Ration Card Update: ಹೊಸ ರೇಷನ್ ಕಾರ್ಡುಗಳಿಗೆ ಅರ್ಜಿ ಹಾಕಿದವರಿಗೆ ಬೇಸರದ ಸುದ್ದಿ, ರೇಷನ್ ಸಿಗುವುದು ಕಷ್ಟ.

Ration Card Update: ರಾಜ್ಯದಲ್ಲಿ ಪಡಿತರ ಚೀಟಿಗೆ (Ration Card) ವಿಷಯಕ್ಕೆ ಸಂಬಂಧಿಸಿದಂತೆ ದಿನದಿಂದ ದಿನಕ್ಕೆ ಬೇಸರದ ಸುದ್ದಿ ಜನರಿಗೆ ಬರುತ್ತಿದೆ. ಹೌದು ದೇಶದಲ್ಲಿ ಕೋಟ್ಯಾಂತರ ಜನರ ರೇಷನ್ ಕಾರ್ಡುಗಳನ್ನ ರದ್ದು ಮಾಡಲಾಗಿದೆ. ಆದಾಯದಲ್ಲಿ ಹೆಚ್ಚಳ, ಸರ್ಕಾರೀ ನೌಕರಿ, ತೆರಿಗೆ ಪಾವತಿ.

ಮನೆಯಲ್ಲಿ ಅಧಿಕ ಬೆಲೆಯ ವಾಹನಗಳು ಹೀಗೆ ಹಲವು ಕಾರಣಗಿಂದ ದೇಶದಲ್ಲಿ ಕೋಟ್ಯಾಂತರ ಜನರ ರೇಷನ್ ಕಾರ್ಡುಗಳನ್ನ ರದ್ದು ಮಾಡಲಾಗಿದೆ. ಅದೇ ರೀತಿಯಲ್ಲಿ ದೇಶದಲ್ಲಿ ಅನರ್ಹರ ರೇಷನ್ ಕಾರ್ಡುಗಳನ್ನ ರದ್ದು ಮಾಡುವುದರ ಜೊತೆಗೆ ಕೆಲವು ಅರ್ಹರ ರೇಷನ್ ಕಾರ್ಡುಗಳನ್ನ ಕೂಡ ರದ್ದು ಮಾಲಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ.

ಸದ್ಯ ವರ್ಷದ ಆರಂಭದಲ್ಲಿ ಹೊಸ ರೇಷನ್ ಕಾರ್ಡುಗಳಿಗೆ ಅರ್ಜಿಯನ್ನ (Ration Card Application) ಕರೆಯಲಾಗಿದ್ದು ರಾಜ್ಯದಲ್ಲಿ ಸುಮಾರು 31 ಲಕ್ಷಕ್ಕೂ ಅಧಿಕ ಜನರು ಹೊಸ ರೇಷನ್ ಕಾರ್ಡಿಗೆ ಅರ್ಜಿಯನ್ನ ಸಲ್ಲಿಸಿದ್ದಾರೆ.

Disappointing news for those who have applied for the new ration card
Image Credit: economictimes.indiatimes

ಹೊಸ ರೇಷನ್ ಕಾರ್ಡ್ ಪಡೆಯಲು ಲಕ್ಷಾಂತರ ಅರ್ಜಿಗಳು
ದೇಶದಲ್ಲಿ ಕೋಟ್ಯಾಂತರ ಜನರ ರೇಷನ್ ಕಾರ್ಡುಗಳನ್ನ ರದ್ದು ಮಾಡಿದ ನಂತರ ಕರ್ನಾಟಕ ರಾಜ್ಯದಲ್ಲಿ ಹೊಸ ರೇಷನ್ ಕಾರ್ಡುಗಳಿಗೆ ವರ್ಷದ ಆರಂಭದಲ್ಲಿ ಅರ್ಜಿಯನ್ನ ಕರೆಯಲಾಗಿತ್ತು. ಅಧಿಕಾರಿಗಳ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಸುಮಾರು 31 ಲಕ್ಷಕ್ಕೂ ಅಧಿಕ ಜನರು ಹೊಸ ರೇಷನ್ ಕಾರ್ಡುಗಳಿಗೆ ಅರ್ಜಿಯನ್ನ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ಇನ್ನೂ ಹಾಗೆ ಉಳಿದುಕೊಂಡಿದೆ ಅರ್ಜಿಗಳು
ಹೊಸ ರೇಷನ್ ಕಾರ್ಡುಗಳಿಗೆ ಸುಮಾರು 31 ಲಕ್ಷಕ್ಕೂ ಅಧಿಕ ಹೊಸ ಅರ್ಜಿಯನ್ನ ಸಲ್ಲಿಸಿದ್ದು ಆ ಅರ್ಜಿಗಳು ಇನ್ನೂ ಕೂಡ ಹಾಗೆ ಉಳಿದುಕೊಂಡಿದೆ. ಜನರು ಸಲ್ಲಿಸಿದ ಅರ್ಜಿಗಳಲ್ಲಿ ಯಾವುದೇ ಪ್ರೋಸೆಸ್ ಆಗದೆ ಅರ್ಜಿಗಳು ಹಾಗೆ ಉಳಿದುಕೊಂಡಿದ್ದು ಅರ್ಜಿಗಳು ಮುಂದಿನ ಹಂತಕ್ಕೆ ಹೋಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.

