Ration Card Delete: ರಾಜ್ಯ ಸರ್ಕಾರದ ಇನ್ನೊಂದು ಆದೇಶ, ಕೆಲವೇ ದಿನದಲ್ಲಿ ಇಂತಹ ಕುಟುಂಬದ BPL ಮತ್ತು ಅಂತ್ಯೋದಯ ಕಾರ್ಡ್ ರದ್ದು.

ಕೆಲವರ BPL ಮತ್ತು ಅಂತ್ಯೋದಯ ರೇಷನ್ ಕಾರ್ಡುಗಳನ್ನ ಡಿಲೀಟ್ ಮಾಡಲು ನಿರ್ಧಾರ ಮಾಡಿದ ಸರ್ಕಾರ.

Ration Card Delete Update: ದೇಶದಲ್ಲಿನ ಬಡವರು ಮತ್ತು ನಿರ್ಗತಿಕರಿಗಾಗಿ ಉಚಿತ ಪಡಿತರನ್ನು ನೀಡುವ ಉದ್ದೇಶದಿಂದ ಸರ್ಕಾರ BPL Ration Card ಅನ್ನು ಜನರಿಗೆ ನೀಡುತ್ತಿದೆ. BPL Ration Card ಹೊಂದಿರುವ ಪ್ರತಿ ಕುಟುಂಬದವರು ಕೂಡ ಉಚಿತ ಪಡಿತರ ಲಾಭವನ್ನು ಪಡೆಯುತ್ತಿದ್ದಾರೆ. ದೇಶದಲ್ಲಿ ಕರೋನ ಪ್ರಾರಂಭವಾದಾಗಿನಿಂದ ಈ ಉಚಿತ ಪಡಿತರ ಸೇವೆಯನ್ನು ಜಾರಿಗೆ ತರಲಾಗಿತ್ತು. ಈಗಲೂ ಕೂಡ ಈ ಸೌಲಭ್ಯವನ್ನು ಮುಂದುವರೆಸಿಕೊಂಡು ಹೋಗಲಾಗುತ್ತಿದೆ.

ಅದರಲ್ಲೂ ರಾಜ್ಯ ಸರ್ಕಾರ BPL Ration Card ಹೊಂದಿರುವವರಿಗೆ ವಿಶೇಷ ಸೌಲಭ್ಯವನ್ನು ನೀಡುತ್ತಿದೆ. ಹೀಗಾಗಿ ದೇಶದಲ್ಲಿ BPL Ration Card ಗೆ ಬೇಡಿಕೆ ಹೆಚ್ಚಿದೆ ಎನ್ನಬಹುದು. ಸ್ಫಯ ರಾಜ್ಯ ಸರ್ಕಾರ ಕೆಲವೇ ದಿನದಲ್ಲಿ ಇಂತಹ ಕುಟುಂಬದ BPL ಮತ್ತು ಅಂತ್ಯೋದಯ ಕಾರ್ಡ್ ರದ್ದು ಮಾಡುವುದಾಗಿ ಆದೇಶ ಹೊರಡಿಸಿದೆ. ರೇಷನ್ ಕಾರ್ಡ್ ರದ್ದು ಪಡಿಸಲಿರುವ ಕುಟುಂಬದ ಲಿಸ್ಟ್ ನಲ್ಲಿ ನೀವು ಇದ್ದೀರಾ..? ಎನ್ನುವ ಬಗ್ಗೆ ಮಾಹಿತಿ ತಿಳಿದುಕೊಂಡು ಯೋಜನೆಯಿಂದ ವಂಚಿತರಾಗುವುದನ್ನು ತಪ್ಪಿಸಿಕೊಳ್ಳಿ.

