Modi Formula: ಪರೀಕ್ಷೆ ಬರೆಯುವ ಮಕ್ಕಳಿಗೆ ಮೋದಿ ಕಡೆಯಿಂದ ಬಂತು 6 ಸೂತ್ರಗಳು, ವಿದ್ಯಾರ್ಥಿಗಳೇ ಇದನ್ನ ಪಾಲಿಸಿ

ಪರೀಕ್ಷೆಯ ಸಮಯದಲ್ಲಿ ಪ್ರಧಾನಿ ಮೋದಿಯವರಿಂದ ವಿದ್ಯಾರ್ಥಿಗಳಿಗೆ ಉತ್ತಮ ಟಿಪ್ಸ್

PM Modi Pariksha Charcha 2024: ಪ್ರಧಾನಿ ಮೋದಿ (Narendra Modi) ವಿದ್ಯಾರ್ಥಿಗಳಿಗಾಗಿ ಕೆಲವು ಟಿಪ್ಸ್ ಗಳನ್ನೂ ನೀಡಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಪ್ರಿಪರೇಟರಿ, ವಾರ್ಷಿಕ ಪರೀಕ್ಷೆ ನಡೆಯುತ್ತದೆ . ವಿದ್ಯಾರ್ಥಿಗಳು ಬಹಳ ಭಯಪಡುವ ಸಮಯ ಇದಾಗಿರುತ್ತದೆ.

ಕೇವಲ ವಿದ್ಯಾರ್ಥಿಗಳು ಮಾತ್ರವಲ್ಲದೆ ಪೋಷಕರು ಹಾಗು ಶಿಕ್ಷಕರು ಸಹ ಬಹಳ ಒತ್ತಡಕ್ಕೆ ಒಳಗಾಗುವುದುಂಟು. ಮಕ್ಕಳು ಮಾನಸಿಕ ಒತ್ತಡಕ್ಕೆ ಒಳಗಾಗಬಾರದೆಂದು, ಮಕ್ಕಳಲ್ಲಿ ಮಾನಸಿಕ ಒತ್ತಡ ಕಡಿಮೆ ಮಾಡಲು ಮೋದಿಯವರು ಪರೀಕ್ಷಾ ಪೆ ಚರ್ಚಾ ಎಂಬ ಕಾರ್ಯಕ್ರಮ ನಡೆಸಿ ಅದ್ಭುತವಾದ ಟಿಪ್ಸ್ ನೀಡಿದ್ದಾರೆ. ಈ ಟಿಪ್ಸ್ ಖಂಡಿತ ಮಕ್ಕಳ ಸಾಧನೆಗೆ ಸಹಾಯವಾಗಲಿದೆ.

PM Modi Pariksha Charcha 2024
Image Credit: NDTV

ಪ್ರಧಾನಿಯಿಂದ ಪೋಷಕರಿಗೆ ಉತ್ತಮ ಕಿವಿಮಾತು

ವಿದ್ಯಾರ್ಥಿಗಳ ಪೋಷಕರು ಮಕ್ಕಳಿಗೆ ಆತ್ಮ ವಿಶ್ವಾಸವನ್ನು ತುಂಬಬೇಕು, ಶಿಕ್ಷಕರು ಹಾಗೂ ಪೋಷಕರು ಮಕ್ಕಳ ಮೇಲೆ ತುಂಬಾ ಒತ್ತಡ ಹಾಕುವುದನ್ನು ಬಿಡಬೇಕು .ಎಲ್ಲದಕ್ಕಿಂತ ಹೆಚ್ಚಾಗಿ ನಿಮ್ಮ ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ಹೋಲಿಸಿ ಅವರ ಮನಸ್ಸಿನ ಮೇಲೆ ಪ್ರಭಾವ ಬೀರಬೇಡಿ ಎಂದು ಹೇಳುತ್ತಾರೆ. ಬೇರೆ ಮಕ್ಕಳು ಮಾತ್ರವಲ್ಲದೆ ಸ್ವಂತ ಮನೆಯ ಮಕ್ಕಳ ಮೇಲು ಯಾವುದೇ ರೀತಿಯ ಹೋಲಿಕೆಯ ಮಾತು ಬೇಡ ಇದು ತಾರತಮ್ಯಕ್ಕೆ ಕಾರಣವಾಗುತ್ತದೆ. ಆದ್ದುದರಿಂದ ಇಂತಹ ವಿಚಾರವಾಗಿ ಪೋಷಕರು ಬಹಳ ಜಾಗರೂಕರಾಗಿರಿ.

