PM Modi: ಮದುವೆಯಾಗುವ ಎಲ್ಲರಿಗೂ ಖಡಕ್ ಆದೇಶ ಹೊರಡಿಸಿದ ನರೇಂದ್ರ ಮೋದಿ, ಮದುವೆ ಬಗ್ಗೆ ಮೋದಿ ಆದೇಶ.

ಮದುವೆಯ ಕುರಿತಂತೆ ಆದೇಶ ಹೊರಡಿಸಿದ ನರೇಂದ್ರ ಮೋದಿ.

PM Modi’s Vocal For Local Campaign: ನರೇಂದ್ರ ಮೋದಿ (Narendra Modi) ಅವರು ದೇಶದ ಅಭಿವೃದ್ದಿಗಾಗಿ ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ದೇಶದ ಅಭಿವೃದಿ ಮೋದಿ ಅವರ ಏಕೈಕ ಗುರಿ ಎನ್ನಬಹುದು.

ಇನ್ನು ದೇಶದ ಬಡ ಜನರಿಗಾಗಿ ಮೋದಿ ಅವರು ಸಾಕಷ್ಟು ಯೋಜನೆಗಳನ್ನು ಪರಿಚಯಿಸುತ್ತಾ ದೇಶದ ಜನತೆಗೆ ಆರ್ಥಿಕವಾಗಿ ಬೆಂಬಲವನ್ನು ನೀಡುತ್ತಿರುವುದು ಎಲ್ಲರಿಗು ತಿಳಿದಿರುವ ವಿಚಾರ. ಇದೀಗ ನರೇಂದ್ರ ಮೋದಿ ಅವರು 107 ನೇ ಕಂತಿನ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ದೇಶದ ಜನತೆಗೆ ಸಂವಿಧಾನ ದಿನದ ಶುಭಾಶಯ ಕೋರಿ ತನ್ನ Vocal for Local ಗೆ ಒತ್ತು ನೀಡಿದ್ದಾರೆ.

PM Modi's Vocal For Local Campaign
Image Credit: NDTV

ಮದುವೆಯಾಗುವ ಎಲ್ಲರಿಗೂ ಖಡಕ್ ಆದೇಶ ಹೊರಡಿಸಿದ ನರೇಂದ್ರ ಮೋದಿ
107 ನೇ ಕಂತಿನ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ದೇಶದ ಜನತೆಗೆ ಸಂವಿಧಾನ ದಿನದ ಶುಭಾಶಯ ಕೋರಿದ ಪ್ರಧಾನಿ ಮೋದಿ, ಭಾರತೀಯ ಕುಟುಂಬಗಳು ತಮ್ಮವರ ಮದುವೆಗಳನ್ನು ವಿದೇಶಗಳಲ್ಲಿ ಮಾಡೋದೇಕೆ ಎಂದು ಪ್ರಧಾನಿ ಮೋದಿ ಪ್ರಶ್ನಿಸಿದ್ದಾರೆ. ಭಾರತೀಯರು ತಮ್ಮವರ ಮದುವೆಗಳನ್ನು ಭಾರತದೊಳಗೇ ಆಯೋಜಿಸಲಿ ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ವಿದೇಶಕ್ಕೆ ಹೋಗಿ ಮದುವೆ ಆಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಇದು ಅಗತ್ಯ ಇದೆಯಾ..? ಭಾರತದ ಜನರ ನಡುವೆ ಮದುವೆಯಾದರೆ ದೇಶದ ಹಣ ದೇಶದಲ್ಲಿಯೇ ಉಳಿಯುತ್ತದೆ. ಈ ಕಾರಣಕ್ಕಾಗಿ ಮೋದಿ ವಿದೇಶಗಳಲ್ಲಿ ಮದುವೆಗಳನ್ನು ಆಯೋಜಿಸದಂತೆ ದೇಶದಲ್ಲಿಯೇ ನಡೆಸುವಂತೆ ಶ್ರೀಮಂತ ಕುಟುಂಬಗಳನ್ನು ಆಗ್ರಹಿಸಿದ್ದಾರೆ.

Wedding In India
Image Credit: The Federal

ಉದ್ದೇಶ…
ಈಗಾಗಲೇ ಮದುವೆ ಸೀಜನ್ ಆರಂಭಗೊಂಡಿದೆ. ಮದುವೆ ಸಂದರ್ಭಗಳಲ್ಲಿ ಭಾರತದಲ್ಲಿ ತಯಾರಾದ ಉತ್ಪನ್ನಗಳನ್ನು ಮಾತ್ರ ಖರೀದಿಸುವಂತೆ ಮೋದಿ ಅವರು ಕರೆ ನೀಡಿದ್ದಾರೆ. ಮದುವೆ ಸಂದರ್ಭದಲ್ಲಿ ಸುಮಾರು 5 ಲಕ್ಷ ಕೋಟಿ ರೂಪಾಯಿಗಳ ವಹಿವಾಟು ನೆಡೆಯಬಹುದು ಎಂದು ಕೆಲವು ವ್ಯಾಪಾರ ಸಂಸ್ಥೆಗಳು ಅಂದಾಜಿಸಿವೆ. ಸ್ಥಳೀಯ ಉದ್ಯಮಗಳನ್ನು ಪ್ರೋತ್ಸಾಹಿಸುವ, ಸ್ಥಳೀಯರಿಗೆ ಉದ್ಯೋಗಾವಕಾಶ ನೀಡುವ ಹಾಗೂ ಸ್ಥಳೀಯ ಸಂಪನ್ಮೂಲಗಳ ಸದ್ಬಳಕೆಯಾಗುವ ಉದ್ದೇಶದಿಂದ ನರೇಂದ್ರ ಮೋದಿ ಅವರು ಈ ಆದೇಶವನ್ನು ಹೊರಡಿಸಿದ್ದಾರೆ. ಇದರಿಂದ ಬಡವರಿಗೂ ನಾಲ್ಕು ಕಾಸು ಗಳಿಸುವ ಅವಕಾಶವಿರುತ್ತದೆ ಎಂದು ಮೋದಿ ಹೇಳಿದರು.

Join Nadunudi News WhatsApp Group

Join Nadunudi News WhatsApp Group