Repo Rate 2024: ಬ್ಯಾಂಕ್ ಲೋನ್ ಮಾಡಿದವರಿಗೆ RBI ನಿಂದ ಬಿಗ್ ಅಪ್ಡೇಟ್, ಬಡ್ಡಿ ಹೆಚ್ಚಳ ಕುರಿತಂತೆ ಅಂತಿಮ ನಿರ್ಧಾರ.

ಸಾಲದ ಬಡ್ಡಿ ಹೆಚ್ಚಳ ಕುರಿತಂತೆ RBI ನ ಅಂತಿಮ ನಿರ್ಧಾರ

RBI Repo Rate Update: ಇಂದು RBI ಗವರ್ನರ್ ಶಕ್ತಿಕಾಂತ್ ದಾಸ್ (Shaktikanta Das) ಅವರು ರೆಪೋ ದರದ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಮೂರು ದಿನಗಳ ಸಭೆಯ ಬಳಿಕ ಇದೀಗ ರೆಪೋ ದರದ ಬಗ್ಗೆ ಬಿಗ್ ಅಪ್ಡೇಟ್ ಹೊರಬಿದ್ದಿದೆ. ಬ್ಯಾಂಕ್ ನಲ್ಲಿ ಸಾಲ ಪಡೆದವರು Repo ದರದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿದ್ದರು.

ಈ ಬಾರಿ ರೆಪೋ ದರ ಹೆಚ್ಚಾದರೆ ಇನ್ನಷ್ಟು ಹೆಚ್ಚಿನ EMI ಕಟ್ಟಬೇಕಾದ ಪರಿಸ್ಥಿತಿ ಎದುರಗಲಿದೆ ಎನ್ನುವ ಚಿಂತೆ ಸಾಲಗಾರರಲ್ಲಿ ಮೂಡಿತ್ತು. ಸದ್ಯ ಬ್ಯಾಂಕ್ ಲೋನ್ ಮಾಡಿದವರಿಗೆ RBI ನಿಂದ ಬಿಗ್ ಅಪ್ಡೇಟ್ ಹೊರಬಿದ್ದಿದೆ.

RBI Repo Rate Updates
Image Credit: The Hindu

ಬ್ಯಾಂಕ್ ಲೋನ್ ಮಾಡಿದವರಿಗೆ RBI ನಿಂದ ಬಿಗ್ ಅಪ್ಡೇಟ್
Reserve Bank Of India ಮತ್ತೊಮ್ಮೆ ರೆಪೋ ದರವನ್ನು ಸ್ಥಿರವಾಗಿಡಲು ನಿರ್ಧರಿಸಿದೆ. ಫೆಬ್ರವರಿ 8 ರಂದು RBI ಗವರ್ನರ್ ಶಕ್ತಿಕಾಂತ ದಾಸ್ ಅವರು ವಿತ್ತೀಯ ಪರಿಶೀಲನಾ ಸಭೆಯ ಫಲಿತಾಂಶಗಳನ್ನು ಪ್ರಕಟಿಸಿದ್ದಾರೆ. ಕೇಂದ್ರೀಯ ಬ್ಯಾಂಕ್ ಮತ್ತೊಮ್ಮೆ ರೆಪೋ ದರವನ್ನು ಯಥಾಸ್ಥಿತಿಯಲ್ಲಿ ಇರಿಸಿದೆ ಮತ್ತು ಅದರಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ.

ಸತತ ಆರನೇ ಬಾರಿಗೆ ರೆಪೊ ದರವನ್ನು ಶೇ.6.5 ಲ್ಲೇ ಉಳಿಸಿಕೊಳ್ಳಲು RBI ನಿರ್ಧರಿಸಿದೆ. RBI ನಿರ್ಧಾರದ ನಂತರ ಮತ್ತೊಮ್ಮೆ ಬಡ್ಡಿ ದರ ಶೇ.6.5 ರಲ್ಲೇ ಉಳಿದಿದೆ. ಈ ಬಾರಿ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಏರಿಕೆ ಮಾಡುತ್ತ..? ಅಥವಾ ಇಳಿಕೆ ಮಾಡುತ್ತಾ..? ಎನ್ನುವ ಜನರ ಕುತೂಹಲಕ್ಕೆ ಇಂದು ಬ್ರೇಕ್ ಬಿದ್ದಿದೆ. RBI ಈ ಬಾರಿ ಕೂಡ ರೆಪೋ ದರವನ್ನು ಯಥಾಸ್ಥಿತಿಯಲ್ಲಿ ಕಾಯ್ದಿರಿಸಿಕೊಂಡಿದೆ. ಈ ಮೂಲಕ ಬ್ಯಾಂಕ್ ನಲ್ಲಿ ಲೋನ್ ಮಾಡಿದವರಿಗೆ ಸಿಹಿ ಸುದ್ದಿ ನೀಡಿದೆ.

Repo Rate 2024Repo Rate 2024
Image Credit: Axisbank

ಬಡ್ಡಿ ಹೆಚ್ಚಳ ಕುರಿತಂತೆ RBI ಅಂತಿಮ ನಿರ್ಧಾರ
ಕಳೆದ ಬಾರಿ RBI ಆರು ಬಾರಿ ರೆಪೊ ದರವನ್ನು ಹೆಚ್ಚಿಸಿದೆ. ಕಳೆದ ವರ್ಷದ ಮೇ ತಿಂಗಳಿನಿಂದ RBI ರೆಪೋ ದರದಲ್ಲಿ ಶೇ. 2.5 ಏರಿಕೆ ಕಂಡುಬಂದಿದೆ. ಕಳೆದ ಎರಡು ವರ್ಷಗಳಲ್ಲಿ ಶೇ. 4 ಕ್ಕೆ ನಿಗಧಿಯಾಗಿದ್ದ ಆರ್ ಬಿಐ ರೆಪೋ ದರ (RBI Repo Rate) 2023 ರ ಜನವರಿ ವೇಳೆಯಲ್ಲಿ ಮತ್ತೆ ಹೆಚ್ಚಳವಾಗಿತ್ತು. 2023 ರ ಜನವರಿ ವೇಳೆಯಲ್ಲಿ ಆರ್ ಬಿಐ ರೆಪೋ ದರ ಶೇ. 6.50 ಕ್ಕೆ ಏರಿಕೆಯಾಗಿದೆ. ಇನ್ನು ಹಣದುಬ್ಬರತೆಯ ನಿಯಂತ್ರಣಕ್ಕಾಗಿ RBI ಈ ಬಾರಿ ಕೂಡ ರೆಪೋ ದರವನ್ನು ಯಥಾಸ್ಥಿತಿಯಲ್ಲಿ ಇರಿಸಿದೆ.

Join Nadunudi News WhatsApp Group

Join Nadunudi News WhatsApp Group