RBI Repo Rate: ಬ್ಯಾಂಕ್ ಸಾಲ ಮಾಡಿರುವ ಎಲ್ಲರಿಗೂ ಗುಡ್ ನ್ಯೂಸ್, RBI ನಿಂದ ಇನ್ನೊಂದು ಮಹತ್ವದ ಘೋಷಣೆ.

ಬ್ಯಾಂಕ್ ಸಾಲ ಮಾಡಿರುವ ಎಲ್ಲರಿಗೂ ಗುಡ್ ನ್ಯೂಸ್

RBI Repo Rate New Update: ಇಂದು RBI ಗವರ್ನರ್ ಶಕ್ತಿಕಾಂತ್ ದಾಸ್ (Shaktikanta Das) ಅವರು ರೆಪೋ ದರದ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಮಹತ್ವದ ಸಭೆಯ ಬಳಿಕ ಇದೀಗ ರೆಪೋ ದರದ ಬಗ್ಗೆ ಬಿಗ್ ಅಪ್ಡೇಟ್ ಹೊರಬಿದ್ದಿದೆ. ಬ್ಯಾಂಕ್ ನಲ್ಲಿ ಸಾಲ ಪಡೆದವರು Repo ದರದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿದ್ದರು.

ಈ ಬಾರಿ ರೆಪೋ ದರ ಹೆಚ್ಚಾದರೆ ಇನ್ನಷ್ಟು ಹೆಚ್ಚಿನ EMI ಕಟ್ಟಬೇಕಾದ ಪರಿಸ್ಥಿತಿ ಎದುರಗಲಿದೆ ಎನ್ನುವ ಚಿಂತೆ ಸಾಲಗಾರರಲ್ಲಿ ಮೂಡಿತ್ತು. ಸದ್ಯ ಬ್ಯಾಂಕ್ ಲೋನ್ ಮಾಡಿದವರಿಗೆ RBI ನಿಂದ ಬಿಗ್ ಅಪ್ಡೇಟ್ ಹೊರಬಿದ್ದಿದೆ. ರೆಪೋ ದರದ ಬದಲಾವಣೆಯ ಬಗ್ಗೆ RBI ಅಧಿಕೃತ ಮಾಹಿತಿ ನೀಡಿದೆ.

RBI Repo Rate New Update
Image Credit: Paytm

ಬ್ಯಾಂಕ್ ಸಾಲ ಮಾಡಿರುವ ಎಲ್ಲರಿಗೂ ಗುಡ್ ನ್ಯೂಸ್
ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೊಮ್ಮೆ ರೆಪೋ ದರವನ್ನು ಸ್ಥಿರವಾಗಿಡಲು ನಿರ್ಧರಿಸಿದೆ. ಕೇಂದ್ರೀಯ ಬ್ಯಾಂಕ್ ಮತ್ತೊಮ್ಮೆ ರೆಪೋ ದರವನ್ನು ಯಥಾಸ್ಥಿತಿಯಲ್ಲಿ ಇರಿಸಿದೆ ಮತ್ತು ಅದರಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ ನೇತೃತ್ವದ ಹಣಕಾಸು ನೀತಿ ಸಮಿತಿಯು (ಎಂಪಿಸಿ) ಸತತ ಎಂಟನೇ ಬಾರಿಗೆ ರೆಪೊ ದರವನ್ನು ಶೇಕಡಾ 6.5 ರಷ್ಟು ಯಥಾಸ್ಥಿತಿಯಲ್ಲಿ ಇರಿಸಲು ನಿರ್ಧರಿಸಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ದ್ವೈಮಾಸಿಕ ನೀತಿ ಸಭೆಯ ನಿರ್ಧಾರಗಳನ್ನು ಪ್ರಕಟಿಸಿದರು.

ಎಂಟನೇ ಏಳನೇ ಬಾರಿಗೆ ರೆಪೊ ದರವನ್ನು ಶೇ.6.5 ಲ್ಲೇ ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ. ಆರ್‌ಬಿಐ ನಿರ್ಧಾರದ ನಂತರ ಮತ್ತೊಮ್ಮೆ ಬಡ್ಡಿ ದರ ಶೇ.6.5 ರಲ್ಲೇ ಉಳಿದಿದೆ. ಈ ಬಾರಿ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಕಡಿತಗೊಳಿಸುತ್ತದೆ ಎಂದು ಜನರು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ RBI ಈ ಬಾರಿ ಕೂಡ ರೆಪೋ ದರವನ್ನು ಯಥಾಸ್ಥಿತಿಯಲ್ಲಿ ಕಾಯ್ದಿರಿಸಿಕೊಂಡಿದೆ. ಈ ಬಾರಿ ಕೂಡ ಸಾಲಗಾರರ ಹೊರೆ ಹೆಚ್ಚಾಗುವುದಿಲ್ಲ. ಸಾಲಗಾರರಿಗೆ RBI ಬಿಗ್ ರಿಲೀಫ್ ನೀಡಿದೆ.

Repo Rate New Update
Image Credit: Timesproperty

RBI ನಿಂದ ಇನ್ನೊಂದು ಮಹತ್ವದ ಘೋಷಣೆ
ಕೇಂದ್ರೀಯ ಬ್ಯಾಂಕ್‌ ನ ಆರು ಸದಸ್ಯರ ಹಣಕಾಸು ನೀತಿ ಸಮಿತಿಯು (MPC) ಸತತ ಎಂಟನೇ ಬಾರಿಗೆ ಪ್ರಮುಖ ನೀತಿ ದರಗಳನ್ನು ಯಥಾಸ್ಥಿತಿಯಲ್ಲಿಡಲು ನಿರ್ಧರಿಸಿದೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು 2024-25 ರ ಹಣಕಾಸು ವರ್ಷದಲ್ಲಿ ಯೋಜಿತ ನೈಜ ಜಿಡಿಪಿ ಬೆಳವಣಿಗೆಯನ್ನು ಹಿಂದಿನ ಅಂದಾಜಿನ 7% ರಿಂದ 7.2% ಕ್ಕೆ ಹೆಚ್ಚಿಸುವುದಾಗಿ ಘೋಷಿಸಿದ್ದಾರೆ.

Join Nadunudi News WhatsApp Group

ಮುಖ್ಯವಾಗಿ ಇಂಧನ ಬೆಲೆಗಳಲ್ಲಿನ ಹಣದುಬ್ಬರವಿಳಿತದ ಪ್ರವೃತ್ತಿಯಿಂದಾಗಿ ಎಲ್‌ಪಿಜಿ ಬೆಲೆಯಲ್ಲಿನ ಇಳಿಕೆಯಿಂದಾಗಿ ಬೇಸಿಗೆಯಲ್ಲಿ ತರಕಾರಿ ಬೆಲೆಗಳು ಪ್ರಸ್ತುತ ಹೆಚ್ಚಾಗುತ್ತಿವೆ ಎಂದು ಆರ್‌ಬಿಐ ಗವರ್ನರ್ ಹೇಳಿದ್ದಾರೆ. ಸಾಲವನ್ನು ಪಡೆಯುವ ಗ್ರಹಕರಿಗೆ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ RBI ತನ್ನ ರೆಪೊದರದಲ್ಲಿ ಯಥಾ ಸ್ಥಿತಿಯನ್ನು ಕಂಡುಕೊಂಡಿದೆ.

RBI Repo Rate latest
Image Credit: Housing

Join Nadunudi News WhatsApp Group