500 Rs: 500 ರೂ ನೋಟುಗಳ ಮೇಲೆ RBI ಇನ್ನೊಂದು ಘೋಷಣೆ, ಇಂತಹ ನೋಟುಗಳು ನಕಲಿ ಅಲ್ಲ.

ನಕಲಿ ಹಾಗೂ ಅಸಲಿ ನೋಟುಗಳ ಪತ್ತೆಹಚ್ಚುವಿಕೆಯ ಬಗ್ಗೆ ಮಾಹಿತಿ ನೀಡಿದ ಆರ್ ಬಿಐ.

500 Rs Star Note: ಇತ್ತೀಚಿಗೆ ಆರ್ ಬಿ ಐ ನೋಟುಗಳ ವಿಚಾರವಾಗಿ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಈಗಾಗಲೇ ದೇಶದಲ್ಲಿ 2000 ಮುಖಬೆಲೆಯ ನೋಟನ್ನು ಆರ್ ಬಿಐ (RBI)  ರದ್ದುಗೊಳಿಸಿದೆ. ಇನ್ನು ಸೆಪ್ಟೆಂಬರ್ 30 ರತನಕ ನೋಟು ಠೇವಣಿ ಮತ್ತು ವಿನಿಮಯ ಪ್ರಕ್ರಿಯೆ ಸಮಯವನ್ನು ನೀಡಲಾಗಿದೆ.

ಇನ್ನು 2,000 ನೋಟು ರದ್ದಾದ ಬಳಿಕ ಹೊಸ ನೋಟುಗಳ ಚಲಾವಣೆಯ ಕುರಿತು ಸಾಕಷ್ಟು ಮಾಹಿತಿ ವೈರಲ್ ಆಗಿದೆ. ಇನ್ನು ಇದೀಗ ನೋಟಿನ ವಿಚಾರವಾಗಿ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ನಕಲಿ  500 ರೂಪಾಯಿ. ಮುಖಬೆಲೆಯ ನೋಟುಗಳ ಚಲಾವಣೆಗೆ ಬಂದಿದೆ ಎನ್ನಲಾಗುತ್ತಿದೆ.

500 rupee notes with star symbol
Image Credit: Collectorbazar

ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿರುವ ನಕಲಿ ಹಾಗೂ ಅಸಲಿ ನೋಟುಗಳ ಪತ್ತೆಹಚ್ಚುವಿಕೆಯ ಬಗ್ಗೆ ಆರ್ ಬಿಐ (RBI) ಮಾಹಿತಿ ನೀಡಿದೆ. 500 ರೂಪಾಯಿ ಸ್ಟಾರ್ ಚಿಹ್ನೆ ಹೊಂದಿರುವ ನೋಟುಗಳು ಚಲಾವಣೆಯಲ್ಲಿದೆ ಎಂದು ಆರ್ ಬಿ ಐ ಹೇಳುತ್ತಿದೆ.

500 ರೂಪಾಯಿ ಸ್ಟಾರ್ ಚಿಹ್ನೆ ಹೊಂದಿರುವ ನೋಟುಗಳು
ಇನ್ನು ಮುಂದಿನ ಬಾರಿ ನೋಟುಗಳ ಸಂಖ್ಯೆ ಫಲಕದಲ್ಲಿ ನಕ್ಷತ್ರ ಚಿಹ್ನೆ ಹೊಂದಿರುವ ಬ್ಯಾಂಕ್ ನೋಟನ್ನು ನೀವು ಕಂಡುಕೊಂಡರೆ ಚಿಂತಿಸಬೇಕಾಗಿಲ್ಲ. ನಕ್ಷತ್ರ ಚಿಹ್ನೆ ಹೊಂದಿರುವ ಬ್ಯಾಂಕ್ ನೋಟುಗಳು ಕಾನೂನುಬದ್ಧವಾಗಿ ಮಾನ್ಯವಾಗಿದೆ. ಈ ನೋಟುಗಳ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಪಷ್ಟನೆ ನೀಡಿದೆ. ನಕ್ಷತ್ರ ಚಿಹ್ನೆಯಿಲ್ಲದ ಬ್ಯಾಂಕ್ ನೋಟಿನಂತೆಯೇ ನಕ್ಷತ್ರ ಚಿಹ್ನೆ ಇರುವ ಬ್ಯಾಂಕ್ ನೋಟು ಕಾನೂನುಬದ್ದವಾಗಿದೆ ಎಂದು ಆರ್ ಬಿ ಐ ಹೇಳಿದೆ.

500 Rs Star Note latest news
Image Credit: Bhatkallys

ಬ್ಯಾಂಕ್ ನೋಟಿನ ಪೂರ್ವ ಪ್ರತ್ಯಯ ಮತ್ತು ಸರಣಿ ಸಂಖ್ಯೆಯ ನಡುವೆ ನಕ್ಷತ್ರ ಚಿಹ್ನೆಯನ್ನು ಸೇರಿಸಲಾಗಿದೆ ಎಂದು ಆರ್ ಬಿ ಐ ತಿಳಿಸಿದೆ. ನಕ್ಷತ್ರ ಚಿಹ್ನೆಯನ್ನು ಹೊಂದಿರುವ ನೋಟು ಹಾನಿಗೊಳಗಾದ ನಂತರ ಅದೇ ಸಂಖ್ಯೆ ಮತ್ತು ಪೂರಪ್ರತ್ಯಯದೊಂದಿಗೆ ನಕ್ಷತ್ರ ಚಿಹ್ನೆಯನ್ನು ಸೇರಿಸುವ ಮೂಲಕ ನೋಟನ್ನು ಬದಲಾಯಿಸಲಾಗಿದೆಯೇ ಅಥವಾ ಮರುಮುದ್ರಣ ಮಾಡಲಾಗಿದೆಯೇ ಎಂದು ಗುರುತಿಸುತ್ತದೆ.

Join Nadunudi News WhatsApp Group

ಸ್ಟಾರ್ ಚಿಹ್ನೆಗಳನ್ನು ಹೊಂದಿರುವ ಬ್ಯಾಂಕ್ ನೋಟುಗಳು ಸಿಂಧುತ್ವದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗಳ ನಂತರ ಆರ್ ಬಿ ಐ ಈ ಸ್ಪಷ್ಟಿಕರಣವನ್ನು ತಿಳಿಸಿದೆ. ಬ್ಯಾಂಕ್ ನೋಟುಗಳ ಸಂಖ್ಯೆ ಫಲಕದಲ್ಲಿ ನಕ್ಷತ್ರ ಚಿಹ್ನೆಯನ್ನು ಸೇರಿಸಲಾಗಿದೆ ಎಂದು ಆರ್ ಬಿ ಐ ತಿಳಿಸಿದೆ. ನಕ್ಷತ್ರ ಚಿಹ್ನೆಯನ್ನು ಹೊಂದಿರುವ ಈ ನೋಟುಗಳನ್ನು ಸರಣಿ ಸಂಖ್ಯೆಯೊಂದಿಗೆ 100 ತುಣುಕುಗಳಲ್ಲಿ ಮುದ್ರಿಸಲಾಗುತ್ತದೆ.

Join Nadunudi News WhatsApp Group