Railway Ticket: ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ, ಶೇ. 25 ರಷ್ಟು ಟಿಕೆಟ್ ದರ ಕಡಿತ.

ರೈಲ್ವೆ ಪ್ರಯಾಣಿಕರಿಗಾಗಿ ರೈಲ್ವೆ ಇಲಾಖೆ ಟಿಕೆಟ್ ದರದಲ್ಲಿ ಹೊಸ ಘೋಷಣೆ ಹೊರಡಿಸಿದೆ.

Railway Ticket Discount: ಸಾಮಾನ್ಯವಾಗಿ ಜನರು ಹೆಚ್ಚಾಗಿ ದೂರದ ಪ್ರದೇಶಗಳಿಗೆ ಸಂಚಾರ ಮಾಡಲು ರೈಲು ಪ್ರಯಾಣವನ್ನು (Train Travel) ಬಯಸುತ್ತಾರೆ. ರೈಲು ಪ್ರಯಾಣವು ಆರಾಮದಾಯಕ ಮತ್ತು ಸುರಕ್ಷಿತವಾಗಿರುತ್ತದೆ. ಇನ್ನು ರೈಲು ಪ್ರಯಾಣದಲ್ಲಿ ಸಾಕಷ್ಟು ನಿಯಮಗಳು ಕೂಡ ಇರುತ್ತವೆ. ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆ ಹೊಸ ಹೊಸ ನಿಯಮಗಳ ಜೊತೆಗೆ ವಿಶೇಷ ಸೌಲಭ್ಯವನ್ನು ಜಾರಿಗೊಳಿಸುತ್ತಿದೆ.

ರೈಲಿನಲ್ಲಿ ಪ್ರಯಾಣಿಸುವವರು ರೈಲ್ವೆ ಸಂಚಾರದ ಪ್ರತಿಯೊಂದು ನಿಯಮವನ್ನು ಕೂಡ ಪಾಲಿಸಬೇಕಾಗುತ್ತದೆ. ಇದೀಗ ರೈಲ್ವೆ ಸಂಚಾರ ನಿಯಮದಲ್ಲಿ ಹೊಸ ನಿಯಮವೊಂದು ಸೇರಿಕೊಂಡಿದೆ. ರೈಲು ಪ್ರಯಾಣಿಕರಿಗೆ ಸಾಕಷ್ಟು ಸೌಲಭ್ಯಗಳನ್ನು ರೈಲ್ವೆ ಇಲಾಖೆ ನೀಡುತ್ತದೆ. ಇನ್ನು ರೈಲ್ವೆ ಕಡೆಯಿಂದ ಎಸಿ ಕೋಚ್ ಗಳಲ್ಲಿ ವಿಶೇಷ ಸೌಲಭ್ಯ ನೀಡಲಾಗುತ್ತದೆ. ಇದೀಗ ರೈಲ್ವೆ ಇಲಾಖೆ ಟಿಕೆಟ್ ದರದಲ್ಲಿ ಹೊಸ ಘೋಷಣೆ ಹೊರಡಿಸಿದೆ.

The Railway Department has issued a new announcement on ticket prices.
Image Credit: Erail

ಶೇ. 25 ರಷ್ಟು ಟಿಕೆಟ್ ದರ ಕಡಿತ
ವಂದೇ ಭಾರತ್ ಸೇರಿದಂತೆ ಎಲ್ಲ ಭಾರತೀಯ ರೈಲುಗಳಲ್ಲಿ ಎಸಿ ಚೆರ್ ಕಾರ್, ಎಕ್ಸಿಕ್ಯೂಟಿವ್ ಕ್ಲಾಸ್ ಶುಲ್ಕವನ್ನು ಶೇ. 26 ರಷ್ಟು ಕಡಿಮೆ ಮಾಡಲು ಭಾರತೀಯ ರೈಲ್ವೆ ನಿರ್ಧರಿಸಿದೆ. ರೈಲುಗಳಲ್ಲಿ  ವಸತಿ ಸೌಕರ್ಯದ ಬಳಕೆಯನ್ನು ಉತ್ತಮಗೊಳಿಸುವ ಉದ್ದೇಶದಿಂದ ರೈಲ್ವೆ ಸಚಿವಾಲಯವು ಎಸಿ ಕುಳಿತುಕೊಳ್ಳುವ ವಸತಿ ಹೊಂದಿರುವ ರೈಲುಗಳಲ್ಲಿ ರಿಯಾಯಿತಿ ಶುಲ್ಕ ಯೋಜನೆಯನ್ನು ಪರಿಚಯಿಸಲು ವಲಯ ರೈಲ್ವೆಗೆ ಅಧಿಕಾರವನ್ನು ನೀಡಲು ನಿರ್ಧರಿಸಿದೆ.

ರಿಯಾಯಿತಿಯ ಅಂಶವು ಮೂಲ ಶುಲ್ಕದ ಮೇಲೆ ಗರಿಷ್ಟ 25 % ವರೆಗೆ ಇರುತ್ತದೆ. ಅನ್ವಯವಾಗುವ ಮೀಸಲಾತಿ ಶುಲ್ಕ ಸೂಪರ್ ಫಾಸ್ಟ್ ಸರ್ಚಾರ್ಜ್, ಜಿಎಸ್ ಟಿ ಮುಂತಾದ ಇತರ ಶುಲ್ಕಗಳನ್ನು ಪ್ರತ್ಯೇಕವಾಗಿ ವಿಧಿಸಲಾಗುವುದು. ಆಕ್ಯುಪೆನ್ಸಿಯ ಆದಾರದ ಮೇಲೆ ಯಾವುದೇ ಅಥವಾ ಎಲ್ಲ ತರಗತಿಗಳಲ್ಲಿ ರಿಯಾಯಿತಿಯನ್ನು ಒದಗಿಸಬಹುದು.

The Railway Department has issued a new announcement on ticket prices.
Image Credit: Zeebiz

ಪ್ರಯಾಣದ ಮೊದಲ ಹಂತ ಅಥವಾ ಪ್ರಯಾಣದ ಕೊನೆಯ ಹಂತ ಅಥವಾ ಮಂಧ್ಯಂತರ ವಿಭಾಗಳು ಅಥವಾ ಅಂತ್ಯದಿಂದ ಅಂತ್ಯದ ಪ್ರಯಾಣಕ್ಕೆ ರಿಯಾಯಿತಿ ನೀಡಬಹುದು. ಆ ಕಾಲು ಅಥವಾ ವಿಭಾಗ ಅಥವಾ ಅಂತ್ಯದಿಂದ ಅಂತ್ಯದವರೆಗೆ ಆಕ್ಯುಪೆನ್ಸಿ 50 % ಗಿಂತಾ ಕಡಿಮೆಯಿದ್ದರೆ ರಿಯಾಯಿತಿ ಲಭ್ಯವಾಗುತ್ತದೆ.

Join Nadunudi News WhatsApp Group

Join Nadunudi News WhatsApp Group