Ration Card Update: BPL ಕಾರ್ಡ್ ಇದ್ದವರಿಗೆ ಬೇಸರದ ಸುದ್ದಿ, ರದ್ದತಿ ಕುಟುಂಬಗಳ ಪಟ್ಟಿ ಬಿಡುಗಡೆ.

BPL ರೇಷನ್ ಕಾರ್ಡ್ ರದ್ದಾದ ಕುಟುಂಬಗಳ ಪಟ್ಟಿ ಬಿಡುಗಡೆ

Ration Card Cancellation New Update: ಇನ್ನು ರಾಜ್ಯದಲ್ಲಿ ಗೃಹ ಲಕ್ಷ್ಮಿ ಅನ್ನಭಾಗ್ಯ ಯೋಜನೆಗಳಿಗೆ ಬಿಪಿಎಲ್ ರೇಷನ್ ಕಾರ್ಡ್ ಮುಖ್ಯವಾಗಿದೆ. ಯೋಜನೆಗಳ ಲಾಭ ಪಡೆಯುವ ಸಲುವಾಗಿ ಲಕ್ಷಾಂತರ ಜನರು ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ರಾಜ್ಯ ಸರ್ಕಾರ (State Government) ಬಿಪಿಎಲ್ (BPL) ಪಡಿತರ ಚೀಟಿದಾರರಿಗೆ ವಿಶೇಷ ಯೋಜನೆಗಳನ್ನು ನೀಡುವ ಘೋಷಣೆ ಹೊರಡಿಸುತ್ತಿದ್ದಂತೆ ಬಿಪಿಎಲ್ ಕಾರ್ಡ್ ಪಡೆಯುವ ಹಂಬಲ ಜನರಲ್ಲಿ ಹೆಚ್ಚುತ್ತಿದೆ.

ಈ ಕಾರಣಕ್ಕೆ ಬಿಪಿಎಲ್ ರೇಷನ್ ಕಾರ್ಡ್ ಮೇಲಿನ ಬೇಡಿಕೆ ಹೆಚ್ಚುತ್ತಿದೆ. ಸದ್ಯ ರಾಜ್ಯ ಸರ್ಕಾರದಿಂದ ರೇಷನ್ ಕಾರ್ಡ್ ಗೆ ಸಂಬಂಧಿಸಿದಂತೆ ಬಿಗ್ ಅಪ್ಡೇಟ್ ಹೊರಬಿದ್ದಿದೆ. ಹಾಗೂ ರಾಜ್ಯ ಸರ್ಕಾರ ಇಂತವರ ರೇಷನ್ ಕಾರ್ಡ್ ಅನ್ನು ರದ್ದು ಮಾಡಲು ಮುಂದಾಗಿದೆ.

Ration Card Cancellation
Image credit: Hosa Kannada

BPL ಕಾರ್ಡ್ ಇದ್ದವರಿಗೆ ಬೇಸರದ ಸುದ್ದಿ
ಬಡತನ ರೇಖೆಗಿಂತ ಕೆಳಗಿನವರಿಗೆ ಸರ್ಕಾರ ಉಚಿತ ಪಡಿತರ ಸೌಲಭ್ಯವನ್ನು ನೀಡುತ್ತಿದೆ. ಈಗಾಗಲೇ ಸರ್ಕಾರ ಅನರ್ಹರು ಬಿಪಿಎಲ್ ಪಡಿತರ ಪ್ರಯೋಜನವನ್ನು ಪಡೆಯಬಾರದು ಎನ್ನುವ ಕಾರಣಕ್ಕೆ ಮಹತ್ವದ ನಿರ್ಧಾರವನ್ನು ಕೈಗೊಳ್ಳುತ್ತಿದೆ. ಸರ್ಕಾರೀ ನೌಕರರು, ತೆರಿಗೆ ಪಾವತಿದಾರರು ಸೇರಿದಂತೆ ಇನ್ನಿತರ ಶ್ರೀಮಂತ ಕುಟುಂಬದವರು BPL Card ಹೊಂದಿದ್ದರೆ ಅಂತವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.

ಆಹಾರ ಇಲಾಖೆ ಪರಿಶೀಲನೆ ನಡೆಸಿ ಸುಳ್ಳು ಮಾಹಿತಿ ನೀಡಿ BPL Card ಪಡೆವರಿಗೆ ಹೆಚ್ಚಿನ ದಂಡ ವಿಧಿಸಲಿದೆ. ಇದರ ಜೊತೆಗೆ ಸರ್ಕಾರ ಯಾರು ಪ್ರತಿ ತಿಂಗಳು ಪಡಿತರನ್ನು ಪಡೆಯುತ್ತಿಲ್ಲವೋ ಅಂತವರ ವಿರುದ್ಧ ಕೂಡ ಕ್ರಮ ಕೈಗೊಳ್ಳಲು ಮುಂದಾಗಿದೆ.

Ration Card Cancellation 2024
Image credit: Hosa Kannada

ಇಂತಹ ಕುಟುಂಬಗಳ ರೇಷನ್ ಕಾರ್ಡ್ ರದ್ದು ಮಾಡಲು ಮುಂದಾದ ಸರ್ಕಾರ
ರಾಜ್ಯ ಸರ್ಕಾರ BPL ರೇಷನ್ ಕಾರ್ಡ್ ಹೊಂದಿರುವ ಯಾವ ಕುಟುಂಬದವರು ಕಳೆದ ಮೂರು ತಿಂಗಳಿಂದ ಪಡಿತರನ್ನು ಪಡೆದಿಲ್ಲವೋ ಅಂತವರ ಪಡಿತರ ಚೀಟಿಯನ್ನು ರದ್ದು ಮಾಡಲು ನಿರ್ಧರಿಸಿದೆ. ಯಾರು ಮೂರು ತಿಂಗಳಿನಿಂದ ಪಡಿತರನ್ನು ಪಡೆದಿಲ್ಲವೋ ಅವರನ್ನು ಅನರ್ಹರ ಪಟ್ಟಿಗೆ ಸೇರಿಸಲು ಸರ್ಕಾರ ಮುಂದಾಗಿದೆ.

Join Nadunudi News WhatsApp Group

ನೀವು ಕೂಡ ಕಳೆದ ಮೂರು ತಿಂಗಳಿನಿಂದ ಪಡಿತರನ್ನು ಪಡೆಯದಿದ್ದರೆ ನಿಮ್ಮ ಪಡಿತರ ಚೀಟಿ ರದ್ದಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಹೀಗಾಗಿ ಪಡಿತರ ಚೀಟಿ ಹೊಂದಿರುವ ಪ್ರತಿಯೊಬ್ಬರೂ ಕೂಡ ಪ್ರತಿ ತಿಂಗಳ ಉಚಿತ ಪಡಿತರನ್ನು ಪಡೆಯುವುದು ಅಗತ್ಯ. ಇಲ್ಲವಾದರೆ ನೀವು ಉಚಿತ ಪಡಿತರ ಸೌಲಭ್ಯದಿಂದ ವಂಚಿತರಾಗುವುದರ ಜೊತೆಗೆ ನಿಮ್ಮ ರೇಷನ್ ಕಾರ್ಡ್ ನಿಷ್ಪ್ರಯೋಜವಾಗಿ ನೀವು ಸರ್ಕಾರದ ಯಾವುದೇ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಾಗದೆ ಇರಬಹುದು.

Ration Card Cancellation New Update
Image Credit: TV9hindi

Join Nadunudi News WhatsApp Group