ಮಕ್ಕಳು ಮಾನಸಿಕವಾಗಿ ಒತ್ತಡಕ್ಕೆ ಒಳಗಾಗದಂತೆ ನೋಡಿಕೊಳ್ಳಿ

Join Nadunudi News WhatsApp Group

ಶಿಕ್ಷಣದ ಸಮಯ ಇದು ಬಹಳ ಸವಾಲುಗಳಿಂದ ಕೂಡಿರುತ್ತದೆ. ಬೇರೆ ಬೇರೆ ಸ್ಕೂಲ್ , ಕಾಲೇಜು ಹೊಸ ಸ್ನೇಹಿತರು, ಶಿಕ್ಷಕರು ಇವೆಲ್ಲ ಮಕ್ಕಳ ಮೇಲೆ ಪರಿಣಾಮ ಬೀರುತ್ತಿರುತ್ತದೆ ಹಾಗಾಗಿ ಯಾವುದೇ ಕಾರಣಕ್ಕೂ ಮಕ್ಕಳಿಗೆ ಯಾವುದೇ ಒತ್ತಡವನ್ನು ನೀಡಬೇಡಿ. ಮಾನಸಿಕವಾಗಿ ಅವರು ಖುಷಿಯಾಗಿ ಇರಬೇಕು. ಮಕ್ಕಳ ಜೊತೆ ಪೋಷಕರು ತಮಾಷೆ ಮಾಡಿಕೊಂಡು, ಆಟ ಆಡಿಕೊಂಡು, ಮಕ್ಕಳು ಆರಾಮಾಗಿ ಇರುವಂತೆ ನೋಡಿಕೊಳ್ಳಿ. ಮಕ್ಕಳಿಗೆ ಯಾವುದರ ಮೇಲೆ ಆಸಕ್ತಿ ಇದೆಯೋ ಅದನ್ನು ಮಾಡಲು ಅವಕಾಶ ಮಾಡಿಕೊಡಿ ಎಂದು ಪ್ರಧಾನಿ ಮೋದಿಯವರು ಹೇಳುತ್ತಾರೆ.

PM Modi Advice To Students
Image Credit: Naidunia

ಮಕ್ಕಳಿಗಾಗಿ ಹೊಸ ಪೆನ್ನನ್ನು ಖರೀದಿಸಬೇಡಿ

ಮಕ್ಕಳಿಗೆ ಪರೀಕ್ಷೆ ಆರಂಭ ಅಂದ ತಕ್ಷಣ ಪೋಷಕರು ಹೊಸ ಪೆನ್ನು ಖರೀದಿ ಮಾಡಲು ಪ್ರಾರಂಭ ಮಾಡುತ್ತಾರೆ ಅಂತಹ ತಪ್ಪನ್ನು ಯಾವತ್ತಿಗೂ ಮಾಡಬೇಡಿ ಎಂದು ಪ್ರಧಾನಿ ಹೇಳುತ್ತಾರೆ. ಮಕ್ಕಳು ಪ್ರತಿನಿತ್ಯ ಬಳಸಿದ ಪೆನ್ನನ್ನೇ ಬಳಸಲಿ ಎಂದು ಸಲಹೆ ನೀಡಿದ್ದಾರೆ, ಅಭ್ಯಾಸವಾದ ಪೆನ್ನು ಬಳಸಿದರೆ ಸರಾಗವಾಗಿ ಬರೆಯಬಹುದು, ಅಲ್ಲದೆ ಈ ಸಮಯದಲ್ಲಿ ಮಕ್ಕಳಿಗೆ ಆರಾಮದಾಯಕವಾಗಿ ಇರುವಂತೆ ವಾತಾವರಣ ಸೃಷ್ಟಿಸಿ ಎಂದು ಪೋಷಕರಿಗೆ ಸಲಹೆ ನೀಡಿದರು.

ಶಿಕ್ಷಕರು ವಿದ್ಯಾರ್ಥಿಯೊಂದಿಗೆ ಚೆನ್ನಾಗಿರಬೇಕು

ಮೊದಲ ದಿನದಿಂದಲೂ ಪರೀಕ್ಷೆಯವರೆಗೂ ವಿದ್ಯಾರ್ಥಿಯೊಂದಿಗೆ ಶಿಕ್ಷಕರ ಬಾಂಧವ್ಯ ಉತ್ತಮವಾಗಿರಬೇಕು. ವಿದ್ಯಾರ್ಥಿಗಳೊಂದಿಗೆ ಬಾಂಧವ್ಯ ಚೆನ್ನಾಗಿದ್ದರೆ ಸಣ್ಣಪುಟ್ಟ ಸಮಸ್ಯೆಗಳಾದಾಗಲೂ ಅವರು ಖಂಡಿತವಾಗಿಯೂ ನಿಮ್ಮೊಂದಿಗೆ ಮಾತನಾಡುತ್ತಾರೆ ಎಂದು ಶಿಕ್ಷಕರಿಗೆ ಸಲಹೆ ನೀಡಿದ್ದಾರೆ.

Join Nadunudi News WhatsApp Group