PM-KMY: ಕೇಂದ್ರದಿಂದ ಇನ್ನೊಂದು ಯೋಜನೆ, ತಿಂಗಳಿಗೆ ಕೇವಲ 55 ರೂ ಹೂಡಿಕೆ ಮಾಡಿದರೆ ಸಿಗಲಿದೆ 3,000 ರೂ ಪಿಂಚಣಿ.

ಈ ಯೋಜನೆಯಲ್ಲಿ ತಿಂಗಳಿಗೆ ಕೇವಲ 55 ರೂ ಹೂಡಿಕೆ ಮಾಡಿದರೆ ಸಿಗಲಿದೆ 3000 ರೂ ಪಿಂಚಣಿ.

Pradhan Mantri Kisan Maandhan Yojana: ಕೇಂದ್ರದ ಮೋದಿ ಸರ್ಕಾರ ಇತ್ತೀಚಿಗೆ ದೇಶದ ರೈತರಿಗಾಗಿ ವಿವಿಧ ಯೋಜನೆಯನ್ನು ಪರಿಚಯಿಸಿದೆ. ಸದು ಇದೀಗ ರೈತರ ವೃದ್ದಾಪ್ಯದಲ್ಲಿ ನೆರವಾಗಲು ಕೇಂದ್ರ ಸರ್ಕಾರ ವಿಶೇಷ Pension ಯೋಜನೆಯನ್ನು ಜಾರಿಗೊಳಿಸಿದೆ.

ಕೇಂದ್ರದ ಈ ಯೋಜನೆಯಿಂದ ರೈತರು ಮಾಸಿಕ ಪಿಂಚಣಿಯನ್ನು (Monthly Pension) ಪಡೆಯುವ ಮೂಲಕ ತಮ್ಮ ವೃದ್ದಾಪ್ಯವನ್ನು ಯಾವುದೇ ಚಿಂತೆ ಇಲ್ಲದೆ ಕಳೆಯಬಹುದಾಗಿದೆ. ನಾವೀಗ ಈ ಲೇಖನದಲ್ಲಿ ಸರ್ಕಾರ ರೈತರಿಗಾಗಿ ಪರಿಚಯಿಸಿರುವ ಪಿಂಚಣಿ ಯೋಜನೆಯ ಬಗ್ಗೆ ಮಾಹಿತಿ ತಿಳಿಯೋಣ.

Pradhan Mantri Kisan Maandhan Yojana
Image Credit: Vakilsearch

ಕೇಂದ್ರದಿಂದ ಇನ್ನೊಂದು ಯೋಜನೆ ಜಾರಿ
ದೇಶದಲ್ಲಿನ ಬಡ ರೈತರಿಗೆ ಆರ್ಥಿಕ ನೆರವಾಗಲು Pradhan Mantri Kisan Maandhan Yojana (PM -KMY ) ಯನ್ನು ಕೇಂದ್ರ ಸರ್ಕಾರ ಪ್ರಾರಂಭಿಸಿದೆ. ಈ ಯೋಜನೆಯ ಅಡಿಯಲ್ಲಿ ರೈತರಿಗೆ ನಿಗದಿತ ಪಿಂಚಣಿಯ ಮೊತ್ತವನ್ನು ನೀಡಲಾಗುತ್ತದೆ. ಇನ್ನು 18  ರಿಂದ 40 ವರ್ಷ ವಯಸ್ಸಿನವರು ಈ ಪ್ರಧಾನ ಮಂತ್ರಿ ಕಿಸಾನ್ ಮನ್ ಧನ್ ಯೋಜನೆಯ ಲಾಭವನ್ನು ಪಡೆಯಬಹುದು. ನೀವು ಈ ಯೋಜನೆಯ ಲಾಭ ಪಡೆಯಲು ಪ್ರದಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ನೋಂದಣಿ ಮಾಡಿಕೊಂಡಿರುವುದು ಅಗತ್ಯವಾಗಿದೆ.

