Umesh Yadav And Modi: ದುಃಖದಲ್ಲಿರುವ ಉಮೇಶ್ ಯಾದವ್ ಗೆ ಪತ್ರ ಬರೆದು ಸಾಂತ್ವನ ಹೇಳಿದ ನರೇಂದ್ರ ಮೋದಿ.

Narendra Modi wrote a letter to Umesh Yadav: ಫೆಬ್ರವರಿ 22 ರಂದು ಉಮೇಶ್ ಯಾದವ್ (Umesh Yadav) ಅವರು ತಮ್ಮ ತಂದೆಯನ್ನು ಕಳೆದುಕೊಂಡಿದ್ದರು. ತಂದೆಯ ನಿಧನದಿಂದ ದುಃಖದಲ್ಲಿದ್ದ ಟೀಮ್ ಇಂಡಿಯಾ ವೇಗಿ ಉಮೇಶ್ ಯಾದವ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಪತ್ರ ಬರೆಯುವ ಮೂಲಕ ಸಾಂತ್ವನ ಹೇಳಿದ್ದಾರೆ.

Narendra Modi consoled his father Umesh Yadav
Image Credit: instagram

ಪ್ರಧಾನಿ ನರೇಂದ್ರ ಮೋದಿ ಅವರು ಪ್ರೇರಣೆಯ ಮಾತುಗಳ ಜೊತೆಗೆ ಸಂತಾಪ ಸೂಚಿಸಿದ್ದಾರೆ. ಇಂದೋರ್ ಟೆಸ್ಟ್ ಗು ಮುನ್ನ ಉಮೇಶ್ ಯಾದವ್ ಜೀವನದಲ್ಲಿ ಘೋರ ದುರಂತ ಸಂಭವಿಸಿತ್ತು.

ಅವರ ತಂದೆ ತಿಲಕ್ ಯಾದವ್ (Tilak Yadav) ಅನಾರೋಗ್ಯದಿಂದ ನಿಧನರಾದರು. ಕಳೆದ ಕೆಲವು ದಿನಗಳಿಂದ ಬಳಲುತ್ತಿದ್ದ ತಿಲಕ್ ಯಾದವ್ ಅವರು ಫೆಬ್ರವರಿ 22 ರಂದು ಕೊನೆಯುಸಿರೆಳೆದಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಪತ್ರ ಬರೆಯುವ ಮೂಲಕ ಉಮೇಶ್ ಯಾದವ್ ಅವರಿಗೆ ಸಾಂತ್ವನ ಸೂಚಿಸಿದ್ದಾರೆ.

Prime Minister Narendra Modi consoled Umesh Yadav who lost his father by writing a letter
Image Credit: reuters

ಉಮೇಶ್ ಯಾದವ್ ಅವರಿಗೆ ಮೋದಿ ಸಾಂತ್ವನ
ತಂದೆಯ ಹಠಾತ್ ನಿಧನದ ಬಗ್ಗೆ ದುಃಖ ವ್ಯಕ್ತಪಡಿಸಿರುವ ಮೋದಿ, ಕ್ರಿಕೆಟ್ ಜಗತ್ತಿನಲ್ಲಿ ನಿಮ್ಮ ಈವರೆಗಿನ ಪ್ರಯಾಣದಲ್ಲಿ ನಿಮ್ಮ ತಂದೆಯ ತ್ಯಾಗ ಮತ್ತು ಸಮರ್ಪಣೆ ದೊಡ್ಡ ಪಾತ್ರವನ್ನು ವಹಿಸಿದೆ.

ಅವರು ನಿಮ್ಮ ಪ್ರತಿ ನಿರ್ಧಾರದಲ್ಲೂ ವಿಶ್ವಾಸ ವ್ಯಕ್ತಪಡಿಸುತ್ತ ನಿಮ್ಮ ಬೆಂಬಲಕ್ಕೆ ನಿಂತವರು ಎಂದು ಪ್ರಧಾನಿ ಪತ್ರದಲ್ಲಿ ಬರೆದಿದ್ದಾರೆ. ಇನ್ನು ಧೈರ್ಯ ತುಂಬಿದ ಪ್ರಧಾನಿ ಮೋದಿ ಅವರಿಗೆ ಉಮೇಶ್ ಯಾದವ್ ಧನ್ಯವಾದ ತಿಳಿಸಿದ್ದಾರೆ.

Join Nadunudi News WhatsApp Group

Narendra Modi sent a condolence letter to Umesh Yadav
Image Credit: instagram

ತಂದೆಯ ನಿಧನದ ದುಃಖದ ನಡುವೆಯೂ ಉಮೇಶ್ ಯಾದವ್ ಟೀಮ್ ಇಂಡಿಯಾ ಸೇರಿದ್ದು ಎಲ್ಲರ ಮೆಚ್ಚುಗೆಗೆ ಕಾರಣವಾಗಿತ್ತು.

ತಂದೆಯನ್ನು ಕಳೆದುಕೊಂಡು ದುಃಖದಲ್ಲು ಅಮೋಘ ಬೌಲಿಂಗ್ ಪ್ರದರ್ಶಿಸಿದ ಉಮೇಶ್ ಗೆ ಎಲ್ಲೆಡೆ ಪ್ರಶಂಸೆ ವ್ಯಕ್ತಪಗಿದ್ದವು. ತಂದೆಯ ಸಾವಿನ ನೋವಿನಲ್ಲಿರುವ ಸ್ಪೀಡ್ ಸ್ಟಾರ್ ಗೆ ಪ್ರಧಾನಿ ಮೋದಿ ಪತ್ರ ಬರೆದು ಸಂತಾಪ ಸೂಚಿಸಿದ್ದಾರೆ. ಇದೆ ವೇಳೆ ಉಮೇಶ್ ಅವರ ಸಮರ್ಪಣಾ ಕಾರ್ಯವನ್ನು ಶ್ಲಾಘಿಸಿದ್ದಾರೆ.

Join Nadunudi News WhatsApp Group