Ration Card Delete Update
Image Credit: Original Source

ರಾಜ್ಯ ಸರ್ಕಾರದ ಇನ್ನೊಂದು ಆದೇಶ
ಇನ್ನು ರಾಜ್ಯದಲ್ಲಿ Anna Bhagya ಯೋಜನೆ ಕೂಡ ಅನುಷ್ಠಾನಗೊಂಡು ಅರ್ಹ ಫಲಾನುಭವಿಗಳು ಈ ಯೋಜನೆಯಡಿ ಉಚಿತ ಪಡಿತರನ್ನು ಪಡೆಯುತ್ತಿದ್ದಾರೆ. ಸದ್ಯ ರಾಜ್ಯದಲ್ಲಿ Ration card ಕುರಿತಂತೆ ಸಾಕಷ್ಟು ಅಪ್ಡೇಟ್ ಗಳು ಹೊರಬೀಳುತ್ತಲೇ ಇದೆ. ಅನ್ನ ಭಾಗ್ಯ ಯೋಜನೆಯಡಿ ಸರ್ಕಾರ ಉಚಿತ 5 kg ಅಕ್ಕಿ ಹಾಗೂ 5kg ಅಕ್ಕಿಯ ಬದಲಾಗಲಿ ಹಣವನ್ನು ನೀಡುತ್ತಿದೆ.

ಪ್ರತಿ ಕೆಜಿಗೆ 34 ರೂ. ಗಳಂತೆ 174 ರೂ. ಗಳನ್ನೂ ನೀಡಲು ಕಾಂಗ್ರೆಸ್ ಸರ್ಕಾರ ಯೋಜನೆ ಹೂಡಿದೆ. ಬಡತನ ರೇಖೆಗಿಂತ ಕೆಳಗಿರುವವರು ಸರ್ಕಾರದ ಉಚಿತ ಪಡಿತರ ಲಾಭವನ್ನು ಪಡೆಯಬೇಕೆನ್ನುವುದು ಸರ್ಕಾರದ ಉದ್ದೇಶವಾಗಿದೆ. ಸದ್ಯ ರಾಜ್ಯ ಸರ್ಕಾರ ಪಡಿತರ ಚೀಟಿದಾರರಿಗೆ ಮಹತ್ವದ ಮಾಹಿತಿ ಹೊರಡಿಸಿದೆ.

Ration Card Delete Update
Image Credit: Businessleague

ರಾಜ್ಯದಲ್ಲಿ 3.46 ಲಕ್ಷ ರೇಷನ್ ಕಾರ್ಡ್ ರದ್ದು
ಇನ್ನು ಪ್ರತಿ ತಿಂಗಳು ಪಡಿತರ ಚೀಟಿದಾರರು ಪಡಿತರನ್ನು ಪಡೆಯುತ್ತಾರೆ. ಕೆಲವರು ಒಂದು ತಿಂಗಳಿನಲ್ಲಿ ಪಡೆದರೆ ಇನ್ನೊಂದು ತಿಂಗಳಿನಲ್ಲಿ ಪಡೆಯುವುದಿಲ್ಲ. ಇದೀಗ ಇಂತವರಿಗೆ ಸರ್ಕಾರ ಹೊಸ ನಿಯಮ ತಂದಿದೆ. ಕಳೆದ 6 ತಿಂಗಳಿನಿಂದ ಯಾರು ಪಡಿತರನ್ನು ಪಡೆಯುವುದಿಲ್ಲವೋ ಅಂತವರ ರೇಷನ್ ಕಾರ್ಡ್ ಅನ್ನು ರದ್ದು ಮಾಡಲು ಸರ್ಕಾರ ನಿರ್ಧರಿಸಿದೆ. ರಾಜ್ಯದಲ್ಲಿ ಸುಮಾರು 1.27 ಕೋಟಿಗೂ ಅಧಿಕ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಗಳಿದ್ದು, 4.37 ಕೋಟಿಗೂ ಅಧಿಕ ಫಲಾನುಭವಿಗಳಿದ್ದಾರೆ. ಈಗಾಗಲೇ 6 ತಿಂಗಳಿನಿಂದ ಪಡಿತರ ಪಡೆಯದ ಸುಮಾರು 3.46 ಲಕ್ಷ BPL ಹಾಗೂ ಅಂತ್ಯೋದಯ ಕಾರ್ಡ್ ಗಳನ್ನೂ ಸರ್ಕಾರ ಈಗಾಗಲೇ ರದ್ದುಪಡಿಸಲಾಗಿದೆ.

Join Nadunudi News WhatsApp Group

Join Nadunudi News WhatsApp Group