ಈ ಯೋಜನೆಯಲ್ಲಿ ಪಿಂಚಣಿ ಪಡೆಯಲು ಯಾವ ರೀತಿ ಹೂಡಿಕೆ ಮಾಡಬೇಕು…?
ಈ ಯೋಜನೆಯಲ್ಲಿ ವಯಸ್ಸಿಗೆ ಅನುಗುಣವಾಗಿ ಹೂಡಿಕೆ ಅನ್ವಯಾಗುತ್ತದೆ. ಇನ್ನು 18 ರಿಂದ 40 ವರ್ಷದವರು ಮಾತ್ರ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ನೀವು 18 ವರ್ಷದಲ್ಲಿ ಹೂಡಿಕೆ ಪ್ರಾರಂಭಿಸಿದೆ ತಿಂಗಳಿಗೆ 55 ರೂ., 30 ವರ್ಷದಲ್ಲಿ ಹೂಡಿಕೆ ಮಾಡಿದರೆ ತಿಂಗಳಿಗೆ 110 ರೂ. ಹೂಡಿಕೆ ಮಾಡಬೇಕಾಗುತ್ತದೆ. ಇನ್ನು 40 ವಯಸ್ಸಿನಲ್ಲಿ ಯೋಜನೆಗೆ ಹೂಡಿಕೆ ಮಾಡಿದರೆ ಪ್ರತಿ ತಿಂಗಳು 220 ರೂ. ಹೂಡಿಕೆ ಮಾಡಬೇಕು. ನಿಮ್ಮ ವಯಸ್ಸು 60 ವರ್ಷ ದಾಟಿದ ಮೇಲೆ ಪ್ರತಿ ತಿಂಗಳು ಪಿಂಚಣಿಯ ಲಾಭ ಪಡೆಯಬಹುದು.

PM Kisan Maandhan Yojana Profit
Image Credit: Apnakhata

ತಿಂಗಳಿಗೆ ಕೇವಲ 55 ರೂ ಹೂಡಿಕೆ ಮಾಡಿದರೆ ಸಿಗಲಿದೆ 3000 ರೂ ಪಿಂಚಣಿ
ಪ್ರಧಾನ ಮಂತ್ರಿ ಕಿಸಾನ್ ಮನ್ ಧನ್ ಯೋಜನೆಯಡಿಯಲ್ಲಿ ರೈತರಿಗೆ ಮಾಸಿಕ 3,000 ರೂಪಾಯಿ ಪಿಂಚಣಿ ನೀಡಲಾಗುತ್ತದೆ. ಅಂದರೆ ವಾರ್ಷಿಕವಾಗಿ ರೂ. 36,000 ಮೊತ್ತವನ್ನು ಪಡೆಯುತ್ತಾರೆ. ಇನ್ನು ಮನ್ ಧನ್ ಯೋಜನೆಯ ಮಾಸಿಕ ಕೊಡುಗೆಯು ರೂ. 55 ರಿಂದ ರೂ. 200 ರ ವರೆಗೆ ಇರುತ್ತದೆ. ಅಂದರೆ ವರ್ಷಕ್ಕೆ ಕನಿಷ್ಠ 660 ಮತ್ತು ಗರಿಷ್ಠ 24,00 ರೂ. ಆಗಿದೆ. ಈ ಹಣವನ್ನು ಕಡಿತಗೊಳಿಸಿದ ನಂತರ ಪಿಎಂ ಕಿಸಾನ್ ಹಣ ನಿಮ್ಮ ಖಾತೆಗೆ ಬರುತ್ತದೆ. 60 ವರ್ಷಗಳ ನಂತರ ಪಿಎಂ ಕಿಸಾನ್‌ ನ ಕಂತಿನಲ್ಲಿ ಯಾವುದೇ ಹಣವನ್ನು ಕಡಿತಗೊಳಿಸಲಾಗುವುದಿಲ್ಲ.

Join Nadunudi News WhatsApp Group

Join Nadunudi News WhatsApp Group