RBI Restrictions: PhonePe ಮತ್ತು Google Pay ಬಳಸುವವರಿಗೆ RBI ನಿಂದ ಇನ್ನೊಂದು ಘೋಷಣೆ, ಷರತ್ತು ವಿಧಿಸಿದ RBI

ಫೋನ್ ಪೆ ಮತ್ತು ಗೂಗಲ್ ಪೆ ಮೇಲೆ ಷರತ್ತು ವಿಧಿಸಿದ RBI

RBI Action On PhonePe And Google Pay: ಸದ್ಯ ದೇಶದಲ್ಲಿ Paytm ನ ಮೂಲಕ ವಹಿವಾಟು ಸ್ಥಗಿತಗೊಂಡಿದೆ. ಪೆಟಿಎಂ ಬಳಕೆದಾರರು ಸೇವೆಯನ್ನು ಪಡೆಯಲು ಸಾಧ್ಯವಾಗದೆ ಇದೀಗಇನ್ನಿತರ ಆನ್ಲೈನ್ ಪಾವತಿ ಅಪ್ಲಿಕೇಶನ್ ಗಳನ್ನೂ ಬಳಸುತ್ತಿದ್ದಾರೆ.

ಸದ್ಯ ದೇಶದಲ್ಲಿ ಡಿಜಿಟಲ್ ಪಾವತಿ ಹೆಚ್ಚು ಬಳಕೆಯಾಗತ್ತಿರುವ ಕಾರಣ ಜನರು ಎಲ್ಲ ರೀತಿಯ ಯುಪಿಐ ಪಾವತಿ ಅಪ್ಲಿಕೇಶನ್ ಗಳನ್ನೂ ಬಳಸುತ್ತಾರೆ. ಸದ್ಯ ದೇಶದಲ್ಲಿ ಡಿಜಿಟಲ್ ಪಾವತಿಗೆ ಬಳಕೆಯಾಗುತ್ತಿರುವ PhonePe ಮತ್ತು Google Pay ಬಗ್ಗೆ ಇದೀಗ ಹೊಸ ಅಪ್ಡೇಟ್ ಹೊರಬಿದ್ದಿದೆ.

RBI Action On PhonePe And Google Pay
Image Credit: Informal Newz

PhonePe ಮತ್ತು Google Pay ಗೆ ಕೂಡ ಕಡಿವಾಣ ಹಾಕಲು ಮುಂದಾದ RBI
ಇನ್ನು ಪೆಟಿಎಂನ ಹೊರತಾಗಿ PhonePe ಮತ್ತು Google Pay ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ದೇಶದಲ್ಲಿ ಕೋಟ್ಯಂತರ ಸಂಖ್ಯೆಯಲ್ಲಿ ಜನರು ಈ ಎರಡು ಅಪ್ಲಿಕೇಶನ್ ಗಳನ್ನೂ ಬಳಸುತ್ತಿದ್ದಾರೆ. RBI ಇದೀಗ PhonePe ಮತ್ತು Google Pay ಗೆ ಕೂಡ ಕಡಿವಾಣ ಹಾಕಲು ಮುಂದಾಗಿದೆ. ಇದಕ್ಕೆ ಕಾರಣ ಏನಿರಬಹದು..? ಎನ್ನುವ ಬಗ್ಗೆ ನಾವೀಗ ಈ ಲೇಖನದಲ್ಲಿ ಮಾಹಿತಿ ತಿಳಿಯೋಣ.

RBI PhonePe ಮತ್ತು Google Pay ಗೆ ಕೂಡ ಕಡಿವಾಣ ಹಾಕಲು ಕಾರಣವೇನು..?
PhonePe ಮತ್ತು Google Pay ನಲ್ಲಿ ದೇಶದಲ್ಲಿ ಸುಮಾರು 80 ಪ್ರತಿಶತ ಪಾವತಿ ನಡೆಯುತ್ತಿದೆ. ಇನ್ನು PhonePe ಮತ್ತು Google Pay ಎರಡು UPI Application ಗಳು ಅಮೇರಿಕ ಕಂಪನಿಗಳಾಗಿವೆ. ಸದ್ಯ ಯುಪಿಐ ಮಾರುಕಟ್ಟೆಯಲ್ಲಿ ಈ ಎರಡು ಕಂಪನಿಗಳ ಪ್ರಾಬಲ್ಯ ಹೆಚ್ಚಿದೆ ಎನ್ನಬಹುದು. ಮಾರುಕಟ್ಟೆಯಲ್ಲಿ ವಿದೇಶಿ ಕಂಪನಿಗಳು ಪಾರುಪತ್ಯ ಸಾಧಿಸಿರುವುದು ಸರ್ಕಾರವನ್ನು ಚಿಂತೆಗೀಡು ಮಾಡಿದೆ.

PhonePe And Google Pay
Image Credit: Entrackr

ಸದ್ಯ ಭಾರತದ್ಲಲಿ PhonePe ಮತ್ತು Google Pay ಪ್ರಾಬಲ್ಯವನ್ನು ಕಡಿಮೆ ಮಾಡಲು ಸರ್ಕಾರ ಹೊಸ ಯೋಜನೆಯನ್ನು ಹೂಡುತ್ತಿದೆ. ಇತ್ತೀಚಿಗೆ ಸಂಸದೀಯ ಸಮಿತಿಯು ದೇಶಿಯ ಫ಼ಿನ್ ಟೆಕ್ ಸಂಸ್ಥೆಗಳಿಗೆ ಸೌಲಭ್ಯವನ್ನು ಒದಗಿಸುವಂತೆ ಸರ್ಕಾರವನ್ನು ಕೇಳಿದೆ. ಸರ್ಕಾರ ಯುಪಿಐ ಪಾವತಿ ಸೇವೆಯನ್ನು ಶೇ. 30 ಕ್ಕೆ ಇಳಿಸಬಹುದು. ಇದರಿಂದ ಅಮೇರಿಕ ಕಂಪನಿಗಳ ಪ್ರಾಬಲ್ಯವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ.

Join Nadunudi News WhatsApp Group

Join Nadunudi News WhatsApp Group