RBI Update: ನೋಟುಗಳ ವಿಷಯವಾಗಿ ಹೊಸ ರೂಲ್ಸ್ ಜಾರಿಗೆ ತಂದ RBI, ನೋಟ್ ಬಳಸುವ ಎಲ್ಲರಿಗೂ ಅನ್ವಯ

ಹಳೆಯ ನೋಟುಗಳ ವಿಷಯವಾಗಿ ಇನ್ನೊಂದು ಘೋಷಣೆ ಮಾಡಿದ RBI

RBI Guidelines For Old Note Sale: ಪ್ರಸ್ತುತ ದೇಶದಲ್ಲಿ ಸೈಬರ್ ಕ್ರಿಮಿನಲ್ ಗಳು ಜನಸಾಮಾನ್ಯರನ್ನು ವಂಚಿಸಲು ಹೊಸ ಹೊಸ ರೀತಿಯಲ್ಲಿ ಪ್ರಯತ್ನ ಪಡುತ್ತಿದ್ದಾರೆ. ಇನ್ನು ಇತ್ತೀಚೆಗೆ ದೇಶದಲ್ಲಿ online ನಲ್ಲಿ ಹಳೆಯ ನೋಟು ಹಾಗೂ ನಾಣ್ಯಗಳ ಮಾರಾಟದ ಬಗ್ಗೆ ಸುದ್ದಿಗಳು ಸಾಕಷ್ಟು ವೈರಲ್ ಆಗುತ್ತಿದೆ.

ಆನ್ಲೈನ್ ನ ಮುಖಾಂತರ ಜನರು ತಮ್ಮ ಬಳಿ ಇರುವ ನೋಟು ನಾಣ್ಯಗಳನ್ನು ಮಾರಾಟ ಮಾಡುತ್ತಾ ಹಣ ಸಂಪಾದಿಸುತ್ತಿದ್ದಾರೆ. ಇದೀಗ ವಂಚಕರು ಈ ಪ್ರಕ್ರಿಯೆಯನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ RBI ನೋಟುಗಳ ವಿಷಯವಾಗಿ ಹೊಸ ರೂಲ್ಸ್ ಜಾರಿಗೆ ತಂದಿದೆ.

RBI Guidelines For Old Note Sale
Image Credit: Rewariyasat

ನೋಟುಗಳ ವಿಷಯವಾಗಿ ಹೊಸ ರೂಲ್ಸ್ ಜಾರಿಗೆ ತಂದ RBI
ಈಗ ವಂಚಕರು ಹಳೆ ನೋಟು, ನಾಣ್ಯಗಳನ್ನು ಹರಾಜು ಹಾಕುವ ಮೂಲಕ (Online Auction of Old Coins) ಲಕ್ಷಗಟ್ಟಲೆ ಹಣ ಗಳಿಸುವ ಆಮಿಷ ಒಡ್ಡುತ್ತಿದ್ದಾರೆ. ಅಂತರ್ಜಾಲದಲ್ಲಿನ ಅನೇಕ ಸೈಟ್‌ ಗಳು ಹಳೆಯ ನೋಟುಗಳು ಮತ್ತು ನಾಣ್ಯಗಳ ಖರೀದಿ ಮತ್ತು ಮಾರಾಟದಲ್ಲಿ ತೊಡಗಿವೆ. ವಿಶೇಷವೆಂದರೆ ಈ ನಕಲಿ ಸೈಟ್‌ ಗಳು RBI ಹೆಸರು ಅಥವಾ ಲೋಗೋ ಬಳಸಿ ಜನರನ್ನು ವಂಚಿಸುತ್ತಿವೆ. ಇಂತಹ ಆಫರ್‌ ಗಳಿಗೆ ಬಲಿಯಾಗಬೇಡಿ ಎಂದು RBI ಇದೀಗ ಜನರಿಗೆ ಎಚ್ಚರಿಕೆ ನೀಡಿದೆ.

