Repo Rate: ಬ್ಯಾಂಕ್ ಸಾಲ ಮಾಡಿದವರಿಗೆ ಗುಡ್ ನ್ಯೂಸ್, ಮಹತ್ವದ ನಿರ್ಧಾರ ಹೊರಹಾಕಿದ RBI.

RBI ರೆಪೋ ದರವನ್ನ ಪರಿಷ್ಕರಣೆ ಮಾಡಿದೆ, ಆದರೆ ಜನರ ಸಾಲಗಳ ಬಡ್ಡಿದರ ಯಾವುದೇ ಏರಿಕೆ ಆಗಿಲ್ಲ.

RBI Repo Rate Changes: 2023 -24 ಹಣಕಾಸು ವರ್ಷ (Financial Year) ಏಪ್ರಿಲ್ 1 2023 ರಿಂದ ಆರಂಭಗೊಂಡಿದೆ. ಈ ಹೊಸ ಹಣಕಾಸು ವರ್ಷದ ಆರಂಭದಿಂದಾಗಿ ಅನೇಕ ಹಣಕಾಸಿನ ನಿಯಮಗಳಲ್ಲಿ ಬದಲಾವಣೆಯಾಗಿದೆ. ಇನ್ನು ಜನಸಾಮಾನ್ಯರು ಈ ಹೊಸ ಹಣಕಾಸು ವರ್ಷದ ಆರಂಭದಿಂದ ಹಣದುಬ್ಬರದ ಪರಿಸ್ಥಿಯನ್ನು ಎದುರಿಸುತ್ತಿದ್ದಾರೆ.

ಜನರ ಆರ್ಥಿಕ ಪರಿಸ್ಥಿತಿಯ ಮೇಲೆ ಈ ಹಣದುಬ್ಬರ ಪ್ರಭಾವ ಬೀರುತ್ತಿದೆ. ಭಾರತೀಯ ರಿಸರ್ವ್ ಬ್ಯಾಂಕ್ (Reserve Bank Of India) ಶೀಘ್ರದಲ್ಲಿಯೇ ರೆಪೋ ದರಗಳಲ್ಲಿ (Repo Rate) ಕಡಿಮೆ ಮಾಡಲಿದೆ. ರೆಪೋ ದರಗಳ ಕಡಿತದ ನಂತರ ಸಾಮಾನ್ಯ ಜನರ EMI ಸಹ ಕಡಿಮೆ ಆಗುತ್ತದೆ. ಇದೀಗ ರೆಪೋ ದರದ ಕುರಿತಾಗಿ ಆರ್ ಬಿಐ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

RBI has revised the repo rate, but there has been no increase in the interest rate on personal loans.
Image Credit: livemint

ರೆಪೋ ದರದ ಕುರಿತು ಆರ್ ಬಿಐ ಮಹತ್ವದ ನಿರ್ಧಾರ
ಕಳೆದ ಬಾರಿ ಆರ್ ಬಿಐ ಆರು ಬಾರಿ ರೆಪೊ ದರವನ್ನು ಹೆಚ್ಚಿಸಿದೆ. ಕಳೆದ ವರ್ಷದ ಮೇ ತಿಂಗಳಿನಿಂದ RBI ರೆಪೋ ದರದಲ್ಲಿ ಶೇ. 2.5 ಏರಿಕೆ ಕಂಡುಬಂದಿದೆ. ಕಳೆದ ಎರಡು ವರ್ಷಗಳಲ್ಲಿ ಶೇ. 4 ಕ್ಕೆ ನಿಗಧಿಯಾಗಿದ್ದ ಆರ್ ಬಿಐ ರೆಪೋ ದರ 2023 ರ ಜನವರಿ ವೇಳೆಯಲ್ಲಿ ಮತ್ತೆ ಹೆಚ್ಚಳವಾಗಿತ್ತು.

RBI has revised the repo rate, but there has been no increase in the interest rate on personal loans.
Image Credit: businessleague

ಇಂದು RBI ರೆಪೋ ದರ ಮತ್ತೆ ಹೆಚ್ಚಳ ಮಾಡುತ್ತದೆ ಎಂದು ಹೇಳಲಾಗುತ್ತಿತ್ತು, ಆದರೆ ಸಾಲಗಳ ಹೊರೆ ಹೆಚ್ಚಾಗಬಾರದು ಅನ್ನುವ ಉದ್ದೇಶದಿಂದ RBI ರೆಪೋ ದರದಲ್ಲಿ ಯಥಾಸ್ಥಿತಿಯನ್ನ ಕಾಯ್ದುಕೊಂಡಿದೆ. ಪ್ರಸ್ತುತ ರೆಪೋ ದರ ಇದೀಗ 6.5 ರಷ್ಟಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ ಬಿಐ ಹಣಕಾಸು ನೀತಿ ಸಮಿತಿಯ ಎರಡನೇ ಮತ್ತು 43 ನೇ ಸಭೆ ನಡೆಸಿದೆ. ಈ ಬಾರಿಯ ಹಣದುಬ್ಬರದ ಪರಿಸ್ಥಿತಿಯಿಂದ ರೆಪೋ ದರ ಹೆಚ್ಚಿಸುವ ಸಾಧ್ಯತೆ ಕಡಿಮೆ ಇದೆ.

Join Nadunudi News WhatsApp Group

Join Nadunudi News WhatsApp Group