RBI 2000 Rs: 2000 ರೂ ನೋಟುಗಳ ಮೇಲೆ ರಾತ್ರೋರಾತ್ರಿ ಇನ್ನೊಂದು ಘೋಷಣೆ, RBI ಹೊಸ ರೂಲ್ಸ್.

2000 ರೂ. ನೋಟುಗಳ ಕುರಿತು RBI ಮಹತ್ವದ ನಿರ್ಧಾರ.

RBI 2000 Note Exchange Latest Update: ಸದ್ಯ ದೇಶದಲ್ಲಿ 2000 ರೂ. ನೋಟುಗಳು ತನ್ನ ಮೌಲ್ಯವನ್ನು ಕಳೆದುಕೊಂಡಿದೆ ಎನ್ನಬಹುದು. ಈ ವರ್ಷ 2000 ರೂಪಾಯಿ ನೋಟುಗಳನ್ನು ಹಿಂಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ.

ಸದ್ಯ RBI ಕೂಡ 2000 ರೂಪಾಯಿ ನೋಟುಗಳನ್ನು ಬದಲಾಯಿಸಿಕೊಳ್ಳಲು ಗಡುವು ವಿಧಿಸಿತ್ತು. ಸದ್ಯ 2000 ನೋಟುಗಳ ಬದಲಾವಣೆಯ ಗಡುವು ಮುಗಿದಿದೆ. ಇದೀಗ 2000 ರೂ. ನೋಟುಗಳ ಕುರಿತು RBI ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

RBI 2000 Note Exchange Latest Update
Image Credit: Original Source

ನೋಟು ವಿನಿಮಯಕ್ಕೆ ಅಕ್ಟೋಬರ್ 7 ಕೊನೆಯ ದಿನಾಂಕ
RBI ನೋಟುವಿನಿಮಯಕ್ಕೆ Septembar30 ರಿಂದ ಮತ್ತೆ ಸಮಯಾವಕಾಶವನ್ನು ನೀಡಿತ್ತು. RBI Septembar 30 ರ ಕೊನೆಯ ದಿನಾಂಕವನ್ನು October 7 ರ ವರೆಗೆ ಮುಂದೂಡಿದೆ. ನಿಮ್ಮ ಬಳಿ ಇರುವ 2,000 ರೂ ನೋಟನ್ನು ಅಕ್ಟೋಬರ್ 7 ರವರೆಗೆ ನೀವು ವಿನಿಮಯ ಅಥವಾ ಠೇವಣಿ ಮಾಡಿಕೊಳ್ಲು RBI ಅವಕಾಶ ಕಲ್ಪಿಸಿಕೊಟ್ಟಿತ್ತು. ಸದ್ಯ RBI ನೀಡಿದ 7 ದಿನಗಳ ಸಮಯಾವಕಾಶ ಮುಗಿದಿದೆ. October 8 ರಿಂದ 2,000 ರೂ ನೋಟುಗಳು ತನ್ನ ಮೌಲ್ಯವನ್ನು ಕಳೆದುಕೊಂಡಿದೆ. ಇನ್ನುಮುಂದೆ 2000 ರೂಪಾಯಿ ನೋಟುಗಳನ್ನು ಬ್ಯಾಂಕ್ ನಲ್ಲಿ ಬದಲಿಸಿಕೊಳ್ಳಲು ಅವಕಾಶ ಇರುವುದಿಲ್ಲ.

ಬ್ಯಾಂಕುಗಳು 2000 ನೋಟುಗಳನ್ನು ಸ್ವೀಕರಿಸುವುದಿಲ್ಲ
October 7 ವರೆಗೆ ಜನರು ತಮ್ಮ ಬಳಿ ಇರುವ 2000 ರೂಪಾಯಿ ನೋಟುಗಳನ್ನು ಬ್ಯಾಂಕ್ ನಲ್ಲಿ ಬದಲಾಯಿಸಿಕೊಳ್ಳುತ್ತಿದ್ದರು. ಆದರೆ October 8 ರಿಂದ ಬ್ಯಾಂಕ್ ನಲ್ಲಿ 2000 ರೂಪಾಯಿ ನೋಟುಗಳನ್ನು ಸ್ವೀಕರಿಸುತ್ತಿಲ್ಲ. ವಾಣಿಜ್ಯ ಬ್ಯಾಂಕ್‌ಗಳು 2,000 ರೂಪಾಯಿ ನೋಟುಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದೆ. ಸದ್ಯ ಇಲ್ಲಿ ಮಾತ್ರ 2000 ರೂಪಾಯಿ ನೋಟುಗಳ ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

RBI 2000 Note Exchange latest Update
Image Credit: Informalnewz

2000 ರೂ. ನೋಟುಗಳನ್ನು ಇಲ್ಲಿ ಮಾತ್ರ ಬದಲಾಯಿಸಿಕೊಳ್ಳಬಹುದು
ವಾಣಿಜ್ಯ ಬ್ಯಾಂಕ್‌ಗಳು 2,000 ರೂಪಾಯಿ ನೋಟುಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದ ಕಾರಣ RBI ಕಚೇರಿಯಲ್ಲಿ 2,000 ರೂಪಾಯಿ ನೋಟುಗಳ ವಿನಿಮಯಕ್ಕೆ ಅವಕಾಶವನ್ನು ನೀಡಲಾಗಿದೆ. Reserve Bank Of India (RBI) 19 ಕಚೇರಿಗಳಲ್ಲಿ 2000 ರೂ. ನೋಟುಗಳನ್ನು ಬದಲಿಸಿಕೊಳ್ಳಬಹುದುದಾಗಿದೆ.

Join Nadunudi News WhatsApp Group

ಸದ್ಯ RBI ಕಚೇರಿಯ ಮುಂದೆ ಸರತಿ ಸಾಲಿನಲ್ಲಿ ಜನರು ನಿಂತು ನೋಟುಗಳ ವಿನಿಮಯವನ್ನು ಮಾಡಿಕೊಳ್ಳುತ್ತಿದ್ದಾರೆ. ವ್ಯಕ್ತಿಗಳು ಅಥವಾ ಸಂಸ್ಥೆಗಳು 19 RBI ಕಚೇರಿಗಳಲ್ಲಿ ಒಂದು ಬಾರಿಗೆ 20,000 ರೂ.ಗಳ ಮಿತಿಯವರೆಗೆ 2,000 ರೂ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು.

Join Nadunudi News WhatsApp Group