RBI Update: 500 ರೂ ನೋಟುಗಳನ್ನ ಬಳಸುವ ಎಲ್ಲರಿಗೂ ಎಚ್ಚರಿಕೆ ನೀಡಿದ RBI, ಬೇಗನೆ ಪರಿಶೀಲಿಸಿಕೊಳ್ಳಿ.

500 ರೂಪಾಯಿ ನೋಟುಗಳ ಮೇಲೆ ಇನ್ನೊಂದು ಘೋಷಣೆ ಮಾಡಿದರೆ RBI.

500 Currency Note Latest Update: ಸದ್ಯ ದೇಶದಲ್ಲಿ 2000 ರೂಪಾಯಿ ನೋಟುಗಳು ಅಮಾನ್ಯಗೊಂಡ ಬಳಿಕ 500 ರೂ. ನೋಟುಗಳು ಹೆಚ್ಚಿನ ಮೌಲ್ಯ ಪಡೆದುಕೊಂಡಿದೆ ಎನ್ನಬಹುದು. ಇನ್ನು ದೇಶದಲ್ಲಿ 500 ರೂ. ನೋಟುಗಳ ಬಗ್ಗೆ ಕೂಡ ದಿನಕ್ಕೊಂದು ಹೊಸ ಹೊಸ ಸುದ್ದಿ ವೈರಲ್ ಆಗುತ್ತಲೇ ಇರುತ್ತದೆ. 500 ರೂ. ನೋಟಿನ ಬ್ಯಾನ್ ಬಗ್ಗೆ ಸುದ್ದಿ ವೈರಲ್ ಆಗಿದ್ದು, RBI ಈ ಬಗ್ಗೆ ಸ್ಪಷ್ಟನೆ ನೀಡಿದೆ ಎನ್ನಬಹುದು.

ಇನ್ನು ನೋಟ್ ಬ್ಯಾನ್ ಸುದ್ದಿಯ ಬಳಿಕ ದೇಶದಲ್ಲಿ 500 ರೂ. ನಕಲಿ ನೋಟುಗಳು ಸೃಷ್ಟಿಯಾಗಿದೆ ಎನ್ನಬಹುದು. ಸದ್ಯ ದೇಶದಲ್ಲಿ 500 ರೂ. ಅಸಲಿ ಹಾಗೂ ನಕಲಿ ನೋಟುಗಳ ಬಗ್ಗೆ ಜನರಲ್ಲಿ ಗೊಂದಲ ಉಂಟಾಗುತ್ತಿದೆ. ಇದೀಗ RBI ನಕಲಿ ನೋಟುಗಳ ಸುದ್ದಿ ವೈರಲ್ ಆಗುತ್ತಿದೆ ಜನರಿಗೆ ಎಚ್ಚರಿಕೆ ಮೂಡಿಸುತ್ತಿದೆ. ಸದ್ಯ RBI 500 ರೂ. ನೋಟಿನ ಕುರಿತು ಮಹತ್ವದ ಹೇಳಿಕೆ ನೀಡಿದೆ.

RBI rules on 500 rupees note
Image Credit: Original Source

500 ರೂ ನೋಟುಗಳನ್ನ ಬಳಸುವ ಎಲ್ಲರಿಗೂ ಎಚ್ಚರಿಕೆ ನೀಡಿದ RBI
ನಿಖರತೆ ಮತ್ತು ಸ್ಥಿರತೆಗಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ತಮ್ಮ ನೋಟು ವಿಂಗಡಣೆ ಯಂತ್ರಗಳನ್ನು ಪರೀಕ್ಷಿಸಲು RBI ಬ್ಯಾಂಕ್‌ ಗಳಿಗೆ ಹೇಳಿದೆ. ನೋಟುಗಳ ಸರಿಯಾದ ಸ್ಥಿತಿಗೆ RBI 11 ಮಾನದಂಡಗಳನ್ನು ನಿಗದಿಪಡಿಸಿದೆ. ಅಲ್ಲದೆ ನೋಟು ವಿಂಗಡಣೆ ಯಂತ್ರಗಳ ಬದಲಿಗೆ ನೋಟ್ ಫಿಟ್ ವಿಂಗಡಣೆ ಯಂತ್ರಗಳನ್ನು ಬಳಸಲು ಬ್ಯಾಂಕ್‌ ಗಳಿಗೆ RBI ಸೂಚನೆ ನೀಡಿದೆ. ಇದೀಗ ಫಿಟ್ ಮತ್ತು ಅನ್ ಫಿಟ್ ನೋಟುಗಳ ಬಗ್ಗೆ ಮಾಹಿತಿ ತಿಳಿಯೋಣ.

ಫಿಟ್ ಮತ್ತು ಅನ್ ಫಿಟ್ ನೋಟುಗಳು
ಫಿಟ್ ನೋಟು ನಿಜವಾದ, ಸ್ಪಷ್ಟವಾದದ್ದಾಗಿದ್ದು, ಅದರ ಮೌಲ್ಯವನ್ನು ಸುಲಭವಾಗಿ ಕಂಡುಹಿಡಿಯಬಹುದು ಮತ್ತು ಮರುಬಳಕೆಗೆ ಸೂಕ್ತವಾಗಿರುತ್ತದೆ ಎಂದು RBI ಹೇಳಿದೆ. ಅನ್ ಫಿಟ್ ನೋಟು ಅದರ ಭೌತಿಕ ಸ್ಥಿತಿಯ ಕಾರಣದಿಂದಾಗಿ ಮರುಬಳಕೆಗೆ ಸೂಕ್ತವಲ್ಲ ಎಂದು RBI ತನ್ನ ಸುತ್ತೋಲೆಯಲ್ಲಿ ಮಾಹಿತಿ ನೀಡಿದೆ.

RBI new announcement on 500 rupees notes
Image Credit: Original Source

RBI ಸುತ್ತೋಲೆಯ ಪ್ರಕಾರ, ಬ್ಯಾಂಕ್‌ ಗಳು ಪ್ರತಿ ಮೂರು ತಿಂಗಳಿಗೊಮ್ಮೆ RBI ಗೆ ಕರೆನ್ಸಿ ನೋಟುಗಳ ಫಿಟ್‌ ನೆಸ್ ವರದಿಗಳನ್ನು ಕಳುಹಿಸಬೇಕಾಗುತ್ತದೆ. ಅನರ್ಹವಾಗಿರುವ ನೋಟುಗಳ ಸಂಖ್ಯೆ ಮತ್ತು ಸರಿಯಾದ ನಿರ್ವಹಣೆಯ ನಂತರ ಮರು ಬಿಡುಗಡೆ ಮಾಡಬಹುದಾದ ನೋಟುಗಳ ಬಗ್ಗೆ ಬ್ಯಾಂಕ್‌ ಗಳು RBI ಗೆ ಮಾಹಿತಿ ತಿಳಿಸಬೇಕಾಗುತ್ತದೆ.

Join Nadunudi News WhatsApp Group

Join Nadunudi News WhatsApp Group