Ramesh Aravind: ರಾಜಕೀಯಕ್ಕೆ ಬರುವುದರ ಬಗ್ಗೆ ಸ್ಪಷ್ಟನೆ ನೀಡಿದ ನಟ ರಮೇಶ್, ಎಲ್ಲಾ ಪಕ್ಷದಲ್ಲಿ ಗೆಳೆಯರಿದ್ದಾರೆ.

ರಾಜಕೀಯಕ್ಕೆ ಸೇರುತ್ತೀರಾ ಎಂದು ಪ್ರಶ್ನೆ ಕೇಳಿದ ಜನರಿಗೆ ನಟ ರಮೇಶ್ ಉತ್ತರವನ್ನ ನೀಡಿದ್ದಾರೆ.

Actor Ramesh Aravind About Politics: ವಿಧಾನಸಭಾ ಚುನಾವಣೆ (Assembly Election) ಹತ್ತಿರ ಬರುತ್ತಿದ್ದಂತೆ ಎಲ್ಲ ಕಡೆ ಪ್ರಚಾರಗಳು ಹೆಚ್ಚಾಗಿ ನಡೆಯುತ್ತಿದೆ. ಸಿನಿಮಾ ಸ್ಟಾರ್ ನಟ ನಟಿಯರು ಬೇರೆ ಬೇರೆ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ.

ನಟ ಕಿಚ್ಚ ಸುದೀಪ್, ಶಿವರಾಜ್ ಕುಮಾರ್, ಧ್ರುವ ಸರ್ಜಾ, ಪ್ರೇಮ್, ದಿಗಂತ್ ಸೇರಿದಂತೆ ಸಾಕಷ್ಟು ನಟರು ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಆದರೆ ನಟ ರಮೇಶ್ ಅರವಿಂದ್ ಅವರು ರಾಜಕೀಯದಿಂದ ದೂರ ಉಳಿದಿದ್ದರು. ಇದಕ್ಕೆ ಕಾರಣ ಸಹ ನಟ ರಮೇಶ್ ಅರವಿಂದ್ (Ramesh Aravind) ಅವರು ಹೇಳಿದ್ದಾರೆ.

Actor Ramesh gave the answer to the people who asked if he would join politics.
Image Credit: wikimedia

ರಾಜಕೀಯದಿಂದ ದೂರ ಇರುವ ನಟ ರಮೇಶ್ ಅರವಿಂದ್
ನಟ ರಮೇಶ್ ಅರವಿಂದ್ ಅವರು ರಾಜಕೀಯದಿಂದ ದೂರ ಇದ್ದಾರೆ. ಸಾಕಷ್ಟು ನಟ ನಟಿಯರು ರಾಜಕೀಯಕ್ಕೆ ಸೇರ್ಪಡೆಯಾಗದಿದ್ದರು ಕೂಡ ಪಕ್ಷಗಳ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಈ ನಡುವೆ ನಟ ಆರವಿಂದ್ ಅವರು ರಾಜಕೀಯ ಪ್ರಚಾರದಲ್ಲಿ ದೂರವಿರುವುದಕ್ಕೆ ಕಾರಣ ತಿಳಿಸಿದ್ದಾರೆ.

ರಾಜಕೀಯದಿಂದ ದೂರ ಉಳಿದಿರುವುದಕ್ಕೆ ಸ್ಪಷ್ಟನೆ ನೀಡಿದ ನಟ ರಮೇಶ್ ಅರವಿಂದ್
ನಟ ರಮೇಶ್ ಅರವಿಂದ್ ಅವರು ರಾಜಕೀಯದಿಂದ ದೂರ ಉಳಿದಿದ್ದರೆ. ಅದಕ್ಕೆ ಕಾರಣ ಸಹ ತಿಳಿಸಿದ್ದಾರೆ. ನಟ ರಮೇಶ್ ಅರವಿಂದ್ ಅವರು ಎಲ್ಲ ಪಕ್ಷದಲ್ಲೂ ನನ್ನ ಗೆಳೆಯರಿದ್ದಾರೆ. ಆದ್ದರಿಂದ ನಾನು ರಾಜಕೀಯದಿಂದ ದೂರ ಇದ್ದೇನೆ ಎಂದು ಹೇಳಿದ್ದಾರೆ.

Actor Ramesh Aravind clarified about joining politics that he has friends in all political parties
Image Credit: cinemaexpress

ನನಗೆ ಪ್ರಚಾರಕ್ಕೆ ಬನ್ನಿ ಅಂತ ಹಲವಾರು ಕರೆದರು. ಆದರೆ ನಾನು ಹೋಗಲಿಲ್ಲ. ನಾನು ರಾಜಕೀಯಕ್ಕೆ ತಲೆ ಹಾಕುವುದಿಲ್ಲ. ಬದಲಾಗಿ ತಟಸ್ಥನಾಗಿರಲು ಬಯಸುತ್ತೇನೆ. ಎಲ್ಲರೂ ನನಗೆ ಗೆಳೆಯರೇ, ಎಲ್ಲ ಪಕ್ಷದಲ್ಲೂ ಗೆಳೆಯರಿದ್ದಾರೆ. ನನ್ನ ಮಗಳ ಮದುವೆಗೆ ಆ ಪಕ್ಷ ಈ ಪಕ್ಷ ಅಂತ ನೋಡದೆ ಎಲ್ಲ ಪಕ್ಷದ ನಾಯಕರು ಬಂದಿದ್ದರು.

Join Nadunudi News WhatsApp Group

Join Nadunudi News WhatsApp Group