RBI Repo Rate: ಹೋಂ ಲೋನ್ ಮತ್ತು ಪರ್ಸನಲ್ ಲೋನ್ ಮಾಡಿದವರಿಗೆ RBI ನಿಂದ ಗುಡ್ ನ್ಯೂಸ್, ಅಧಿಕೃತ ಆದೇಶ.

ಹೋಂ ಲೋನ್ ಮತ್ತು ಪರ್ಸನಲ್ ಲೋನ್ ಮಾಡಿದವರಿಗೆ ಸಿಹಿ ಸುದ್ದಿ ನೀಡಿದ RBI.

RBI Repo Rate Update: RBI ನ Monetary Policy Committee ಮೂರು ದಿನಗಳ ಸಭೆ ಇಂದು ಮುಕ್ತಾಯಗೊಂಡಿದೆ. ಇದರ ಬೆನ್ನಲ್ಲೇ ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಇಂದು (ಫೆ.8) ಬೆಳಗ್ಗೆ ಪತ್ರಿಕಾಗೋಷ್ಠಿ ನಡೆಸಿ Repo Rate ಬಗ್ಗೆ ಅಧಿಕೃತ ಘೋಷಣೆ ಹೊರಡಿಸಿದ್ದಾರೆ. ಈ ಸಭೆಯಲ್ಲಿ ರೆಪೋ ದರ, GDP , ಹಣದುಬ್ಬರ ಸೇರಿದಂತೆ ಇನ್ನಿತರ ದರಗಳ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಸದ್ಯ ಶಕ್ತಿಕಾಂತ್ ದಾಸ್ ಅವರು ರೆಪೋ ದರದ ಬಗ್ಗೆ ಯಾವ ನಿರ್ಧಾರ ಕೈಗೊಂಡಿದ್ದಾರೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

RBI Repo Rate Update
Image Credit: Hindustantimes

ಹೋಂ ಲೋನ್ ಮತ್ತು ಪರ್ಸನಲ್ ಲೋನ್ ಮಾಡಿದವರಿಗೆ RBI ನಿಂದ ಗುಡ್ ನ್ಯೂಸ್
ಕಳೆದ ಹಣಕಾಸು ವರ್ಷದಲ್ಲಿ ಜನಸಾಮಾನ್ಯರು ಹಣದುಬ್ಬರದ ಪರಿಸ್ಥಿಯನ್ನು ಎದುರಿಸಿದ್ದರು. ಕಳೆದ ಬಾರಿ RBI ಆರು ಬಾರಿ ರೆಪೊ ದರವನ್ನು ಹೆಚ್ಚಿಸಿದೆ. ಕಳೆದ ವರ್ಷದ ಮೇ ತಿಂಗಳಿನಿಂದ RBI ರೆಪೋ ದರದಲ್ಲಿ ಶೇ. 2.5 ಏರಿಕೆ ಕಂಡುಬಂದಿದೆ.

ಕಳೆದ ಎರಡು ವರ್ಷಗಳಲ್ಲಿ ಶೇ. 4 ಕ್ಕೆ ನಿಗಧಿಯಾಗಿದ್ದ ಆರ್ ಬಿಐ ರೆಪೋ ದರ 2023 ರ ಜನವರಿ ವೇಳೆಯಲ್ಲಿ ಮತ್ತೆ ಹೆಚ್ಚಳವಾಗಿತ್ತು. 2023 ರ ಜನವರಿ ವೇಳೆಯಲ್ಲಿ ಆರ್ ಬಿಐ ರೆಪೋ ದರ ಶೇ. 6.50 ಕ್ಕೆ ಏರಿಕೆಯಾಗಿದೆ. ಸದ್ಯ ಇಂದು ನಡೆದ ಸಭೆಯಲ್ಲಿ RBI ರೆಪೋ ದರದ ಬಗ್ಗೆ ನಿರ್ಧಾರ ಕೈಗೊಂಡಿದ್ದು, ಹೋಂ ಲೋನ್ ಮತ್ತು ಪರ್ಸನಲ್ ಲೋನ್ ಮಾಡಿದವರಿಗೆ ಸಿಹಿ ಸುದ್ದಿ ನೀಡಿದೆ.

Repo Rate Unchanged
Image Credit: Loksatta

ಈ ಬಾರಿಯೂ RBI ರೆಪೋ ದರವನ್ನು ಬದಲಾಯಿಸಿಲ್ಲ
ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೊಮ್ಮೆ ರೆಪೋ ದರವನ್ನು ಸ್ಥಿರವಾಗಿಡಲು ನಿರ್ಧರಿಸಿದೆ. ಫೆಬ್ರವರಿ 8 ರಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ವಿತ್ತೀಯ ಪರಿಶೀಲನಾ ಸಭೆಯ ಫಲಿತಾಂಶಗಳನ್ನು ಪ್ರಕಟಿಸಿದ್ದಾರೆ. ಕೇಂದ್ರೀಯ ಬ್ಯಾಂಕ್ ಮತ್ತೊಮ್ಮೆ ರೆಪೋ ದರವನ್ನು ಯಥಾಸ್ಥಿತಿಯಲ್ಲಿ ಇರಿಸಿದೆ ಮತ್ತು ಅದರಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ.

ಸತತ ಆರನೇ ಬಾರಿಗೆ ರೆಪೊ ದರವನ್ನು ಶೇ.6.5 ಲ್ಲೇ ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ. ಆರ್‌ಬಿಐ ನಿರ್ಧಾರದ ನಂತರ ಮತ್ತೊಮ್ಮೆ ಬಡ್ಡಿ ದರ ಶೇ.6.5 ರಲ್ಲೇ ಉಳಿದಿದೆ. ಈ ಬಾರಿ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಕಡಿತಗೊಳಿಸುತ್ತದೆ ಎಂದು ಜನರು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ RBI ಈ ಬಾರಿ ಕೂಡ ರೆಪೋ ದರವನ್ನು ಯಥಾಸ್ಥಿತಿಯಲ್ಲಿ ಕಾಯ್ದಿರಿಸಿಕೊಂಡಿದೆ. ಈ ಬಾರಿ ಕೂಡ ಸಾಲಗಾರರ ಹೊರೆ ಹೆಚ್ಚಾಗುವುದಿಲ್ಲ.

Join Nadunudi News WhatsApp Group

Join Nadunudi News WhatsApp Group