Join Nadunudi News WhatsApp Group

Around 31 lakh people have applied for new ration cards in the state
Image Credit: economictimes.indiatimes

ಸರ್ಕಾರದಿಂದ ಬಂದಿಲ್ಲ ಯಾವುದೇ ಆದೇಶ
ಸದ್ಯ ಇದರ ಕುರಿತು ಮಾಹಿತಿಯನ್ನ ನೀಡಿರುವ ಆಹಾರ ಇಲಾಖೆಯ ಕಾರ್ಯದರ್ಶಿಗಳಾದ ಡಾ. ಎಂ ಟಿ ರಾಜು ಅವರು ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಯಾವುದೇ ಆದೇಶ ಬರದ ಜನರು ಸಲ್ಲಿಸಿದ ಅರ್ಜಿಗಳು ಇನ್ನೂ ಕೂಡ ಹಾಗೆ ಉಳಿದುಕೊಂಡಿದೆ.

ಸರ್ಕಾರದಿಂದ ಆದೇಶಗಳು ಬರುವ ತನಕ ಹೊಸ ರೇಷನ್ ಕಾರ್ಡುಗಳನ್ನ ವಿತರಣೆ ಮಾಡಲು ಸಾಧ್ಯವಿಲ್ಲ ಎಂದು ಆಹಾರ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ರಾಜ್ಯದಲ್ಲಿ ಸುಮಾರು 31 ಲಕ್ಷ ಅರ್ಜಿಗಳು ಬಂದಿದ್ದು ಅರ್ಜಿಯನ್ನ ಪರಿಶೀಲನೆ ಮಾಡಿ ಹೊಸ ರೇಷನ್ ಕಾರ್ಡ್ ವಿತರಿಸುವ ಬಗ್ಗೆ ಸರ್ಕಾರ ಯಾವುದೇ ಮಾರ್ಗಸೂಚಿಯನ್ನ ಇನ್ನೂ ಪ್ರಕಟ ಮಾಡಿಲ್ಲದ ಕಾರಣ ಜನರು ಸಲ್ಲಿಸಿದ ಎಲ್ಲಾ ಅರ್ಜಿಗಳು ಹಾಗೆ ಉಳಿದುಕೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರಾಜ್ಯದಲ್ಲಿ ಅನೇಕರು ಸರಿಯಾಗಿ ಆಹಾರ ಇಲ್ಲದೆ ಪರದಾಡುತ್ತಿದ್ದಾರೆ
ಸರ್ಕಾರ ಅನರ್ಹರ ಜೊತೆಗೆ ಕೆಲವು ಅರ್ಹರ ರೇಷನ್ ಕಾರ್ಡುಗಳನ್ನ ಕೂಡ ರದ್ದು ಮಾಡಿರುವ ಕಾರಣ ದೇಶದಲ್ಲಿ ಸಾಕಷ್ಟು ಕೂಲಿ ಕಾರ್ಮಿಕರು, ಬಡವರು ಸೇರಿದಂತೆ ಸಾಕಷ್ಟು ಜನರು ಪ್ರತಿನಿತ್ಯ ಆಹಾರಕ್ಕಾಗಿ ಪರದಾಡುವ ಪರಿಸ್ಥಿತಿ ಈಗ ಉಂಟಾಗಿದೆ.

ಅದೇ ರೀತಿಯಲ್ಲಿ ಅನೇಕ ಅರ್ಹರು BPL ರೇಷನ್ ಕಾರ್ಡ್ ಕಳೆದುಕೊಂಡ ಕಾರಣ ಉಚಿತ ಆರೋಗ್ಯ ಚಿಕಿತ್ಸೆಯನ್ನ ಕೂಡ ಆಸ್ಪತ್ರೆಯಲ್ಲಿ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದುಬಂದಿದೆ.

A new ration card will be issued next year
Image Credit: news18

ಮುಂದಿನ ವರ್ಷ ಆದೇಶ ಬರಬಹುದು
ಈಗಾಗಲೇ ಇದರ ಕುರಿತಂತೆ ಸರ್ಕಾರಕ್ಕೆ ಪ್ರಸ್ತಾವನೆಯನ್ನ ಸಲ್ಲಿಸಲಾಗಿದ್ದು ಮುಂದಿನ ವರ್ಷದ ಆರಂಭದಲ್ಲಿ ಹೊಸ ರೇಷನ್ ಕಾರ್ಡುಗಳನ್ನ ವಿತರಣೆ ಮಾಡಲು ಆದೇಶ ಬರಬಹುದು ಎಂದು ಹೇಳಲಾಗುತ್ತಿದೆ.

ಅದೇ ರೀತಿಯಲ್ಲಿ ಇನ್ನೂ ಕೆಲವರು ಸರ್ಕಾರಕ್ಕೆ ಮೋಸ ಮಾಡಿ ಆಹಾರ ಧಾನ್ಯಗಳನ್ನ ಪಡೆದುಕೊಳ್ಳುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಜನರ ರೇಷನ್ ಕಾರ್ಡುಗಳನ್ನ ರದ್ದು ಮಾಡುವ ಸಾಧ್ಯತೆ ಇದೆ ಎಂದು ಕೂಡ ಹೇಳಲಾಗುತ್ತಿದೆ.

Join Nadunudi News WhatsApp Group