1000 Rupees: ಮತ್ತೆ ಜಾರಿಗೆ ಬರಲಿದೆ 1000 ರೂಪಾಯಿಯ ನೋಟುಗಳು, ಸ್ಪಷ್ಟನೆ ನೀಡಿದ ಶಕ್ತಿಕಾಂತ್ ದಾಸ್.

1000 ರೂಪಾಯಿ ನೋಟುಗಳು ಜಾರಿಗೆ ಬರುವುದರ ಬಗ್ಗೆ RBI ಸ್ಪಷ್ಟನೆ ನೀಡಿದೆ.

RBI About 1000 Rupees Note: ಇದೀಗ ದೇಶದಲ್ಲೆಡೆ 2,000 ಮುಖಬೆಲೆಯ ನೋಟ್ ಬ್ಯಾನ್  (2000 Note Ban) ಆಗುವ ವಿಚಾರಗಳು ಸಾಕಷ್ಟು ವೈರಲ್ ಆಗುತ್ತಿದೆ. ಈ ಹಿಂದೆ ಮೋದಿ ಸರ್ಕಾರ 2016 ರಲ್ಲಿ ನೋಟ್ ಬ್ಯಾನ್ ಮಾಡಿದ್ದು ಈ ವೇಳೆ ಹೊಸ 2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತಂದಿದ್ದರು.

ಇದೀಗ ಮತ್ತೊಮೆ ನೋಟ್ ಬ್ಯಾನ್ ಆಗುವ ಬಗ್ಗೆ ಆರ್ ಬಿಐ (RBI) ಘೋಷಣೆ ಹೊರಡಿಸಿದೆ. ಇನ್ನು 2,000 ರೂ. ನೋಟಿನ ಬದಲಾಗಿ 1,000 ಮುಖಬೆಲೆಯ ನೋಟುಗಳು ಚಲಾವಣೆಗೆ ಬರುವ ಬಗ್ಗೆ ಮಾಹಿತಿ ಕೇಳಿಬಂದಿದೆ.  

RBI has clarified about the introduction of Rs 1000 notes.
Image Credit: hindustantimes

2000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದ RBI
ಭಾರತೀಯ ರಿಸರ್ವ್ ಬ್ಯಾಂಕ್ 2000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದಿತ್ತು. ಇದರ ಬೆನ್ನಲ್ಲೇ 1,000 ರೂಪಾಯಿ ನೋಟುಗಳು ಮತ್ತೆ ಬರುತ್ತವೆ ಎಂಬ ಸುದ್ದಿ ಹರಿದಾಡಿತ್ತು. ಈ ಬಗ್ಗೆ ಆರ್ ಬಿ ಐ ಗವರ್ನರ್ ಶಕ್ತಿಕಾಂತ್ ದಾಸ್ (Shaktikanta Das) ಪ್ರತಿಕ್ರಿಯಿಸಿದ್ದಾರೆ. ನೋಟು ಪರಿಚಯಿಸುವ ಯಾವುದೇ ಉದ್ದೇಶ ಇಲ್ಲ. ಈ ಬಗೆಗಿನ ವರದಿಗಳು ಊಹಾತ್ಮಕ ಎಂದು ಹೇಳಿದ್ದಾರೆ.

Shaktikanta Das clarified about the re-circulation of 1000 rupees
Image Credit: wikipedia

1000 ರೂಪಾಯಿ ಮತ್ತೆ ಚಲಾವಣೆಗೆ ಬರುತ್ತಾ ಎಂಬುದರ ಬಗ್ಗೆ ಸ್ಪಷ್ಟನೆ ನೀಡಿದ ಶಕ್ತಿಕಾಂತ್ ದಾಸ್
2000 ರೂಪಾಯಿ ಬೆಲೆಯ ನೋಟು ಹಿಂಪಡೆದ ನಿರ್ಧಾರದಿಂದ ದೇಶದ ಆರ್ಥಿಕತೆಯ ಮೇಲೆ ಅತ್ಯಂತ ಕನಿಷ್ಠ ಪರಿಣಾಮ ಬೀರುತ್ತದೆ. ಭಾರತೀಯ ಕರೆನ್ಸಿ ನಿರ್ವಹಣಾ ವ್ಯವಸ್ಥೆ ತುಂಬಾ ದೃಢವಾಗಿದೆ. ಡಾಲರ್ ವಿರುದ್ಧ ನಮ್ಮ ವಿನಿಮಯ ದರ ಬಲಿಷ್ಠವಾಗಿದೆ. ಚಲಾವಣೆಯಲ್ಲಿರುವ ನೋಟುಗಳಲ್ಲಿ ಕೇವಲ ಶೇಕಡಾ 10 ಕ್ಕಿಂತ ಹೆಚ್ಚು ಮತ್ತು ವಹಿವಾಟುಗಳಲ್ಲಿ ಅವುಗಳನ್ನು ವ್ಯಾಪಕವಾಗಿ ಬಳಸಲಾಗಿಲ್ಲ ಎಂದು ಹೇಳಿದರು.

ಒಂದು ಸಾವಿರ ರೂಪಾಯಿ ಮುಖ ಬೆಲೆಯ ನೋಟಿನ ಮರು ಪರಿಚಯ ಇಲ್ಲ ಅಂತೆಯೇ ಹೆಚ್ಚಿನ ಮೌಲ್ಯದ ನೋಟು ಚಲಾವಣೆ ಹಿಂತೆಗೆದುಕೊಳ್ಳುವ ನಿರ್ಧಾರ ಆರ್ ಬಿಐ ನೀತಿಯ ಭಾಗವಾಗಿದ್ದು, 2016ರ ನೋಟು ಅಮಾನ್ಯೀಕರಣದ ನಂತರ 1 ಸಾವಿರ ಬೆಲೆಯ ನೋಟು ಮರು ಪರಿಚಯ ಮಾಡುವ ಉದ್ದೇಶ ಇಲ್ಲ ಎಂದರು.

Join Nadunudi News WhatsApp Group

Join Nadunudi News WhatsApp Group