ಹಳೆಯ ನೋಟು ಅಥವಾ ನಾಣ್ಯಗಳ ಹರಾಜಿಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟಪಡಿಸಿದೆ. RBI ಹೆಸರಿನಲ್ಲಿ ಯಾರಾದರೂ ಇಂತಹ ಕೆಲಸ ಮಾಡುತ್ತಿದ್ದರೆ ಅದರ ಬಗ್ಗೆ ದೂರು ನೀಡಬೇಕು. ಯಾರಾದರೂ ಹಳೆಯ ನೋಟುಗಳು ಅಥವಾ ನಾಣ್ಯಗಳನ್ನು ಮಾರಾಟ ಮಾಡಲು ಬಯಸಿದರೆ ಅವರು RBI ಮಾರ್ಗಸೂಚಿಗಳನ್ನು ಓದಬೇಕು. ಇತ್ತೀಚಿನ ದಿನಗಳಲ್ಲಿ ಆನ್‌ ಲೈನ್ ಮತ್ತು ಆಫ್‌ ಲೈನ್‌ನಲ್ಲಿ ಇಂತಹ ಜಾಹೀರಾತುಗಳನ್ನು ಪ್ರಸಾರ ಮಾಡಲಾಗುತ್ತಿದ್ದು, ಹಳೆ ನೋಟು ಅಥವಾ ನಾಣ್ಯಗಳನ್ನು ಹರಾಜು ಹಾಕಿ ಲಕ್ಷಗಟ್ಟಲೆ ಹಣ ಗಳಿಸುವ ಆಮಿಷ ಒಡ್ಡಲಾಗುತ್ತಿದೆ.

Old Note Sale Rules
Image Credit: Zeenews

ನೋಟ್ ಬಳಸುವ ಎಲ್ಲರಿಗೂ ಅನ್ವಯ
ಅನೇಕ ಸೈಟ್‌ ಗಳು ವಾಸ್ತವವಾಗಿ ಈ ಉದ್ದೇಶಕ್ಕಾಗಿ RBI ಹೆಸರನ್ನು ಬಳಸುತ್ತಿವೆ. ಹಳೆಯ ನೋಟುಗಳು ಅಥವಾ ನಾಣ್ಯಗಳನ್ನು ಹರಾಜು ಮಾಡಲು ಯಾರಾದರೂ ನಿಮ್ಮನ್ನು ಸಂಪರ್ಕಿಸಿದಾಗ, ವಂಚಕರು ಶುಲ್ಕ, ಕಮಿಷನ್ ಅಥವಾ ತೆರಿಗೆ ರೂಪದಲ್ಲಿ ಹಣವನ್ನು ಬೇಡಿಕೆಯಿಡುತ್ತಾರೆ.

Join Nadunudi News WhatsApp Group

ಈ ಆಮಿಷಕ್ಕೆ ಒಳಗಾಗದೆ ಹೆಚ್ಚಿನ ನಷ್ಟ ಅನುಭವಿಸಬೇಕಾಗುತ್ತದೆ. ನೋಟುಗಳು ಅಥವಾ ನಾಣ್ಯಗಳನ್ನು ಹರಾಜು ಮಾಡುವ ಮೂಲಕ ವಹಿವಾಟು ಶುಲ್ಕವನ್ನು ಸಂಗ್ರಹಿಸುವ ಹಕ್ಕನ್ನು ಯಾವುದೇ ಸಂಸ್ಥೆ, ಕಂಪನಿ ಅಥವಾ ವ್ಯಕ್ತಿಗೆ ನೀಡಲಾಗಿಲ್ಲ. ರಿಸರ್ವ್ ಬ್ಯಾಂಕ್ ಹೆಸರಿನಲ್ಲಿ ಈ ನಕಲಿ Online ಪ್ಲಾಟ್‌ ಫಾರ್ಮ್‌ ಗಳನ್ನು ಬಳಸಬೇಡಿ ಎಂದು RBI ಜನರಿಗೆ ಮನವಿ ಮಾಡಿದೆ.

 Old Note Sale
Image Credit: Bankingschool

Join Nadunudi News WhatsApp Group