Money Relaunch: ದೇಶದಲ್ಲಿ ಮತ್ತೆ ಚಾಲ್ತಿಗೆ ಬರಲಿದೆ ಹಳೆಯ 1000 ರೂ ನೋಟುಗಳು, ಸ್ಪಷ್ಟನೆ ನೀಡಿದ RBI.

ಹಳೆಯ 1000 ನೋಟುಗಳು ಚಲಾವಣೆಗೆ ಬರುವ ಬಗ್ಗೆ ಸ್ಪಷ್ಟನೆ ನೀಡಿದ RBI.

1000 Rs Note Relaunch In India: ಸದ್ಯ ದೇಶದಲ್ಲಿ 2000 ನೋಟುಗಳ ರದ್ಧತಿಯಿಂದಾಗಿ ಪ್ರಸ್ತುತ 500 ನೋಟುಗಳು ಹೆಚ್ಚಿನ ಮಹತ್ವ ಪಡೆದುಕೊಂಡಿದೆ. October 7 ರಿಂದಲೇ ದೇಶದಲ್ಲಿ 2000 ರೂ. ಗಳಿಗೆ ಯಾವುದೇ ಮೌಲ್ಯ ಇಲ್ಲ ಎನ್ನಬಹುದು.

ಈಗಾಗಲೇ ವಾಣಿಜ್ಯ ಬ್ಯಾಂಕ್‌ಗಳು 2,000 ರೂಪಾಯಿ ನೋಟುಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದೆ. ವಾಣಿಜ್ಯ ಬ್ಯಾಂಕ್‌ಗಳು 2,000 ರೂಪಾಯಿ ನೋಟುಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದ ಕಾರಣ RBI ಕಚೇರಿಯಲ್ಲಿ 2,000 ರೂಪಾಯಿ ನೋಟುಗಳ ವಿನಿಮಯಕ್ಕೆ ಅವಕಾಶವನ್ನು ನೀಡಲಾಗಿದೆ.

1000 Rs Note Latest Update
Image Credit: Studycafe

ಜನರಲ್ಲಿ ಮತ್ತೆ ಪ್ರಶ್ನೆಯನ್ನು ಹುಟ್ಟುಹಾಕಿಸಿದೆ 1000 ರೂ. ವರೈಲ್ ಸುದ್ದಿ 
Reserve Bank Of India ಕಚೇರಿಗಳಲ್ಲಿ 2000 ರೂ. ನೋಟುಗಳನ್ನು ಬದಲಿಸಿಕೊಳ್ಳಬಹುದುದಾಗಿದೆ. ವ್ಯಕ್ತಿಗಳು ಅಥವಾ ಸಂಸ್ಥೆಗಳು 19 RBI ಕಚೇರಿಗಳಲ್ಲಿ ಒಂದು ಬಾರಿಗೆ 20,000 ರೂ.ಗಳ ಮಿತಿಯವರೆಗೆ 2,000 ರೂ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು.

ಸದ್ಯ ದೇಶದಲ್ಲಿ 2000 ನೋಟುಗಳು ಸಂಪೂರ್ಣವಾಗಿ ನಿಷೇದವಾಗಿರುವ ಬೆನ್ನಲ್ಲೇ ಇದೀಗ ಮತ್ತೆ 1000 ರೂ. ಚಲನೆವನೆಯ ಬಗ್ಗೆ ಮಾತುಗಳು ಕೇಳಿಬರುತ್ತಿದೆ. ದೇಶದಲ್ಲಿ ಮತ್ತೆ 1000 ರೂ. ಚಲಾವಣೆಗೆ ಬರುತ್ತಾ..? ಎನ್ನುವುದೇ ಜನಸಾಮಾನ್ಯರ ಸದ್ಯದ ಪ್ರಶ್ನೆಯಾಗಿದೆ.

1000 Rs Note Latest Update
Image Credit: Zeebiz

ದೇಶದಲ್ಲಿ ಮತ್ತೆ ಚಾಲ್ತಿಗೆ ಬರಲಿದೆಯಾ ಹಳೆಯ 1000 ರೂ ನೋಟುಗಳು..?
ಇನ್ನು 2016 ರಲ್ಲಿ ರೂ. 500 ಹಾಗೂ ರೂ. 1000 ರೂ. ನೋಟುಗಳನ್ನು ಮೋದಿ ಸರ್ಕಾರ ಅಮಾನ್ಯಗೊಳಿಸಿರುವುದು ಎಲ್ಲರಿಗು ತಿಳಿದೇ ಇದೆ. 2016 ರಿಂದ ದೇಶದಲ್ಲಿ ರೂ. 500 ಹಾಗೂ ರೂ. 1000 ರೂ. ನೋಟುಗಳಿಗೆ ಯಾವುದೇ ಮೌಲ್ಯ ಇರಲಿಲ್ಲ. 2016 ರ ನೋಟ್ ಬ್ಯಾನ್ ಬಳಿಕ ಹೊಸ 500 ರೂ. ಹಾಗೂ ಹೊಸ 2000 ರೂ. ಚಲಾವಣೆಗೆ ಬಂದಿದ್ದವು.

Join Nadunudi News WhatsApp Group

ಸದ್ಯ ದೇಶದಲ್ಲಿ ಮತ್ತೆ 1000 ರೂ. ಚಲಾವಣೆಗೆ ಬರುವುದಾಗಿ ಸುದ್ದಿ ವೈರಲ್ ಆಗುತ್ತಿದೆ. ಆದರೆ RBI “ದೇಶದಲ್ಲಿ ಮತ್ತೆ 1000 ರೂ. ನೋಟುಗಳನ್ನು ಜಾರಿಗೆ ತರುವ ಯೋಜನೆಯನ್ನು ಕೇಂದ್ರ ಸರ್ಕಾರವಾಗಲಿ, RBI ಆಗಲಿ ನಿರ್ಧರಿಸಿಲ್ಲ” ಎಂದು ಸ್ಪಷ್ಟನೆ ನೀಡಿದೆ. ದೇಶದಲ್ಲಿ ಮತ್ತೆ 1000 ರೂ. ನೋಟುಗಳು ಚಲಾವಣೆಗೆ ಬರುವುದಿಲ್ಲ ಎನ್ನುವ ಬಗ್ಗೆ RBI ಸ್ಪಷ್ಟ ಮಾಹಿತಿ ನೀಡಿದೆ. ಇನ್ನು ದೇಶದಲ್ಲಿ ಚಲಾವಣೆಯಲ್ಲಿ ನಕಲಿ ನೋಟುಗಳ ಬಗ್ಗೆ ಕೂಡ RBI ಜನರಿಗೆ ಎಚ್ಚರಿಕೆ ನೀಡುತ್ತಿದೆ.

Join Nadunudi News WhatsApp Group