POMIS: ಪ್ರತಿ ತಿಂಗಳು ಸಿಗಲಿದೆ 5500 ರೂ, ಬಡವರಿಗಾಗಿ ಪೋಸ್ಟ್ ಆಫೀಸ್ ನಲ್ಲಿ ಇನ್ನೊಂದು ಹೊಸ ಯೋಜನೆ ಜಾರಿ.

ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಪ್ರತಿ ತಿಂಗಳು ಸಿಗಲಿದೆ 5500 ರೂ

Post Office Monthly Income Scheme Details: ನಿಮ್ಮ ಹಣದ ಉಳಿತಾಯಕ್ಕಾಗಿ ಉತ್ತಮ ಹೂಡಿಕೆಯ ಯೋಜನೆಯನ್ನು ಹುಡುಕುತ್ತಿದ್ದರೆ Post Office ನಲ್ಲಿ ಅಂತಹ ಅನೇಕ ಯೋಜನೆಗಳಿವೆ. ನೀವು ಅತಿ ಕಡಿಮೆ ಹೂಡಿಕೆಯೊಂದಿಗೆ ಹೆಚ್ಚಿನ ಲಾಭವನ್ನು ಗಳಿಸಲು Post office ನಿಮಗಾಗಿ ಅನೇಕ ಯೋಜನೆಯನ್ನು ಪರಿಚಯಿಸಿದೆ.

ಇದೀಗ ನಾವು ಈ ಲೇಖನದಲ್ಲಿ ಪೋಸ್ಟ್ ಆಫೀಸ್ ನಲ್ಲಿ ಲಭ್ಯವಿರುವ ಉತ್ತಮ ಯೋಜನೆಯ ಬಗ್ಗೆ ಮಾಹಿತಿ ಹೇಳಲಿದ್ದೇವೆ. ನೀವು ಹೂಡಿಕೆಗಾಗಿ ಉತ್ತಮ ಯೋಜನೆಯನ್ನು ಹುಡುಕುತ್ತಿದ್ದರೆ ಈ ಮಾಹಿತಿ ನಿಮಗೆ ಉಪಯುಕ್ತವಾಗಲಿದೆ.

Post Office Monthly Income Scheme Details
Image Credit: Informalnewz

ಬಡವರಿಗಾಗಿ ಪೋಸ್ಟ್ ಆಫೀಸ್ ನಲ್ಲಿ ಇನ್ನೊಂದು ಹೊಸ ಯೋಜನೆ ಜಾರಿ
ಅಂಚೆ ಇಲಾಖೆಯು ನೀಡುತ್ತಿರುವ ಸಣ್ಣ ಉಳಿತಾಯ ಯೋಜನೆಗಳಲ್ಲಿ Post Office Monthly Income Scheme (POMIS) ಕೂಡ ಒಂದಾಗಿದೆ. POMIS ನಲ್ಲಿ ನೀವು ಒಮ್ಮೆ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭವನ್ನು ಪಡೆಯಬಹುದು. ಇನ್ನು Post Office Monthly Income Scheme ಹೂಡಿಕೆದಾರರಿಗೆ ಭದ್ರತೆಯನ್ನು ನೀಡುತ್ತದೆ ಎನ್ನಬಹುದು.

ಕಡಿಮೆ ಅಪಾಯದ ಹೂಡಿಕೆಯಲ್ಲಿ ಈ ಯೋಜನೆಯು ಒಂದಾಗಿದೆ. ಪ್ರತಿ ತಿಂಗಳ ಹೂಡಿಕೆಯಲ್ಲಿ ಮೆಚ್ಯುರಿಟಿ ಅವಧಿಯ ನಂತರ ನಿಗದಿತ ಮೊತ್ತವನ್ನು ಪಡೆಯಬಹುದು. ಸ್ಥಿರ ಆದಾಯದ ಯೋಜನೆಗೆ Post Office Monthly Income Scheme ಉತ್ತಮ ಆಯ್ಕೆ ಎಂದರೆ ತಪ್ಪಾಗಲಾರದು. ಇದು ಅಲ್ಪಾವಧಿ ಹಾಗೂ ದೀರ್ಘಾವಧಿಯ ಹೂಡಿಕೆಯಾಗಿದ್ದು ಯೋಜನೆಯ ಅವಧಿಯು 5 ವರ್ಷದ್ದಾಗಿದೆ.

Post Office Monthly Income Scheme Profit
Image Credit: indmoney

ಪ್ರತಿ ತಿಂಗಳು ಸಿಗಲಿದೆ 5500 ರೂ.
Post Office ಮಾಸಿಕ ಯೋಜನೆಯಡಿ ಗಂಡ ಹಾಗು ಹೆಂಡತಿ ಅಂಚೆ ಕಚೇರಿಯಲ್ಲಿ ಜಂಟಿ ಖಾತೆಯನ್ನು ತೆರೆಯಬೇಕಾಗುತ್ತದೆ (Post Office Joint Account). ಖಾತೆಯನ್ನು ತೆರೆದ ನಂತರ, ನೀವು ಬಡ್ಡಿಯಿಂದ ಮಾತ್ರ ಪ್ರತಿ ತಿಂಗಳು ಉತ್ತಮ ಆದಾಯವನ್ನು ಪಡೆಯುತ್ತೀರಿ. ಈ ಯೋಜನೆಯಡಿ ಏಕ ಮತ್ತು ಜಂಟಿ ಖಾತೆಯನ್ನು ತೆರೆಯಲು ಅವಕಾಶವಿದೆ.

Join Nadunudi News WhatsApp Group

ಇನ್ನು ಏಕ ಖಾತೆಯಲ್ಲಿ 9 ಲಕ್ಷ ರೂ. ಗಳ ಹೂಡಿಕೆಯನ್ನು ಮಾಡಿದರೆ ಪ್ರತಿ ತಿಂಗಳು 5550 ರೂ. ಆದಾಯವನ್ನು ಪಡೆಯಬಹುದು. ಈ ಯೋಜನೆಯಡಿ ಗಂಡ ಹಾಗು ಹೆಂಡತಿ ಇಬ್ಬರೂ  ಜಂಟಿ ಖಾತೆಯನ್ನು ತೆರೆದು ಅದರಲ್ಲಿ ರೂ. 15 ಲಕ್ಷವನ್ನು ಠೇವಣಿ ಮಾಡಿದರೆ ನೀವು ಮಾಡಿದ ಈ ಹೂಡಿಕೆಯ ಮೇಲೆ 7.5 ಪ್ರತಿಶತದ ದರದಲ್ಲಿ ರೂ. 1,11,000 ವಾರ್ಷಿಕ ಬಡ್ಡಿಯನ್ನು ಪಡೆಯಬಹುದು. ಪ್ರತಿ ತಿಂಗಳು ನೀವು ಈ ಹೂಡಿಕೆಯಲ್ಲಿ ಲಾಭದ ಮೊತ್ತವನ್ನು ಪಡೆಯಬಹುದು.

Post Office Monthly Income Scheme
Image Credit: Wintwealth

Join Nadunudi News WhatsApp Group