Railway Ticket: ಪ್ಲಾಟ್ ಪಾರ್ಮ್ ಟಿಕೆಟ್ ಬಳಸಿ ರೈಲು ಪ್ರಯಾಣ ಸಾಧ್ಯವೇ, ನಿಯಮದ ಬಗ್ಗೆ ತಿಳಿದುಕೊಳ್ಳಿ.

ಪ್ಲಾಟ್ಫಾರ್ಮ್ ಟಿಕೆಟ್ ಪಡೆದುಕೊಂಡು ರೈಲಿನಲ್ಲಿ ಪ್ರಯಾಣ ಮಾಡಬಹುದಾ, ನಿಯಮಗಳ ಬಗ್ಗೆ ತಿಳಿದುಕೊಳ್ಳಿ.

Indian Railway Platform Ticket: ದೂರದ ಪ್ರಯಾಣ ಬಯಸುವವರು ರೈಲು ಪ್ರಯಾಣವನ್ನು ಆರಿಸುತ್ತದೆ. ಪ್ರತಿ ನಿತ್ಯ ರೈಲುಗಳಲ್ಲಿ ಲಕ್ಷಾಂತರ ಪ್ರಯಾಣಿಕರು ಪ್ರಯಾಣಿಸುತ್ತಾರೆ. ರೈಲು ಪ್ರಯಾಣವು ಆರಾಮದಾಯಕ ಹಾಗೂ ಸುರಕ್ಷಿತವಾಗಿರುತ್ತದೆ.

ಭಾರತೀಯ ರೈಲ್ವೆ (Indian Railway) ತನ್ನ ಪ್ರಯಾಣಿಕರ ಸುರಕ್ಷತೆಗಾಗಿ ಸಾಕಷ್ಟು ಸೌಲಭ್ಯಗಳನ್ನು ಒದಗಿಸುತ್ತಿದೆ. ಇನ್ನು ಇತ್ತೀಚಿನ ದಿನಗಳಲ್ಲಿ ಭಾರತೀಯ ರೈಲ್ವೆ ನಿಯಮಗಳು ಸಾಕಷ್ಟು ಬದಲಾಗಿವೆ.

Indian Railway Platform Ticket
Image Credit: zeenews

ರೈಲ್ವೆ ಟಿಕೆಟ್ ನಿಯಮದಲ್ಲಿ ಬದಲಾವಣೆ
ರೈಲ್ವೆ ಇಲಾಖೆಯು ಸಾಕಷ್ಟು ಸೌಲಭ್ಯಗಳ ಜೊತೆಗೆ ಹೊಸ ಹೊಸ ನಿಯಮಗಳನ್ನು ಜಾರಿಗೆ ತಂದಿವೆ. ಮಹಿಳೆಯರು, ಹಿರಿಯ ನಾಗರಿಕರು ಹಾಗೂ ಗರ್ಭಿಣಿಯರಿಗೆ ರೈಲ್ವೆ ಇಲಾಖೆ ವಿಶೇಷ ಸೌಲಭ್ಯವನ್ನು ಒದಗಿಸುತ್ತದೆ. ಇನ್ನು ರೈಲ್ವೆ ಟಿಕೆಟ್ ನಲ್ಲಿ ಸಾಕಷ್ಟು ನಿಯಮಗಳು ಇವೆ. ರೈಲ್ವೆ ಟಿಕೆಟ್ ನಿಯಮವನ್ನು (Railway Ticket Rule) ಉಲ್ಲಂಘಿಸಿದರೆ ಹೆಚ್ಚಿನ ದಂಡವನ್ನು ವಿದಿಸಬೇಕಾಗುತ್ತದೆ. ರೈಲ್ವೆ ಟಿಕೆಟ್ ನಿಯಮದಲ್ಲಿನ ಬದಲಾವಣೆಯ ಬಗ್ಗೆ ಮಾಹಿತಿ ತಿಳಿಯೋಣ.

ಪ್ಲಾಟ್ ಪಾರ್ಮ್ ಟಿಕೆಟ್ ಬಳಸಿ ರೈಲು ಪ್ರಯಾಣ
ಸಾಮಾನ್ಯವಾಗಿ ರೈಲಿನಲ್ಲಿ ಪ್ರಯಾಣಿಸಲು ಮಾನ್ಯವಾದ ಟಿಕೆಟ್ ಅಗತ್ಯವಿದೆ. ಟಿಕೆಟ್ ಇಲ್ಲದೆ ಇದ್ದೆ ಪ್ರಯಾಣ ಮಾಡಿದರೆ ದಂಡದ ಜೊತೆಗೆ ಜೈಲು ಶಿಕ್ಷೆ ಕೂಡ ಅನುಭವಿಸಬೇಕಾಗುತ್ತದೆ. ಪ್ರಯಾಣಿಕರು ರೈಲ್ವೆ ನಿಲ್ದಾಣದ ಟಿಕೆಟ್ ಕೌಂಟರ್ ನಿಂದ ಟಿಕೆಟ್ ಖರೀದಿಸಿದ್ದರೆ, ಅವರು ಭೌತಿಕ ಟಿಕೆಟ್ ಅನ್ನು ಕೊಂಡೊಯ್ಯುವುದು ಕಡ್ಡಾಯವಾಗಿದೆ. ಟಿಕೆಟ್ ನ ಫೋಟೋ ಅಥವಾ ಡಿಜಿಟಲ್ ಪ್ರತಿಯನ್ನು ಟಿಕೆಟ್ ಎಂದು ಪರಿಗಣಿಸಲಾಗುವುದಿಲ್ಲ.

Railway Ticket Rule Update
Image Credit: indiatoday

ಇನ್ನು ಪ್ಲಾಟ್ ಪಾರ್ಮ್ ಟಿಕೆಟ್ ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಮಾನ್ಯ ಟಿಕೆಟ್ ಇಲ್ಲದಿದ್ದರೂ ರೈಲು ಹತ್ತಲು ಅವಕಾಶ ನೀಡಲು ನಿಯಮವಿದೆ. ಈ ಟಿಕೆಟ್ ಅನ್ನು ರೈಲ್ವೆ ನಿಲ್ದಾಣದಲ್ಲಿ ಖರೀದಿಸಬಹುದು ಮತ್ತು ಒಮ್ಮೆ ಬೋರ್ಡಿಂಗ್ ನಲ್ಲಿ ಪ್ರಯಾಣಿಕನು ತನ್ನ ಬೋರ್ಡಿಂಗ್ ನಿಲ್ದಾಣದಿಂದ ತನ್ನ ಇನ್ನೊಂದು ಸ್ಥಳಕ್ಕೆ ಪ್ರಯಾಣಿಸಲು ಟಿಟಿಇ ನಿಂದ ಟಿಕೆಟ್ ಖರೀದಿಸಬಹುದು. ಪ್ರಯಾಣದ ವರ್ಗದ ಆಧಾರದ ಮೇಲೆ ದರವನ್ನು ನಿರ್ಧರಿಸಲಾಗುತ್ತದೆ.

Join Nadunudi News WhatsApp Group

Join Nadunudi News WhatsApp Group