New Repo Rate: ಬ್ಯಾಂಕ್ ಸಾಲ ಮಾಡಿದವರಿಗೆ ಬೇಸರದ ಸುದ್ದಿ, ಮತ್ತೆ ಹೆಚ್ಚಾಗಲಿದೆ ಇಂತಹ ಸಾಲಗಳ ಬಡ್ಡಿದರ

RBI ಮತ್ತೆ ರೆಪೋ ದರವನ್ನ ಏರಿಕೆ ಮಾಡುವ ನಿರೀಕ್ಷೆ ಇದ್ದು ಬ್ಯಾಂಕ್ ಸಾಲಗಳ ಬಡ್ಡಿದರ ಮತ್ತೆ ಹೆಚ್ಚಾಗುವ ನಿರೀಕ್ಷೆ ಇದೆ.

RBI Repo Rate: 2023 -24 ಹಣಕಾಸು ವರ್ಷ (Financial Year) ಏಪ್ರಿಲ್ 1 2023 ರಿಂದ ಆರಂಭಗೊಂಡಿದೆ. ಈ ಹೊಸ ಹಣಕಾಸು ವರ್ಷದ ಆರಂಭದಿಂದಾಗಿ ಅನೇಕ ಹಣಕಾಸಿನ ನಿಯಮಗಳಲ್ಲಿ ಬದಲಾವಣೆಯಾಗಿದೆ.

ಇನ್ನು ಜನಸಾಮಾನ್ಯರು ಈ ಹೊಸ ಹಣಕಾಸು ವರ್ಷದ ಆರಂಭದಿಂದ ಹಣದುಬ್ಬರದ ಪರಿಸ್ಥಿಯನ್ನು ಎದುರಿಸುತ್ತಿದ್ದಾರೆ. ಜನರ ಆರ್ಥಿಕ ಪರಿಸ್ಥಿತಿಯ ಮೇಲೆ ಈ ಹಣದುಬ್ಬರ ಪ್ರಭಾವ ಬೀರುತ್ತಿದೆ. ಇನ್ನು ಬ್ಯಾಂಕ್ ನಲ್ಲಿ ಸಾಲ ಮಾಡಿದವರಿಗೆ ಇದೀಗ ಬಡ್ಡಿದರ ಹೆಚ್ಚಿಸುವ ಬಗ್ಗೆ ಆರ್ ಬಿಐ ಚಿಂತನೆ ನಡೆಸುತ್ತಿದೆ.

RBI is expected to increase the repo rate again and the interest rate on bank loans is expected to increase again.
Image Credit: businessleague

ರೆಪೋ ದರ ಹೆಚ್ಚಿಸುವ ಕುರಿತು ಆರ್ ಬಿಐ ಮಹತ್ವದ ನಿರ್ಧಾರ
ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank Of India) ರೆಪೊ ದರವನ್ನು ಹೆಚ್ಚಿಸಲು ನಿರ್ಧರಿಸಿರುವ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಪ್ರಸ್ತುತ 25 ಬೇಸಿಸ್ ಪಾಯಿಂಟ್ ಗಳಷ್ಟು ರೆಪೊ ದರ (Repo Rate) ಹೆಚ್ಚಳದೊಂದಿಗೆ ರೆಪೊ ದರ ಶೇ. 6.25 ರಿಂದ ಶೇ. 6.5 ಕ್ಕೆ ಏರಿಕೆಯಾಗಿದೆ. ಹಣದುಬ್ಬರವನ್ನು ನಿಯಂತ್ರಿಸಲು ಕೇಂದ್ರ ಬ್ಯಾಂಕ್ ಆರು ಬಾರಿ ರೆಪೊ ದರವನ್ನು ಹೆಚ್ಚಿಸಿದೆ.

ಮತ್ತೆ ಹೆಚ್ಚಾಗಲಿದೆ ಇಂತಹ ಸಾಲಗಳ ಬಡ್ಡಿದರ
2023 ರ ಜನವರಿ ವೇಳೆಯಲ್ಲಿ ಆರ್ ಬಿಐ ರೆಪೋ ದರ ಶೇ. 6.50 ಕ್ಕೆ ಏರಿಕೆಯಾಗಿದೆ. ಈ ರೆಪೋ ದರಗಳ ಹೆಚ್ಚಳ ಗೃಹ ಸಾಲ ಮತ್ತು ವಾಹನ ಸಾಲಗಳ ಮೇಲು ದೊಡ್ಡ ರೀತಿಯಲ್ಲಿ ಪರಿಣಾಮ ಬೀರಲಿದೆ.

RBI is expected to increase the repo rate again and the interest rate on bank loans is expected to increase again.
Image Credit: livemint

ಇದೀಗ ಭಾರತದಲ್ಲಿ ಹಣದುಬ್ಬರವು ಶೇ. 4 .7 ರಷ್ಟಿದೆ. ಈ ಕಾರಣದಿಂದಾಗಿ ಆರ್ ಬಿಐ ತನ್ನ ತನ್ನ ರೆಪೋ ದರವನ್ನು ಹೆಚ್ಚಿಸುವ ಸಾಧ್ಯತೆ ಕಡಿಮೆ ಇದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ RBI ರೆಪೋ ದರದಲ್ಲಿ ಯಾವುದೇ ರೀತಿಯ ಏರಿಕೆ ಮಾಡಿಲ್ಲ. RBI ರೆಪೋ ದರ ಹೆಚ್ಚಾದರೆ ಬ್ಯಾಂಕ್ ಗಳ ಸಾಲದ ದರಗಳು ಕೂಡ ಹೆಚ್ಚಾಗುತ್ತದೆ.

Join Nadunudi News WhatsApp Group

Join Nadunudi News WhatsApp Group