Raam Ayenge: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು ಅಯೋಧ್ಯೆಯ ರಾಮ ಬರುವನು ಹಾಡು, ಮೋದಿ ಕೂಡ ಹಾಡಿಗೆ ಫಿದಾ

ರಾಮ ಬರುವನು ಬರುವನು ಹಾಡಿಗೆ ನರೇಂದ್ರ ಮೋದಿ ಫುಲ್ ಫಿದಾ, ಹಾಡು ಫುಲ್ ವೈರಲ್

PM Modi Tweet On Swati Mishra Raam Ayenge Bhajan Song: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ (Ayodhya Ram Mandir) ಉದ್ಘಾಟನೆ ಜನವರಿ 22  2024 ರಂದು ಅದ್ದೂರಿಯಾಗಿ ನಡೆಯಲಿದ್ದು ಅಯೋಧ್ಯೆ ಸುಂದರವಾಗಿ ಸಿದ್ಧವಾಗುತ್ತಿದೆ.

ಕೋಟ್ಯಂತರ ಜನರ ಕನಸು ಈ ರಾಮಮಂದಿರ ಹಾಗಾಗಿ ಇದರ ಪ್ರತಿಷ್ಠಾಪನೆ ಅಂದರೆ ಊಹಿಸಲು ಅಸಾಧ್ಯವಾಗದ ರೀತಿಯಲ್ಲಿ ನೆರವೇರಲಿದೆ ಎನ್ನಬಹದು. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಅಯೋಧ್ಯೆಯ ಫೋಟೋಗಳು ಹಾಗು ಅಲ್ಲಿನ ಸಿದ್ಧತೆಗಳ ವಿಡಿಯೋಗಳನ್ನು ನೋಡಬಹುದಾಗಿದೆ. ಅಷ್ಟೇ ಅಲ್ಲದೇ ರಾಮನ ಈ ಒಂದು ಹಾಡು ಎಲ್ಲಾರ ಗಮನ ಸೆಳೆಯುತ್ತಿದೆ.

PM Modi Tweet On Swati Mishra Ram Aayenge Bhajan Song
Image Credit: dknewsindia

ರಾಮ ಬರುವನು.ಬರುವನು ಹಾಡು ಸಿಕ್ಕಾಪಟ್ಟೆ ವೈರಲ್

ಈಗಾಗಲೇ ದೇಶದಾದ್ಯಂತ ರಾಮಜಪ ಪ್ರಾರಂಭ ಆಗಿದ್ದು, ಎಲ್ಲೇ ಕೇಳಿದರು ರಾಮನ ಬಗ್ಗೆ, ಅಯೋಧ್ಯೆಯ ಬಗೆಯೇ ಮಾತುಕತೆ ನಡೆಯುತ್ತಿದೆ. ಈ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಒಂದು ಹಾಡು ತುಂಬಾ ವೈರಲ್ ಆಗುತ್ತಿದೆ. ಬಿಹಾರದ ಛಾಪ್ರಾ ನಿವಾಸಿ ಸ್ವಾತಿ ಮಿಶ್ರಾ ರಾಮ ಬರುವನು ಬರುವನು ಈ ಹಾಡನ್ನು ಹಾಡಿದ್ದಾರೆ. ಪ್ರಧಾನಿ ಮೋದಿ (Narendra Modi) ಕೂಡ ಈ ಹಾಡಿನ ಅಭಿಮಾನಿಯಾಗಿದ್ದು, ಟ್ವೀಟ್ ನಲ್ಲಿ ಹಾಡನ್ನು ಹಂಚಿಕೊಂಡಿದ್ದಾರೆ.

Join Nadunudi News WhatsApp Group

ಈ ಭಕ್ತಿ ಭಜನೆ ಮಂತ್ರಮುಗ್ಧಗೊಳಿಸುತ್ತದೆ ಎಂದು ಹೇಳಿದ ಪ್ರಧಾನಿ

ರಾಮ ಬರುವನು.ಬರುವನು ಹಾಡು ಸೋಶಿಯಲ್ ಮೀಡಿಯಾದಲ್ಲಿ ಹಿಟ್ ಆಗಿದ್ದಲ್ಲದೆ, ಈ ಹಾಡಿಗೆ ಮೋದಿಯವರು ಸಹ ಫಿದಾ ಆಗಿದ್ದಾರೆ. “ಶ್ರೀ ರಾಮ್ ಲಾಲಾ ಅವರನ್ನು ಸ್ವಾಗತಿಸುವ ಸ್ವಾತಿ ಮಿಶ್ರಾ ಜಿ ಅವರ ಈ ಭಕ್ತಿ ಭಜನೆ ಮಂತ್ರಮುಗ್ಧಗೊಳಿಸುತ್ತದೆ” ಎಂದು ಪ್ರಧಾನಿ ನರೇಂದ್ರ ಮೋದಿ X ನಲ್ಲಿ ಬರೆದಿದ್ದಾರೆ.

ತನ್ನ ಯೂಟ್ಯೂಬ್ ಲಿಂಕ್ ಅನ್ನು ಹಂಚಿಕೊಂಡಿರುವ ಪ್ರಧಾನಿ ಮೋದಿ, ಸ್ವಾತಿ ಮಿಶ್ರಾ ಅವರನ್ನು ಶ್ಲಾಘಿಸಿದ್ದಾರೆ. ಈ ಹಾಡನ್ನು ಸ್ವಾತಿ ಮಿಶ್ರಾ ಅವರ ಯೂಟ್ಯೂಬ್ ಚಾನೆಲ್ ನಿಂದ ಬಿಡುಗಡೆ ಮಾಡಲಾಗಿದೆ. ಈ ಹಾಡು ಇದುವರೆಗೆ 42 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ.

Join Nadunudi News WhatsApp Group