Ration Price: ಅನ್ನ ಭಾಗ್ಯ ಯೋಜನೆ ಬೆನ್ನಲ್ಲೇ ರಾಜ್ಯದ ಜನತೆಗೆ ಬಿಗ್ ಶಾಕ್, ಬೇಸರ ಹೊರಹಾಕಿದ ಜನರು.

ಅನ್ನಭಾಗ್ಯ ಯೋಜನೆಯ ಅನುಷ್ಠಾನದ ಬೆನ್ನಲ್ಲೇ ಸರ್ಕಾರದ ಈ ನಿರ್ಧಾರಕ್ಕೆ ಜನರು ಬೇಸರ.

Ration Price Hike In Karnataka: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಅವುಗಳೆಂದರೆ 10 ಕೆಜಿ ಅಕ್ಕಿ, ಬಸ್ ಫ್ರೀ, ಗೃಹಲಕ್ಷ್ಮಿಯೋಜನೆ, ನಿರುದ್ಯೋಗಿಗಳಿಗೆ ಹಣ ಪಾವತಿ ಮುಂತಾದ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದೆ.

ಸರ್ಕಾರವು 10 ಕೆಜಿ ಅಕ್ಕಿ ನೀಡುವುದಾಗಿ ಘೋಷಣೆ ಮಾಡಿತ್ತು. ಕೇಂದ್ರ ಸರ್ಕಾರದಿಂದ 5 ಕೆಜಿ, ರಾಜ್ಯ ಸರ್ಕಾರದಿಂದ 5 ಕೆಜಿ ಅಕ್ಕಿ ನೀಡುವುದಾಗಿ ಹೇಳಿದೆ. ಆದರೆ ಮಳೆ ಇಲ್ಲದ ಕಾರಣದಿಂದ ಅಕ್ಕಿಯ ಉತ್ಪಾದನೆ ಕಡಿಮೆಯಾಗಿದೆ. ಅದರಿಂದ ರಾಜ್ಯ ಸರ್ಕಾರ 5 ಕೆಜಿ ಅಕ್ಕಿಯ ಬದಲಿಗೆ ಹಣವನ್ನು ಬ್ಯಾಂಕ್ ಖಾತೆಗೆ ಹಾಕುವುದಾಗಿ ಘೋಷಣೆ ಮಾಡಿದ್ದಾರೆ.

15 percent increase in rice price
Image Credit: Thehindu

ಕಾಂಗ್ರೆಸ್ ಸರ್ಕಾರದ ಅನ್ನ ಭಾಗ್ಯ ಯೋಜನೆ
ಕಾಂಗ್ರೆಸ್ ಸರ್ಕಾರವು ವಿಧಾನ ಸಭೆಯ ಚುನಾವಣೆಯ ಸಂದರ್ಭದಲ್ಲಿ 10 ಕೆಜಿ ಅಕ್ಕಿ ನೀಡುವುದಾಗಿ ಘೋಷಣೆ ಮಾಡಿತ್ತು. ಆದರೆ ಅಕ್ಕಿಯ ಉತ್ಪಾದನೆ ಕಡಿಮೆ ಇರುವುದರಿಂದ 10 ಕೆಜಿ ಅಕ್ಕಿಯ ಬದಲು 5 ಕೆಜಿ ಅಕ್ಕಿ ಹಾಗೂ ಮತ್ತುಳಿದ 5 ಕೆಜಿ ಅಕ್ಕಿಯ ಬದಲಾಗಿ ಹಣವನ್ನು ನೀಡಿತ್ತು. ಇದೀಗ ಸರ್ಕಾರ ಆಂಧ್ರಪ್ರದೇಶದಿಂದ ಅಕ್ಕಿ ಖರೀದಿಸುವ ಬಗ್ಗೆ ಒಂದು ಸುತ್ತಿನ ಮಾತು ಕತೆ ಮುಗಿಸಿದೆ. ಶೀಘ್ರದಲ್ಲಿ ಅಕ್ಕಿ ದೊರಕಿದರೆ 5 ಕೆಜಿ ಅಕ್ಕಿಯ ಹಣದ ಬದಲಾಗಿ 10 ಕೆಜಿ ಅಕ್ಕಿಯನ್ನು ನೀಡಲಾಗುತ್ತದೆ.

ration price hike updates
Image Credit: Thehindu

ಅಕ್ಕಿ ಬೆಲೆಯಲ್ಲಿ ಶೇಕಡಾ 15 ರಷ್ಟು ಏರಿಕೆ
ರಾಜ್ಯದಲ್ಲಿ ಮಳೆಯ ಅಭಾವದಿಂದ ರೈತರ ಬೆಳೆಗಳು ನಾಶವಾಗಿದ್ದವು. ಅದರಿಂದ ಭತ್ತದ ಉತ್ಪಾದನೆಯು ಈ ವರ್ಷ ಕಡಿಮೆಯಾಗಿದೆ. ರಾಜ್ಯದಲ್ಲಿ ಅಕ್ಕಿಯ ಬೆಲೆ ಗಗನಕ್ಕೆ ಏರಿದೆ. ಸೋನಾಮಸೂರಿ ಅಕ್ಕಿಯ ಬೆಲೆಯೂ 50 ರಿಂದ 60 ಕ್ಕೆ ಏರಿದೆ. ರಾಜಮುಡಿ ಅಕ್ಕಿ ಕೆಜಿ 70 ರಿಂದ 74 ಕ್ಕೆ ಏರಿದೆ.

BPL ಕಾರ್ಡ್ ದಾರರು ಬಳಸುವ ಅಕ್ಕಿ 30 ರಿಂದ 36 ರೂಪಾಯಿ ಏರಿಕೆಯಾಗಿದೆ. ಬಿಪಿಎಲ್ ಕುಟುಂಬಗಳಿಗೆ ಅಕ್ಕಿಯ ಬೆಲೆ ಏರಿಕೆ ಆಗಿದ್ದರಿಂದ ಕಷ್ಟವಾಗಿದೆ. ಮಳೆಯ ಕೊರತೆಯಿಂದಾಗಿ ಅಕ್ಕಿಯು ಚಿನ್ನವಾಗಿದೆ. ಭತ್ತದ ಉತ್ಪದನೆ ಕಡಿಮೆ ಇರುದರಿಂದ ಅಕ್ಕಿಯ ಬೆಲೆಯಲ್ಲಿ ಏರಿಕೆಯಾಗಿದೆ ಎನ್ನಬಹುದು.

Join Nadunudi News WhatsApp Group

Join Nadunudi News WhatsApp Group