Income Tax: ಸ್ವಂತ ಆಸ್ತಿ ಹೊಂದಿರುವವರಿಗೆ ಹೊಸ ತೆರಿಗೆ ನಿಯಮ, ಕಟ್ಟಬೇಕು 10 ಲಕ್ಷದ ತನಕ ದಂಡ.

ಆಸ್ತಿ ತೆರಿಗೆ ಮೇಲೆ ಆದಾಯ ಇಲಾಖೆಯ ಹೊಸ ಆದೇಶ.

Income Tax Return: ಆದಾಯ ತೆರಿಗೆಗೆ ಸಂಬಂಧಪಟ್ಟಂತೆ ಹೊಸ ಹೊಸ ಅಪ್ಡೇಟ್ ಗಳು ಹೊರ ಬೀಳುತ್ತಿದೆ. ಇದೀಗ ಆದಾಯ ತೆರಿಗೆ ರಿಟರ್ನ್ ನಡೆಯುತ್ತಿದೆ. ಆದಾಯ ತೆರಿಗೆ ರಿಟರ್ನ್ ಅನ್ನು ನೀವು ಇನ್ನು ಸಲ್ಲಿಸದಿದ್ದರೆ ನಿಮಗೆ 11 ದಿನಗಳ ಸಮಯವಿದೆ.

ಜುಲೈ 31 ರ ವರೆಗೆ ನಿಮ್ಮ ತೆರಿಗೆ ರಿಟರ್ನ್ ಅನ್ನು ನೀವು ಸಲ್ಲಿಸದಿದ್ದರೆ ನೀವು ಭಾರಿ ದಂಡವನ್ನು ಪಾವತಿಸಬೇಕಾಗುತ್ತದೆ. 2023 -24 ರ ಮೌಲ್ಯಮಾಪನ ವರ್ಷಕ್ಕೆ ಜುಲೈ 11 ರವರೆಗೆ ಎರಡು ಕೋಟಿ ಆದಾಯ ತೆರಿಗೆ ರಿಟರ್ನ್ ಗಳನ್ನೂ ಸಲ್ಲಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಟ್ವಿಟ್ಟರ್ ನಲ್ಲಿ ಬಿಡುಗಡೆಮಾಡಿದ ಅಧಿಸೂಚನೆಯಲ್ಲಿ ತಿಳಿಸಿದೆ. ಕಳೆದ ವರ್ಷ ಜುಲೈ 20 ರವರೆಗೆ ಎರಡು ಕೋಟಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯಾಗಿತ್ತು.

Exemption in tax payment up to 12 lakhs
Image Credit: Outlookindia

12 ಲಕ್ಷದ ತನಕ ತೆರಿಗೆ ಪಾವತಿಯಲ್ಲಿ ವಿನಾಯಿತಿ
ಒಂದು ವೇಳೆ ಕಂಪನಿಯು ಯಾವ ಕಾರಣಕ್ಕೂ ನಿಮ್ಮ ತೆರಿಗೆಯನ್ನು ಕಡಿತಗೊಳಿಸದಿದ್ದರೆ, ITR ಅನ್ನು ಸಲ್ಲಿಸುವ ಮೂಲಕ ಕಡಿತಗೊಳಿಸಿದ ಹೆಚ್ಚುವರಿ ಹಣವನ್ನು ನೀವು ಹಿಂತಿರುಗಿಸಬಹುದು. 12 ಲಕ್ಷದ ಸಂಬಳದ ಆಧಾರದ ಮೇಲೆ ನೀವು ಹಳೆಯ ತೆರಿಗೆ ಪದ್ದತಿಯಲ್ಲಿ 30 ಪ್ರತಿಶತ ತೆರಿಗೆಯ ಅಡಿಯಲ್ಲಿ ಬರುತ್ತಿರಿ. ವಾಸ್ತವಾಗಿ 10 ಲಕ್ಷಕ್ಕಿಂತ ಹೆಚ್ಚಿನ ವಾರ್ಷಿಕ ಆದಾಯದ ಮೇಲೆ 30 ಪ್ರತಿಶತದಷ್ಟು ಹೊಣೆಗಾರಿಕೆ ಸಿಗಲಿದೆ.

12 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ವಾರ್ಷಿಕ ಆದಾಯ ಹೊಂದಿರುವವರು ಹಳೆಯ ತೆರಿಗೆ ಪದ್ದತಿಯನ್ನು ಆರಿಸಿಕೊಳ್ಳುವುದು ಉತ್ತಮ. ಸಾಮಾನ್ಯವಾಗಿ 12 ಲಕ್ಷ ಸಂಬಳದಲ್ಲಿ ಎರಡು ಲಕ್ಷ ರೂಪಾಯಿಯನ್ನು ಭಾಗ ಬಿ ಅಥವಾ ಭಾಗ 2 ನಲ್ಲಿ ಇರಿಸಲಾಗುತ್ತದೆ. ಈ ಮೂಲಕ ನಿಮ್ಮ ತೆರಿಗೆಯ ಆದಾಯ 10 ಲಕ್ಷ ರೂ. ಗೆ ಇಳಿಯುತ್ತದೆ.

Exemption in tax payment up to 12 lakhs
Image Credit: Moneycontrol

ವಿದೇಶಿ ಆಸ್ತಿಗಳು
ಜನರು ತಮಗೆ ವಿದೇಶದ ಆಸ್ತಿ ಅಥವಾ ವಿದೇಶದಿಂದ ಬರುವ ಆಸ್ತಿಯ ವಿವರಗಳನ್ನ ಆದಾಯ ತೆರಿಗೆ ಕಟ್ಟುವ ಸಮಯದಲ್ಲಿ ಸಲ್ಲಿಸುವುದು ಅತೀ ಅಗತ್ಯ ಎಂದು ತೆರಿಗೆ ಇಲಾಖೆ ಪ್ರಸ್ತಾವನೆಯಲ್ಲಿ ತಿಳಿಸಿದೆ. ಇನ್ನು ಜನರು ಈ ಮಾಹಿತಿಗಳನ್ನ ಮುಚ್ಚಿಟ್ಟರೆ ಕಪ್ಪುಹಣ ಮತ್ತು ತೆರಿಗೆ ಕಾಯ್ದೆ ಅಡಿಯಲ್ಲಿ 10 ಲಕ್ಷದ ತನಕ ದಂಡವನ್ನ ಕೂಡ ವಿಧಿಸಲಾಗುತ್ತದೆ.

Join Nadunudi News WhatsApp Group

ಹಿಂದಿನ ವರ್ಷ ಆದಾಯ ಬಂದಿದ್ದು ಈ ವರ್ಷ ಆದಾಯ ಬಂದಿಲ್ಲವಾದರೂ ಕೂಡ ಅದನ್ನ ತೋರಿಸುವುದು ಅಗತ್ಯ. ಈ ಮಾಹಿತಿಯನ್ನು ಯಾವುದೇ ಇತರ ವೇಳಾಪಟ್ಟಿಯಲ್ಲಿ ನಮೂದಿಸಲಾಗಿದ್ದರು ವಿದೇಶಿ ಆಸ್ತಿಯು ವಿದೇಶಿ ಅಥವಾ ದೇಶಿಯ ಆದಾಯದ ಬಹಿರಂಗಪಡಿಸಿದ ಆದಾಯದ ಮೂಲಗಳಿಂದ ಹುಟ್ಟಿಕೊಂಡಿರುತ್ತದೆ.

Join Nadunudi News WhatsApp Group