500 Notes: 500 ರೂ ನೋಟ್ ಬಳಸುವವರಿಗೆ RBI ನಿಂದ ಎಚ್ಚರಿಕೆ, ಹೊಸ ಮಾರ್ಗಸೂಚಿ ಪ್ರಕಟಿಸಿದ RBI.

500 ರೂ ನೋಟ್ ಬಳಸುವವರಿಗೆ RBI ನಿಂದ ಅಗತ್ಯ ಮಾಹಿತಿ.

RBI About 500 Rs Note: ಸದ್ಯ ದೇಶದಲ್ಲಿ 2000 ರೂ. ನೋಟುಗಳು ತನ್ನ ಮೌಲ್ಯವನ್ನು ಕಳೆದುಕೊಂಡಿದೆ. Reserve Bank Of India,  May 19 2023 ರಂದು 2000 ರೂಪಾಯಿ ನೋಟುಗಳನ್ನು ರದ್ದುಮಾಡಿದೆ. ಇನ್ನು ಮೇ ನಿಂದ ಅಕ್ಟೋಬರ್ 9 ರ ವರೆಗೆ ಜನಸಾಮಾನ್ಯರಿಗೆ 2000 ರೂಪಾಯಿ ನೋಟುಗಳ ವಿನಿಮಯ ಅಥವಾ ಠೇವಣಿಗೆ ಅನುಮತಿ ನೀಡಿತ್ತು.

October 10 ರಿಂದ ದೇಶದಲ್ಲಿ 2000 ರೂ. ನೋಟುಗಳಿಗೆ ಬೆಲೆ ಇಲ್ಲ. ಸದ್ಯ ದೇಶದಲ್ಲಿ 2000 ರೂಪಾಯಿ ನೋಟುಗಳು ಅಮಾನ್ಯಗೊಂಡ ನಂತರದ ದಿನದಿಂದ ನೋಟುಗಳ ವಿಚಾರವಾಗಿ ಸಾಕಷ್ಟು ಸುದ್ದಿಗಳು ವೈರಲ್ ಆಗುತ್ತಿದೆ. ಸದ್ಯ RBI 500 ರೂ. ನೋಟುಗಳ ಕುರಿತು ಮಹತ್ವದ ಆದೇಶ.

RBI About 500 Rs Note
Image Credit: Informalnewz

500 ರೂ ನೋಟ್ ಬಳಸುವವರಿಗೆ RBI ನಿಂದ ಮಾಹಿತಿ
ಸದ್ಯ ದೇಶದ 500 ರೂ. ದೊಡ್ಡ ನೋಟಾಗಿದೆ. ಹೀಗಾಗಿ RBI 500 ರೂ. ನೋಟಿಗೆ ಸಂಬಂಧಿಸಿದಂತೆ ಮಹತ್ವದ ಆದೇಶ ಹೊರಡಿಸುತ್ತಾ ಇರುತ್ತದೆ. ಇನ್ನು ಸಾಕಷ್ಟು ಬಾರಿ ಎಟಿಎಂನಿಂದ ಹಣ ಡ್ರಾ ಮಾಡುವಾಗಲೂ ವಿಕೃತ ಅಥವಾ ಹಳೆಯ ನೋಟುಗಳು ಪತ್ತೆಯಾಗುತ್ತವೆ. ಈ ಸಮಯದಲ್ಲಿ ಜನರು ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ RBI ಇದೀಗ ಬ್ಯಾಂಕುಗಳಿಗೆ ಹರಿದ ಅಥವಾ ಕೊಳಕಾದ ನೋಟುಗಳ ವಿನಿಮಯಾ ಮಾಡುವಂತೆ ಬ್ಯಾಂಕುಗಳಿಗೆ ಆದೇಶ ಹೊರಡಿಸಿದೆ.

ಇಂತಹ ನೋಟುಗಳಿದ್ದರೆ ನೀವು ಚಿಂತಿಸುವ ಅಗತ್ಯವಿಲ್ಲ
RBI ನಿಯಮದ ಅಡಿಯಲ್ಲಿ ದೇಶದ ಎಲ್ಲ ಬ್ಯಾಂಕ್ ಗಳು ಹರಿದ ಅಥವಾ ಕೊಳಕಾದ ನೋಟುಗಳನ್ನೂ ವಿನಿಮಯ ಮಾಡಿಕೊಳ್ಳಬೇಕಿದೆ. RBI ನಿಯಮದ ಪ್ರಕಾರ, ನಿಮ್ಮ ಬಳಿ ಇರುವ ಹರಿದ ಅಥವಾ ಕೊಳಕಾದ ನೋಟುಗಳು 50 ಪ್ರತಿಶತಕ್ಕಿಂತ ಕಡಿಮೆ ಹಾಳಾಗಿದ್ದರೆ ನೀವು ನೋಟಿನ ಪೂರ್ಣ ಮೊತ್ತವನ್ನು ಪಡೆಯುತ್ತೀರಿ. ಆದರೆ ನೋಟು 50 ಪ್ರತಿಶತಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹಾಳಾಗಿದ್ದರೆ ನೋಟಿನ ಮೌಲ್ಯದ ಅರ್ಧದಷ್ಟು ಅಥವಾ ಶೂನ್ಯ ಮೊತ್ತವನ್ನು ಪಡೆಯುತ್ತೀರಿ.

