RBI Update: ಏಪ್ರಿಲ್ ಮೊದಲ ವಾರವೇ 2000 ರೂ ನೋಟಿಗಳ ಮೇಲೆ ದೊಡ್ಡ ಘೋಷಣೆ ಮಾಡಿದ RBI, RBI ಆದೇಶ

ಇಂದಿನಿಂದ 2000 ರೂ. ನೋಟಿನ ವಿನಿಮಯ ಅಥವಾ ಠೇವಣಿ ಸ್ಥಗಿತ

RBI new Update On 2,000 Note: ಪ್ರಸ್ತುತ ದೇಶದಲ್ಲಿ ಭಾರತೀಯ ಕರೆನ್ಸಿಗಳಲ್ಲಿ 2000 ರೂ. ನೋಟಿಗೆ ಯಾವುದೇ ಮಾನ್ಯತೆ ಇಲ್ಲ. ಭಾರತೀಯ ಕರೆನ್ಸಿಯಿಂದ ,2000 ರೂ. ನೋಟನ್ನು ತೆಗೆದುಹಾಕಲಾಗಿದೆ. 2023 ಮೇ 29 ರಿಂದ ದೇಶದಲ್ಲಿ 2000 ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲಾಗಿತ್ತು.

ಇನ್ನು October 7 ರ ವರೆಗೆ ಜನರು ತಮ್ಮ ಬಳಿ ಇರುವ 2,000 ರೂಪಾಯಿ ನೋಟುಗಳನ್ನು ಬ್ಯಾಂಕ್ ನಲ್ಲಿ ಬದಲಾಯಿಸಿಕೊಳ್ಳುತ್ತಿದ್ದರು. ಆದರೆ October 8 ರಿಂದ ಬ್ಯಾಂಕ್ ನಲ್ಲಿ 2,000 ರೂಪಾಯಿ ನೋಟುಗಳನ್ನು ಸ್ವೀಕರಿಸುತ್ತಿಲ್ಲ.

ವಾಣಿಜ್ಯ ಬ್ಯಾಂಕ್‌ಗಳು 2,000 ರೂಪಾಯಿ ನೋಟುಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದೆ. ಬ್ಯಾಂಕುಗಳ ಬದಲಾಗಿ 2,000 ನೋಟುಗಳನ್ನು ಇಲ್ಲಿ ವಿನಿಮಯ ಮಾಡಿಕೊಳ್ಳಲಾಗುತ್ತಿತ್ತು. ಆದರೆ ಇದೀಗ ಈ ದಿನದಂದು 2,000 ರೂ. ನೋಟಿನ ವಿನಿಮಯ ಸೌಲಭ್ಯ ಲಭ್ಯವಿರುವುದಿಲ್ಲ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ.

RBI new Update On 2000 Note
Image Credit: Business Today

RBI ಮಹತ್ವದ ಘೋಷಣೆ
ಬ್ಯಾಂಕ್‌ಗಳು 2,000 ರೂಪಾಯಿ ನೋಟುಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದ ಕಾರಣ RBI ಕಚೇರಿಯಲ್ಲಿ 2,000 ರೂಪಾಯಿ ನೋಟುಗಳ ವಿನಿಮಯಕ್ಕೆ ಅವಕಾಶವನ್ನು ನೀಡಲಾಗಿದೆ. Reserve Bank Of India (RBI) 19 ಕಚೇರಿಗಳಲ್ಲಿ 2,000 ರೂ. ನೋಟುಗಳನ್ನು ಬದಲಿಸಿಕೊಳ್ಳಬಹುದುದಾಗಿದೆ. ವ್ಯಕ್ತಿಗಳು ಅಥವಾ ಸಂಸ್ಥೆಗಳು 19 RBI ಕಚೇರಿಗಳಲ್ಲಿ ಒಂದು ಬಾರಿಗೆ 20,000 ರೂ.ಗಳ ಮಿತಿಯ ವರೆಗೆ 2,000 ರೂ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು. ಆದರೆ ಈ ದಿನದಂದು ನೋಟು ವಿನಿಮಯವನ್ನು ಸ್ಥಗಿತಗೊಳಿಸಲಾಗುವುದು ಎಂದು RBI ಮಾಹಿತಿ ನೀಡಿದೆ.

ಇಂದಿನಿಂದ 2000 ರೂ. ನೋಟಿನ ವಿನಿಮಯ ಅಥವಾ ಠೇವಣಿ ಸ್ಥಗಿತ
ಏಪ್ರಿಲ್ 1 2024 ರ ಸೋಮವಾರದಂದು ದೇಶದಾದ್ಯಂತ ತನ್ನ 19 ವಿತರಣಾ ಕಚೇರಿಗಳಲ್ಲಿ 2,000 ರೂ. ನೋಟುಗಳ ವಿನಿಮಯ ಅಥವಾ ಠೇವಣಿ ಸಾಧ್ಯವಿಲ್ಲ ಎಂದು RBI ಸ್ಪಷ್ಟಪಡಿಸಿದೆ. ಖಾತೆಗಳ ವಾರ್ಷಿಕ ಮುಚ್ಚಿವೆಕೆಗೆ ಸಂಬಂಧಿಸಿದ ಕಾರ್ಯಾಚರಣೆಗಾಗಿ ಈ ತಾತ್ಕಾಲಿಕ ನಿಲುಗಡೆ ಮಾಡಲಾಗಿದೆ.

Join Nadunudi News WhatsApp Group

ಖಾತೆಗಳ ವಾರ್ಷಿಕ ಮುಚ್ಚಿವೆಕೆಗೆ ಸಂಬಂಧಿಸಿದ ಕಾರ್ಯಾಚರಣೆಗಳಿಂದಾಗಿ RBI ನ 19 ವಿತರಣಾ ಕಚೇರಿಗಳಲ್ಲಿ 2,000 ರೂ. ನೋಟುಗಳ ವಿನಿಮಯ ಅಥವಾ ಠೇವಣಿ ಸಾಧ್ಯವಿಲ್ಲ ಎನ್ನದು RBI ಘೋಷಿಸಿದೆ. ಇನ್ನು ಏಪ್ರಿಲ್ 2 ರಿಂದ ಮತ್ತೆ ನೋಟುಗಳ ವಿನಿಮಯ ಅಥವಾ ಠೇವಣಿಗೆ ಅವಕಾಶವಿದೆ. ಹಣಕಾಸು ವರ್ಷದ ಮೊದಲ ದಿನ ಮಾತ್ರ ಈ ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ.

RBI About 2000 Note Exchange
Image Credit: India Today

Join Nadunudi News WhatsApp Group