Rajasthan: ಮಹಿಳೆಯರಿಗೆ ಉಚಿತ ಸ್ಮಾರ್ಟ್ ಫೋನ್ ಘೋಷಿಸಿದ ಕಾಂಗ್ರೆಸ್, ಕಾಂಗ್ರೆಸ್ ಇನ್ನೊಂದು ಘೋಷಣೆ.

ರಾಜಸ್ಥಾನ್ ಸರ್ಕಾರದಿಂದ ಮಹಿಳೆಯರಿಗೆ ಗುಡ್ ನ್ಯೂಸ್, ಉಚಿತ ಸ್ಮಾರ್ಟ್ ಫೋನ್ ಘೋಷಿಸಿದ ಕಾಂಗ್ರೆಸ್.

Rajasthan Government Free Smartphone Offer: ದೇಶದೆಲ್ಲೆಡೆ ರಾಜ್ಯ ಸರ್ಕಾರ (State Government) ಸಾಕಷ್ಟು ಯೋಜನೆಗಳನ್ನು ಬಿಡುಗಡೆ ಮಾಡಿದೆ. ಜನಸಾಮಾನ್ಯರು ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ.

ಇನ್ನು ರಾಜ್ಯ ಸರ್ಕಾರ ದೇಶದ ಮಹಿಳೆಯರಿಗೆ ಹೊಸ ಹೊಸ ಯೋಜನೆಗಳನ್ನು ಹಾಗೂ ಸೌಲಭ್ಯಗಳನ್ನು ನೀಡುತ್ತಲೇ ಇದ್ದಾರೆ. ಇದೀಗ ರಾಜ್ಯ ಸರ್ಕಾರ ರಕ್ಷಾ ಬಂಧನದ ದಿನ ಮಹಿಳೆಯರಿಗೆ ಹೊಸ ಸೌಲಭ್ಯ ನೀಡಲಿದೆ. ಯಾವ ರಾಜ್ಯದಲ್ಲಿ ಮಹಿಳೆಯರಿಗೆ ಹೊಸ ಸೌಲಭ್ಯ ಸಿಗಲಿದೆ ಎನ್ನುವ ಬಗೆ ಮಾಹಿತಿ ತಿಳಿಯೋಣ.

Women of Rajasthan will get free smart phones
Image Credit: moneycontrol

ರಾಜಸ್ಥಾನ ಸರ್ಕಾರದಿಂದ (Rajasthan Government) ಮಹಿಳೆಯರಿಗೆ ಗುಸ್ ನ್ಯೂಸ್
ರಾಜಸ್ಥಾನದ ಮಹಿಳೆಯರಿಗೆ ಇತ್ತೀಚಿಗೆ ಮುಖ್ಯಮಂತ್ರಿ ಅಶೋಕ್ ಅವರು ಸಿಹಿ ಸುದ್ದಿ ನೀಡಿದ್ದಾರೆ. ರಕ್ಷಾ ಬಂಧನದಂದು 40 ಲಕ್ಷ ಮಹಿಳೆಯರಿಗೆ ಮೂರು ವರ್ಷಗಳ ಇಂಟರ್ನೆಟ್ ಪ್ಯಾಕ್ ನೊಂದಿಗೆ ಉಚಿತ ಸ್ಮಾರ್ಟ್ ಫೋನ್ ಗಳನ್ನೂ ನೀಡುವುದಾಗಿ ಘೋಷಿಸಿದ್ದಾರೆ.

ರಾಜಸ್ಥಾನ ಸರ್ಕಾರದಿಂದ ಹೊಸ ಸುದ್ದಿ
ಕೆಲವು ದಿನಗಳ ಹಿಂದೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನಿಮಗೆ ನಾವು ಉಚಿತ ಸ್ಮಾರ್ಟ್ ಫೋನ್ ನೀಡುತ್ತೇವೆ, ಅದರಲ್ಲಿ ನಿಮಗೆ 3 ವರ್ಷಗಳವರೆಗೆ ಉಚಿತ ಇಂಟರ್ ನೆಟ್ ಸಗುತ್ತದೆ ಎಂದು ಹೇಳಿದ್ದರು. 2021 ರ ಬಜೆಟ್ ನಲ್ಲಿ ರಾಜಸ್ಥಾನದ 1.33 ಕೋಟಿ ಮಹಿಳೆಯರಿಗೆ ಸ್ಮಾರ್ಟ್ ಫೋನ್ ನೀಡುವುದಾಗಿ ಸಿಎಂ ಗೆಹ್ಲೋಟ್ ಘೋಷಿಸಿದ್ದಾರೆ.

ಕೆಲವು ಸಮಯದ ಹಿಂದೆ, ಅವರು ಈ ವರ್ಷದ ಆಗಸ್ಟ್ 30 ರ ರಕ್ಷಾಬಂಧನದಿಂದ ಹಂತ ಹಂತವಾಗಿ ಸ್ಮಾರ್ಟ್‌ಫೋನ್‌ಗಳನ್ನು ನೀಡುವ ಬಗ್ಗೆ ಮಾತನಾಡಿದ್ದಾರೆ.

Join Nadunudi News WhatsApp Group

Women of Rajasthan will get free smart phones
Image Credit: republicworld

ರಾಜಸ್ಥಾನದ ಮಹಿಳೆಯರಿಗೆ ಸಿಗಲಿದೆ ಉಚಿತ ಸ್ಮಾರ್ಟ್ ಫೋನ್
ಈ ಯೋಜನೆಗೆ ಸಂಬಂಧಿಸಿದಂತೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಇತ್ತೀಚಿನ ಹೇಳಿಕೆ ವೈರಲ್ ಆಗುತ್ತಿದೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮಹಿಳೆಯರಿಗೆ ಸ್ಮಾರ್ಟ್ ಫೋನ್ ನೀಡುವ ಬದಲು ಅವರ ಆಯ್ಕೆಯ ಮೊಬೈಲ್ ಫೋನ್ ಖರೀದಿಸಲು ನಿಗದಿತ ಮೊತ್ತವನ್ನು ಅವರ ಖಾತೆಗೆ ವರ್ಗಾಯಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಹೇಳಿದ್ದಾರೆ.

ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಫೋನ್ ಗಳು ವಿವಿಧ ವಿಶೇಷಣಗಳೊಂದಿಗೆ ಲಭ್ಯವಿದೆ. ಪ್ರತಿಯೊಬ್ಬರೂ ಈ ಹಣದಲ್ಲಿ ತಮ್ಮ ಆಯ್ಕೆಯ ಮೊಬೈಲ್ ಖರೀದಿಸುತ್ತಾರೆ.

Join Nadunudi News WhatsApp Group