1000 Rs: ಮತ್ತೆ ಜಾರಿಗೆ ಬರುತ್ತಾ ಹಳೆಯ 1000 ರೂ ನೋಟ್, ಎಲ್ಲಾ ಪ್ರಶ್ನೆಗೆ ಉತ್ತರ ನೀಡಿದ RBI .

RBI has clarified on re-introduction of old Rs 1000 notes.

Shaktikanta Das about 1000 Rs Note: ಇದೀಗ ದೇಶದಲ್ಲೆಡೆ 2,000 ಮುಖಬೆಲೆಯ ನೋಟ್ ಬ್ಯಾನ್  (2000 Note Ban) ಆಗುವ ವಿಚಾರಗಳು ಸಾಕಷ್ಟು ವೈರಲ್ ಆಗುತ್ತಿದೆ. ಈ ಹಿಂದೆ ಮೋದಿ ಸರ್ಕಾರ 2016 ರಲ್ಲಿ ನೋಟ್ ಬ್ಯಾನ್ ಮಾಡಿದ್ದು ಈ ವೇಳೆ ಹೊಸ 2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತಂದಿದ್ದರು.

ಇದೀಗ ಮತ್ತೊಮೆ ನೋಟ್ ಬ್ಯಾನ್ ಅನ್ನು ಆರ್ ಬಿಐ ಘೋಷಣೆ ಹೊರಡಿಸಿದೆ. ಇನ್ನು 2,000 ರೂ. ನೋಟಿನ ಬದಲಾಗಿ 1,000 ಮುಖಬೆಲೆಯ ನೋಟುಗಳು ಚಲಾವಣೆಗೆ ಬರುವ ಬಗ್ಗೆ ಮಾಹಿತಿ ಕೇಳಿಬಂದಿದೆ.

1000 rupees notes will come into circulation
Image Credit: wikipedia

ಚಲಾವಣೆಗೆ ಬರಲಿದೆ 1000 ರೂ.ನೋಟುಗಳು
2,000 ನೋಟುಗಳು ಬ್ಯಾನ್ ಆದ ಬಳಿಕ ಹೊಸ ನೋಟುಗಳು ಮುದ್ರಣವಾಗಲಿದೆ. 2016 ರಲ್ಲಿ 5,00 ಹಾಗೂ 1,000 ಮುಖಬೆಲೆಯ ನೋಟುಗಳು ಬ್ಯಾನ್ ಆಗಿದ್ದವು. ಈ ವೇಳೆ ಕೇವಲ 5,00 ರ ಹೊಸ ನೋಟುಗಳು ಚಲಾವಣೆಗೆ ಬಂದಿದ್ದವು ಹೊಸ 1,000 ನೋಟುಗಳ ಮುದ್ರಣದ ಬಗ್ಗೆ ಆರ್ ಬಿಐ ನಿರ್ಧರಿಸಿಲ್ಲ. ಆದರೆ ಈ ಬಾರಿ ಹೊಸ 1,000 ಮುಖಬೆಲೆಯ ನೋಟುಗಳ ಚಲಾವಣೆಯ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ.

ಇನ್ನು 2,000 ನೋಟುಗಳ ಬ್ಯಾನ್ ಆದ ಬಳಿಕ 1,000 ನೋಟುಗಳ ಮುದ್ರಣ ಆರಂಭವಾಗಲಿದೆ ಹಾಗೂ 1,000 ಮುಖಬೆಲೆಯ ನೋಟುಗಳು ಚಲಾವಣೆಗೆ ಬರಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಸೋಶಿಯಲ್ ಮೀಡಿಯಾದಲ್ಲಿ 1,000 ಮುಖಬೆಲೆಯ ನೋಟಿನ ಬರುವಿಕೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ.ಇದೀಗ 1,000 ನೋಟು ಜಾರಿಗೊಳಿಸುವ ಬಗ್ಗೆ ಆರ್ ಬಿಐ ಮಾಹಿತಿ ನೀಡಿದೆ.

Information given by RBI Governor regarding the implementation of Rs 1,000 notes
Image Credit: cnbctv18

1,000 ರೂ.ನೋಟುಗಳು ಜಾರಿಗೆ ಬರುವ ಬಗ್ಗೆ ಆರ್ ಬಿಐ ಗವರ್ನರ್ ನೀಡಿದ ಮಾಹಿತಿ
ಸಾಕಷ್ಟು ಸಂಖ್ಯೆಯಲ್ಲಿ 500 ಮತ್ತು 100 ರೂ. ಮುಖಬೆಲೆಯ ನೋಟುಗಳು ಚಲವಾಣೆಯಲ್ಲಿದೆ. ಜನರ ಅಗತ್ಯತೆಗಳನ್ನು ಈ ನೋಟುಗಳೇ ಪೂರೈಸುತ್ತಿದೆ. ಹೀಗಾಗಿ ಹೆಚ್ಚು ಮೌಲ್ಯದ ಕರೆನ್ಸಿಯ ಅಗತ್ಯ ಇಲ್ಲ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಮಾಹಿತಿ ನೀಡಿದ್ದಾರೆ. ಚಲಾವಣೆಯಲ್ಲಿರುವ ನೋಟುಗಳೇ ಸಾಕು 1,000 ಹಾಗು 2,000 ನೋಟುಗಳ ಅಗತ್ಯ ಇಲ್ಲ ಎಂದು ಆರ್ ಬಿಐ ಗವರ್ನರ್ ಸ್ಪಷ್ಟಪಡಿಸಿದ್ದಾರೆ.

Join Nadunudi News WhatsApp Group

Join Nadunudi News WhatsApp Group