ್ಲಿ ನೀಡಿದ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗದೆ ಇರುವುದು ಕೂಡ ಸಮಸ್ಯೆಯಾಗಿದೆ.

•ಹಾಗೆಯೆ ಆಧಾರ್ ಕಾರ್ಡ್ ಅನ್ನು ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ. NPCI ನಿಂದ ಅನುಮೋದನೆ ಪಡೆಯುವವರೆಗೆ ಕಿಸಾನ್ ಯೋಜನೆಯ ಹಣ ಜಮಾ ಆಗಲು ಸಾಧ್ಯವಿಲ್ಲ.

Join Nadunudi News WhatsApp Group