500 Note Latest Update
Image Credit: Online38media

500 ರೂ. ಹರಿದ ಅಥವಾ ಕೊಳಕಾದ ನೋಟಿನ ಮೌಲ್ಯ ಎಷ್ಟು..?
RBI ಅಥವಾ ಬ್ಯಾಂಕುಗಳು ಹರಿದ ಅಥವಾ ಕೊಳಕಾದ ನೋಟುಗಳನ್ನು ವಿನಿಮಯ ಮಾಡಿಕೊಳ್ಳುತ್ತವೆ. ಆದರೆ ನೋಟಿನ ಹಣದ ಮರುಪಾವತಿ ನೋಟಿನ ಸ್ಥಿತಿಯ ಮೇಲೆ ಆದರಿಸುತ್ತದೆ. ಇನ್ನು 500 ರೂ ನೋಟಿನ ಉದ್ದ 15 ಸೆಂ, ಅಗಲ 6.6 ಸೆಂ ಮತ್ತು ವಿಸ್ತೀರ್ಣ 99 ಚದರ ಸೆಂಟಿಮೀಟರ್ ಆಗಿದೆ. ನಿಮ್ಮ ಬಳಿ ಇರುವ ಹರಿದ 500 ರೂಪಾಯಿ ನೋಟಿನ ಗಾತ್ರವು 80 ಚದರ ಸೆಂಟಿಮೀಟರ್ ಆಗಿದ್ದರೆ ಪೂರ್ಣ ಮರುಪಾವತಿಯನ್ನು ನೀಡಲಾಗುತ್ತದೆ, ಆದರೆ ಅದು 40 ಚದರ ಸೆಂಟಿಮೀಟರ್ ಆಗಿದ್ದರೆ, ಅರ್ಧದಷ್ಟು ಮರುಪಾವತಿಯನ್ನು ನೀಡಲಾಗುತ್ತದೆ.

Join Nadunudi News WhatsApp Group

ನಕಲಿ ನೋಟುಗಳನ್ನು ಪತ್ತೆಹಚ್ಚುವುದು ಹೇಗೆ..?
*500 ರೂ. ನೋಟಿನ ಬಣ್ಣವು ಸ್ಟೋನ್ ಗ್ರೇ ಆಗಿದ್ದು, ಕೆಂಪು ಕೋಟೆಯ ಲಕ್ಷಣವನ್ನು ಹೊಂದಿದ್ದು, ಮಹಾತ್ಮಗಾಂಧಿ ಸರಣಿಯಲ್ಲಿನ ರೂ. 500 ಮುಖಬೆಲೆಯ ನೋಟುಗಳು ಆರ್ ಬಿಐ ಗವರ್ನರ್ ಸಹಿಯನ್ನು ಹೊಂದಿದೆ.

500 Torn Note
Image Credit: Dreamstime

*RBI ನೀಡಿರುವ ಮಾಹಿತಿಯ ಪ್ರಕಾರ, 500 ರೂ. ನೋಟಿನ ಗಾತ್ರವು 63 mm x 150 mm ಆಗಿದ್ದು, ದೇವನಾಗರಿ ಲಿಪಿಯಲ್ಲಿ ಭರತ್ ಮತ್ತು ಇಂಡಿಯಾ ಎಂದು ಬರೆಯಲಾಗಿದೆ.

*ಭಾರತ್ ಮತ್ತು RBI ಶಾಸನಗಳೊಂದಿಗೆ ಬಣ್ಣದ ಭದ್ರತಾ ದಾರ ಇರುತ್ತದೆ. ನೋಟನ್ನು ತಿರುಗಿಸಿದಾಗ ದಾರದ ಬಣ್ಣವು ಹಸಿರು ಬಣ್ಣದಿಂದ ನೀಲಿ ಬಣ್ಣಕ್ಕೆ ಬದಲಾಗುತ್ತದೆ.

*500 ರೂ. ನೋಟಿನ ಬಲಭಾಗದಲ್ಲಿ ಅಶೋಕ ಸ್ತಂಭದ ಲಾಂಛನ ಇದ್ದು, ನೋಟಿನ ಮೇಲೆ ಎಡ ಮತ್ತು ಕೆಳಭಾಗದಲ್ಲಿ ಆರೋಹಣ ಹಾಗೂ ಮುಂಭಾಗದಲ್ಲಿ ಅಂಕಿಗಳೊಂದಿಗೆ ಸಂಖ್ಯೆಯ ಫಲಕವನ್ನು ಇರಿಸಲಾಗಿದೆ.

Join Nadunudi News WhatsApp Group